ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ
ಅಶೋಕ ಶೆಟ್ಟರ ಬಾಗಲಕೋಟೆ: ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆ ಹಾಗೂ ವಿಪಕ್ಷ ಬಿಜೆಪಿಗೆ ಸವಾಲ್ ಆಗಿರುವ ಬಾಗಲಕೋಟೆ ಉಪ ಸಮರ ರಂಗೇರಿದೆ. ಎರಡು ಪಕ್ಷಗಳು ನಾಮಪತ್ರ ಸಲ್ಲಿಕೆ ವೇಳೆ ಅಬ್ಬರ ಪ್ರಚಾರಕ್ಕೆ ಚಾಲನೆ ನೀಡಿವೆ.
ಉಪ ಕದನದ ರಣರಂಗದಲ್ಲಿ ವಿಜಯಮಾಲೆ ಧರಿಸಲು ಎರಡು ಪಕ್ಷಗಳಿಂದ ಜಾತಿ ಸಮೀಕರಣದ ಲೆಕ್ಕಾಚಾರ ಬಲು ಜೋರಾಗಿಯೇ ನಡೆದಿದೆ. ಅಹಿಂದ ಅಸö ಮಾಡಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದ್ದರೆ ಮೇಲ್ವರ್ಗದ ಜೊತೆ ಹಿಂದ ಸಮುದಾಯವನ್ನು ಸೆಳೆಯಲು ಬಿಜೆಪಿ ಪ್ರತ್ಯಾಸö ಪ್ರಯೋಗಿಸಲು ಮುಂದಾಗಿದೆ.
ಈ ರಣಕಣದಲ್ಲಿ ಅಭಿವೃದ್ಧಿಯ ಮಾತುಗಳು ಮೇಲ್ನೋಟಕ್ಕಷ್ಟೆ ಸಿಮೀತವಾಗಿದ್ದು, ಅಂತರಾಳದಲ್ಲಿ ಜಾತಿ ಸಮೀಕರಣವೇ ಪ್ರಮುಖವಾಗಿದ್ದು, ಮತದಾರರ ಅಽಕವಾಗಿರುವ ಸಮುದಾಯಗಳಿಂದ ಹಿಡಿದು ಕಡಿಮೆ ಮತದಾರರು ಇರುವ ಸಣ್ಣಪುಟ್ಟ ಸಮುದಾಯಗಳ ಮೇಲೆ ಎರಡು ಪಕ್ಷಗಳು ಕಣ್ಣಿಟ್ಟು ಕುಳಿತಿದ್ದು, ಆಯಾ ಸಮುದಾಯಗಳ ಪ್ರಭಾವಿ ಮುಖಂಡರೇ ಕೈ-ಕಮಲ ಪಕ್ಷಗಳು ಟಾರ್ಗೆಟ್ ಮಾಡಿಕೊಂಡಿವೆ.
ಮಾ. ೨೬ ರ ಬಳಿಕ ಮತ್ತೊಂದು ಆಯಾಮ :
ನಾಮಪತ್ರ ಹಿಂಪಡೆಯುವ ಮಾ. ೨೬ರ ಮುಗಿದ ಬಳಿಕವೇ ಉಪ ಸಮರದ ಅಖಾಡ ಮತ್ತೊಂದು ಆಯಾಮಕ್ಕೆ ತಿರುಗುವ ಲಕ್ಷಣಗಳು ಇವೆ. ಸಾರ್ವತ್ರಿಕ ಚುನಾವಣೆಯಂತೆ ಅಬ್ಬರದ ಪ್ರಚಾರ, ಬೃಹತ್ ಸಮಾವೇಶಗಳನ್ನು ಏರ್ಪಡಿಸುವುದು ಸಮಯ ನಷ್ಟವಾಗುತ್ತದೆ. ಕಾರಣ ಕಡಿಮೆ ಅವಽ ಇರುವುದರಿಂದ ಹಳ್ಳಿ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಮತಬೇಟೆಗೆ ಹೆಚ್ಚು ಆದ್ಯತೆ ನೀಡುವ ಬಗ್ಗೆ ಪಕ್ಷಗಳು ಚಿಂತನೆ ನಡೆಸಿವೆ.
ಸಮುದಾಯ ಮುಖಂಡರಿಗೆ ಹೆಚ್ಚಿನ ಬೇಡಿಕೆ:
ಜಾತಿ ಲೆಕ್ಕಾಚಾರವೇ ಪ್ರಮುಖವಾಗಿದ್ದರಿಂದ ಇದೀಗ ಸಮುದಾಯಗಳ ಪ್ರಭಾವಿ ಮುಖಂಡರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಇರುವ ಎಲ್ಲ ಸಮುದಾಯಗಳನ್ನು ಆಧರಿಸಿಕೊಂಡು ತಮ್ಮ ತಮ್ಮ ಪಕ್ಷಗಳಲ್ಲಿ ಇರುವ ಆಯಾ ಸಮುದಾಯದ ಮುಖಂಡರನ್ನು ಕ್ಷೇತ್ರಕ್ಕೆ ಆವ್ಹಾನಿಸಲು ರಾಷ್ಟಿçÃಯ ಪಕ್ಷಗಳು ಮುಂದಾಗಿವೆ.
ಈಗಾಗಲೇ ಅನೇಕ ಸಮುದಾಯಗಳ ಮುಖಂಡರನ್ನು ಕರೆದು ಮಾತನಾಡಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಪಕ್ಷಗಳು, ಗೆಲ್ಲಲು ಅಗತ್ಯ ಇರುವ ಎಲ್ಲ ಪಟ್ಟುಗಳನ್ನು ಪ್ರಯೋಗ ಮಾಡಲು ಸಿದ್ಧತೆ ಮಾಡಿಕೊಂಡಿವೆ. ಪ್ರತ್ಯೇಕವಾಗಿ ಕರೆಯಿಸಿ, ಅವರ ಬೇಡಿಕೆಗಳನ್ನು ಆಲಿಸುವುದು, ಅಗತ್ಯತೆಗಳನ್ನು ಪೂರೈಸುವ ಭರವಸೆ ನೀಡಿ ತಮ್ಮ ಕಡೆಗೆ ಸೆಳೆಯುವ ಕೆಲಸ ಶುರುವಾಗಿದೆ.
ನಗರದ ಮೇಲೆ ಕೈ ಚಿತ್ತ: ಗ್ರಾಮೀಣದ ಕಡೆ ಕಮಲದ ನೋಟ :
ಹಿಂದಿನ ಚುನಾವಣೆಗಳ -Àಲಿತಾಂಶಗಳನ್ನು ತೂಗಿ ಅಳೆದು, ಯಾವ ಭಾಗದಲ್ಲಿ ತಮಗೆ ಹೆಚ್ಚಿನ ಒಲುವು ಇದೆ, ಯಾವ ಕಡೆಗೆ ಹಿನ್ನೆಡೆ ಆಗಿದೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು, ಹಿನ್ನೆಡೆ ಇರುವ ಭಾಗದಲ್ಲಿ ಮತದೋಚಲು ತಂತ್ರಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಬಾಗಲಕೋಟೆ ನಗರ ಪ್ರದೇಶವೇ ಚಾಲೆಂಜ್ ಆಗಿರುವುದರಿಂದ ಇಲ್ಲಿ ಬಿಜೆಪಿ ಮತಬುಟ್ಟೆಗೆ ಕೈಹಾಕಲು ಸಾಕಷ್ಟು ಪ್ಲಾನ್ ಎ ಮತ್ತು ಬಿ ಗಳನ್ನು ಮಾಡಿಕೊಂಡಿದೆ. ಹಾಗೆಯೇ ಬಿಜೆಪಿ ಸಹ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮತಬ್ಯಾಂಕ್ ಹೆಚ್ಚಿಸಿಕೊಂಡರೆ ಮಾತ್ರ ಈ ಚುನಾವಣೆಯಲ್ಲಿ ಗೆಲುವಿನ ದಡ ಮುಟ್ಟಲು ಸಾಧ್ಯ ಎನ್ನುವುದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ತಯಾರಿ ನಡೆಸಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಾಂಪ್ರದಾಯಿಕ ಮತಬ್ಯಾಂಕ್ ಇದ್ದು, ಅದನ್ನು ಹೊರತುಪಡಿಸಿ ಗೆಲ್ಲಲು ಬೇಕಾಗಿರುವ ಮೌನ ಮತದಾರರನ್ನು ಸೆಳೆಯಲು ತೀವ್ರ ಕಸರತ್ತು ನಡೆಸಿವೆ. ೨.೫೯ ಲಕ್ಷ ಮತದಾರರು ಇರುವ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.
ಪಕ್ಷೇತರರ ಮನವೊಲಿಕೆ ಪ್ರಯೋಗ :
ಇದೀಗ ಕಣದಲ್ಲಿ ೧೪ ಜನರು ಉಳಿದುಕೊಂಡಿದ್ದಾರೆ. ಪ್ರತಿಯೊಂದು ಮತ ಮುಖ್ಯವಾಗಿರುವುದರಿಂದ ಅಖಾಡದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳ ಪೈಕಿ ಯಾರು ತಮಗೆ ಮಗ್ಗಲು ಮುಳ್ಳು ಆಗಬಹುದು ಎಂದು ಗುರುತಿಸಿ ಅವರು ನಾಮಪತ್ರ ಹಿಂಪಡೆಯಲು ಒತ್ತಡ ಹಾಕುವ ಕೆಲಸವನ್ನು ಇಂದು ಮತ್ತು ನಾಳೆ ಮಾಡಲಾಗುತ್ತಿದೆ. ಈ ಬಗ್ಗೆ ಪಟ್ಟಿಯನ್ನು ಸಹ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಮುಖಂಡರೊಬ್ಬರು ಹೇಳಿದರು.
ಗೆಲುವಿಗೆ ಕೈ-ಕಮಲಕ್ಕೆ ಸಮಾನ ಅವಕಾಶ :
ಇದು ಉಪ ಚುನಾವಣೆ ಆಗಿದ್ದರೂ ಸಹ ಆಡಳಿತ ಕಾಂಗ್ರೆಸ್‌ನAತೆಯೇ ವಿಪಕ್ಷ ಬಿಜೆಪಿಗೂ ಗೆಲುವಿಗೆ ಸಾಕಷ್ಟು ಅವಕಾಶಗಳು ಇವೆ. ಡಾವಣಗೇರಿ ಮ್ತತು ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಾಗಲಕೋಟೆಯಲ್ಲಿ ಗೆಲುವಿಗೆ ಸಾಕಷ್ಟು ಅವಕಾಶಗಳು ಇದ್ದು, ಪಕ್ಷದ ಮುಖಂಡರು ಹೆಚ್ಚು ಸಕ್ರಿಯರಾಗಲಿದ್ದಾರೆ. ಇದು ಕಾಂಗ್ರೆಸ್ ಮುಖಂಡರ ಗಮನಕ್ಕೂ ಇದ್ದು, ಶತಾಯಗತಾಯ ಕ್ಷೇತ್ರ ಉಳಿಸಿಕೊಳ್ಳಲು ತನ್ನೆಲ್ಲ ಶಕ್ತಿಯನ್ನು ಬಳಕೆ ಮಾಡಲು ಸಜ್ಜಾಗಿದೆ.
ಲಗ್ಗೆ ಹಾಕಲಿದ್ದಾರೆ ಘಟಾನುಘಟಿಗಳು:
ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕನಿಷ್ಠ ನಾಲ್ಕು ದಿನಗಳಾದರೂ ಕ್ಷೇತ್ರದಲ್ಲಿ ಮಿಂಚಿನ ಮತಯಾಚನೆ ನಡೆಸಲು ರೂಪರೇಷೆ ಸಿದ್ದಪಡಿಸಲಾಗುತ್ತಿದೆ. ಹಾಗೆಯೇ ಅಹಿಂದ ಮತಗಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಹೆಚ್ಚಿನ ಹೊಣೆ ನೀಡಬಹುದು. ಇದರ ಜೊತೆಗೆ ಕನಿಷ್ಠ ೧೫ಕ್ಕೂ ಹೆಚ್ಚಿನ ಸಚಿವರು, ೩೦ಕ್ಕೂ ಅಽಕ ಶಾಸಕರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಆಯಾ ಸಮುದಾಯಗಳ ಮುಖಂಡರು ಮತಬೇಟೆ ನಡೆಸಲಿದ್ದಾರೆ. ಹಾಗೆಯೇ ಇನ್ನು ಕೆಲ ಮುಖಂಡರು ಪ್ರಚಾರಕ್ಕೆ ಬಂದು ಹೋಗಲಿದ್ದಾರೆ.
ಬಿಜೆಪಿಯಲ್ಲೂ ಸಹ ಜಾತಿವಾರು ಮತಬೇಟೆಗೆ ದೊಡ್ಡಪಡೆಯೇ ಕ್ಷೇತ್ರಕ್ಕೆ ಲಗ್ಗೆಹಾಕಲಿದೆ. ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಜಗದೀಶ ಶೆಟ್ಟರ, ಪ್ರಲ್ಹಾದ ಜೋಶಿ, ಬಿ.ಶ್ರೀರಾಮುಲು, ಎನ್.ಮಹೇಶ, ಪಿ.ರಾಜೀವ, ಎಂ.ಡಿ.ಲಕ್ಷಿ÷್ಮÃನಾರಾಯಣ ಮತ್ತಿತರರು ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಠಿಕಾಣಿ ಹೂಡಲು ಹಾಗೂ ಜಿಲ್ಲೆಯ ಎಲ್ಲ ಮುಖಂಡರು ಟೊಂಕಕಟ್ಟಿ ನಿಲ್ಲಲಿದ್ದಾರೆ. ಬೂತಮಟ್ಟದಲ್ಲಿ ವಿಸ್ತಾರಕರು ಈಗಾಗಲೇ ತಮ್ಮ ಕೆಲಸವನ್ನು ಶುರು ಮಾಡಿಕೊಂಡಿದ್ದಾರೆ. ಹೀಗಾಗಿ ಬಾಗಲಕೋಟೆ ಉಪ ಸಮರ ದಿನದಿಂದ ದಿನಕ್ಕೆ ಚಿತ್ರಣವೇ ಬದಲಾಗುತ್ತ ಹೋಗುವುದರಲ್ಲಿ ಎರಡು ಮಾತಿಲ್ಲ.