ಹುನಗುಂದ ನಗರದಲ್ಲಿ ತಹಸೀಲ್ದಾರ ಕಚೇರಿಯ ಎದುರು ಇರುವ ಅವೈಜ್ಞಾನಿಕ ಸ್ಪೀಡ್ ಬ್ರೇಕರ್. 
ಬಾಗಲಕೋಟೆ

ಅವೈಜ್ಞಾನಿಕ ರಸ್ತೆ ಉಬ್ಬು ತೆರವುಗೊಳಿಸಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಂದ ಕಳಕಳಿಯ ಮನವಿ
  • ವಾಹನ ಚಾಲಕರಿಗೆ ಕಿರಿಕಿರಿ
ಚಂದ್ರು ಗಂಗೂರ ಹುನಗುಂದ
ನಗರದ ರಸ್ತೆಗಳಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ಉಂಟುಮಾಡುವ ಸ್ಥಿತಿ ನಿರ್ಮಾಣವಾಗಿದೆ.
ತಹಸೀಲ್ದಾರ್‌ ಕಚೇರಿ ಎದುರು ಹಾಯ್ದು ಹೋಗಿರುವ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿನ ಚಿತ್ತವಾಡಗಿ ಕ್ರಾಸ್ ನಿಂದ ತಹಸೀಲ್ದಾರ್‌ ಆಫೀಸ್, ಹೆಸ್ಕಾಂ ಕಚೇರಿ ವರೆಗೆ ಇರುವ ರಸ್ತೆಗಳಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳನ್ನು ಸಂಚಾರ ನಿಯಮಗಳಿಗೆ ವಿರುದ್ಧವಾಗಿ ಹಾಕಲಾಗಿದೆ.
ರಸ್ತೆ ಸಂಚಾರ ನಿಯಮಾವಳಿಯ ಪ್ರಕಾರ ಸ್ಪೀಡ್ ಬ್ರೇಕರ್‌ಗಳಿದ್ದಲ್ಲಿ ಸೂಚನಾ ಫಲಕ ಇರಬೇಕು. ಅದಕ್ಕೆ ಹಂಪ್ಸ್ಗಳಿಗೆ ಬಣ್ಣದ ಪಟ್ಟಿ ಹಾಕಬೇಕು, ಡೆಂಜರ್ ಲೈಟ್ ಅಥವಾ ರೇಡಿಯಂ ಅಳವಡಿಸಬೇಕು. ಆದರೆ ಇಲ್ಲಿ ಯಾವುದೇ ಸೂಚನಾ ಫಲಕ ಇರದ ಕಾರಣ ಅಪಘಾತಗಳು ನಿತ್ಯ ಹೆಚ್ಚುತ್ತಿದೆ.
ಈ ರಸ್ತೆಯಲ್ಲಿ ನಿತ್ಯ ಬೇರೆ ರಾಜ್ಯ-ಜಿಲ್ಲೆಗಳಿಂದ ನೂರಾರು ವಾಹನಗಳು ಹಗಲು -ರಾತ್ರಿ ಎನ್ನದೆ ವಾಹನ ಸಂಚರಿಸುತ್ತವೆ. ಇಲ್ಲಿ ಸ್ಪೀಡ್ ಬ್ರೇಕ್ ಯಾವುದು ತಿಳಿಯದೇ ಜೋರಾಗಿ ಸಂಚಾರಿಸಿ ಅಪಘಾತಗಳು ಕಳೆದ ಎರಡು ವರ್ಷದಿಂದ ಸಾಕಷ್ಟು ಅಪಘಾತವಾಗುತ್ತಿವೆ. ಸವಾರರು ನಿತ್ಯ ಜೀವಭಯದಲ್ಲಿ ಸಂಚರಿಸುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಓರ್ವ ಬೈಕ್ ಸವಾರ ಉರುಳಿ ಬಿದ್ದು ಸಾವು ನೋವುಗಳ ನಡುವೆ ಹೋರಾಡುತ್ತಿದ್ದಾರೆ. ಇದೇ ರೀತಿಯಾಗಿ ಮುಂದುವರಿಯದAತೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು. ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗೆ ತೆರವುಗೊಳಿಸಿ ಇಲ್ಲವಾದರೆ ಸೂಚನಾ ಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ವಾಹನ ಸವಾರರು ಅಗ್ರಹಿಸಿದ್ದಾರೆ.

ಸೂಚನಾ -ಫಲಕ ಅಳವಡಿಸಿ

ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಬೇಕಾಬಿಟ್ಟಿ ನಿರ್ಮಿಸಿರುವ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸ್ಪೀಡ್ ಬ್ರೇಕರ್ ಇರುವ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಬೇಕೆಂದು ವಾಹನ ಸವಾರರು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"

ಹುನಗುಂದ ಪಟ್ಟಣದಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ನಿಂದ ಬೈಕ್, ವಾಹನ ಸವಾರರು, ತುರ್ತು ಚಿಕಿತ್ಸಗೆ ಸಂಚರಿಸುವ ಅಂಬ್ಯುಲೆನ್ಸ್ ವಾಹನಗಳಲ್ಲಿ , ರೋಗಿಗಳು, ಗರ್ಭಿಣಿಯರು ವಾಹನಲ್ಲಿ ಕೂತು ಸ್ಪೀಡ್ ಬ್ರೇಕಗಳನ್ನು ದಾಟಿ ಹೋಗುವುದೇ ದುಸ್ಥರವಾಗಿದೆ.

— ಪ್ರಶಾಂತ ರೇವಡಿ, ವಾಹನ ಸವಾರ