ಬೀಳಗಿ ತಾಲೂಕಿನ ಚಿಕ್ಕಸಂಗಮಕ್ಕೆ ಶಾಸಕ ಜೆ.ಟಿ. ಪಾಟೀಲ ಭೇಟಿ ನೀಡಿ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಸಂಗಪ್ಪ, ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಇತರ ಅಧಿಕಾರಿಗಳಿದ್ದರು. 
ಬಾಗಲಕೋಟೆ

ಚಿಕ್ಕಸಂಗಮ ಪ್ರವಾಸಿತಾಣವಾಗಿಸಲು ಬದ್ಧ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಟಿ. ಪಾಟೀಲ ಭರವಸೆ
  • ಜಿಲ್ಲಾಧಿಕಾರಿ, ಸಿಇಒ, ಅಧಿಕಾರಿಗಳು ಭೇಟಿ
  • ದೇವಸ್ಥಾನದಲ್ಲಿರುವ ರಥವನ್ನು ಸುಸಜ್ಜಿತಗೊಳಿಸಲು ಹಾಗೂ ಚಿಕ್ಕ ಸಂಗಮನಾಥ ದೇವಾಲಯದ ನೂತನ ಭವ್ಯ ರಥ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಬಾಗಲಕೋಟೆ: ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿರುವ ಐತಿಹಾಸಿಕ ಸಂಗಮನಾಥ ದೇವಸ್ಥಾನಕ್ಕೆ ಭಾನುವಾರ ಶಾಸಕ ಜೆ.ಟಿ. ಪಾಟೀಲ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಲ್ಲಿರುವ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು.
ದೇವಸ್ಥಾನದ ಆವರಣದಲ್ಲಿ ಪಿವರ್ಸ್ ಹಾಕುವುದು, ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಹೊಸದಾಗಿ ಸೂರ್ಯ ದೇವರ ಮೂರ್ತಿ, ಪೂರ್ವ ಚಿಕ್ಕ ಸಂಗಮನಾಥನ ಸನ್ನಿಧಾನದಲ್ಲಿದ್ದ ಆಂಜನೇಯ ದೇವರ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವಸ್ಥಾನದಲ್ಲಿರುವ ರಥವನ್ನು ಸುಸಜ್ಜಿತಗೊಳಿಸಲು ಹಾಗೂ ಚಿಕ್ಕ ಸಂಗಮನಾಥ ದೇವಾಲಯದ ನೂತನ ಭವ್ಯ ರಥ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನ್ನ ದಾಸೋಹ ವ್ಯವಸ್ಥೆಯನ್ನು ದೇವಸ್ಥಾನ ವತಿಯಿಂದ ಏರ್ಪಡಿಸಲು ಹಾಗೂ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮ ಪ್ರದೇಶದ ನೈಸರ್ಗಿಕ ಸೌಂದರ್ಯ, ದಟ್ಟವಾದ ಹಸಿರಿನ ಬೆಲ್ಟ್ ಹಾಗೂ ಪಕ್ಷಿಧಾಮವಾಗಿ ಅಭಿವೃದ್ಧಿಪಡಿಸಬೇಕಿದೆ. ದೇಶ ವಿದೇಶಗಳಿಂದ ಹಕ್ಕಿಗಳು ಬರುತ್ತಿದ್ದು, ಪ್ರವಾಸಿಗರ ಆಕರ್ಷಣೀಯ ಸ್ಥಳವನ್ನಾಗಿಸಲು ಈ ಮೇಲಿನ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಅನುಮೋದನೆಗೆ ಸಲ್ಲಿಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮತ್ತಿತರರು ಇದ್ದರು.