ಬಾಗಲಕೋಟೆ ನವನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಬುಧವಾರ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಉದ್ಘಾಟಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಎಡಿಸಿ ಅಶೋಕ ತೇಲಿ ಮತ್ತಿತರರಿದ್ದರು. 
ಬಾಗಲಕೋಟೆ

ಚೌಡಯ್ಯ ಭವ ಸಾಗರ ದಾಟಿಸುವ ಅಂಬಿಗ

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಪಿ.ಎಚ್. ಪೂಜಾರ ಹೇಳಿಕೆ
  • ಜಿಲ್ಲಾಡಳಿತದಿಂದ ಆಚರಣೆ
  • ಅಂಬಿಗರ ಚೌಡಯ್ಯನವರು ಒಬ್ಬ ನೇರ, ನಿಷ್ಠೂರ, ಮಾರ್ಮಿಕ ವಚನಕಾರರಾಗಿದ್ದರು.
ಬಾಗಲಕೋಟೆ: ಅಂಬಿಗರ ಚೌಡಯ್ಯನವರು ಒಬ್ಬ ನೇರ, ನಿಷ್ಠೂರ, ಮಾರ್ಮಿಕ ವಚನಕಾರರಾಗಿದ್ದರು ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಹೇಳಿದರು.
ನವನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೌಡಯ್ಯನವರು ನದಿ ದಾಟಿಸುವ ಅಂಬಿಗರಾಗಿರದೇ ಭವ ಸಾಗರ ದಾಟಿಸುವ ಅಂಬಿಗರಾಗಿದ್ದರು. ಅವರ ವಚನದಲ್ಲಿ ಕಠೋರತೆ ಇದ್ದರೂ, ಮಾತೃ ಹೃದಯಿಯಾಗಿದ್ದರು ಎಂದರು.
ಚೌಡಯ್ಯನವರು ಪ್ರಥಮ ದಿನದಲ್ಲಿಯೇ ವಚನಾಂಕಿತ ಪಡೆದಿದ್ದರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮೂಢನಂಬಿಕೆ, ಅನಿಷ್ಠ ಪದ್ಧತಿಗಳನ್ನು ನೇರವಾಗಿ ಖಂಡಿಸಿದ್ದರು. ಅವರು ದಡ ಸೇರಿಸುವ ಕಾಯಕಮಾಡಿ ನಂಬಿಗಸ್ತರಾದವರು. ಆದರೆ ಕಾಯಕ ಜೀವಿಗಳಾದ ಮತ್ತು ಶೋಷಿತ ಸಮಾಜದವರಾಗಿದ್ದು, ತಮ್ಮ ಅಧಿಕಾರಾವಧಿ ವ್ಯಾಪ್ತಿಗೆ ಬರುವ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.
ಮಲ್ಲಿಕಾರ್ಜುನ ಕಮತಗಿ ಮಾತನಾಡಿ, ನರಸೀಪುರದಲ್ಲಿ ಉದ್ದಾಲಕ ಮುನಿಗಳ ಆಶ್ರಯದಲ್ಲಿ ಸಕಲ ವಿದ್ಯೆ ಪಡೆದ ಚೌಡಯ್ಯನವರು ಬರೆದ ವಚನ ಅವುಗಳಲ್ಲಿ ದೊರೆತ ವಚನಗಳು 719. ಅವುಗಳಲ್ಲಿ ನೇರ, ನಿಷ್ಠೂರ ಕಲ್ಯಾಣ ಸಂದೇಶಗಳಾಗಿದ್ದವು. ತುಂಗಭದ್ರಾ ನದಿಯ ದಡದಲ್ಲಿ ಅಂಬಿಗರ ವೃತ್ತಿ ಮಾಡುತ್ತಿದ್ದ ಇವರು ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ವಚನ ಮಂಡನೆ ಮಾಡುತ್ತಿರುವುದಾಗಿ ಬಸವಣ್ಣನವರು ಚೌಡಯ್ಯನವರನ್ನು ಕುರಿತು ಚೌಡಯ್ಯ ಶರಣರಾದವರಿಗೆ ಕಾಯಕ ಮುಖ್ಯ. ಆದರೆ ಇಲ್ಲಿ ತಾವು ಉಪಜೀವನ ಆಗುವುದು ಹೇಗೆ? ಯಾಕೆಂದರೆ ಇಲ್ಲಿ ಯಾವುದು ಎಂದಾಗ ನಾನೊಬ್ಬ ನದಿ ದಾಟಿಸುವ ಅಂಬಿಗನಲ್ಲ ಭವಸಾಗರವನ್ನು ದಾಟಿಸುವ ಅಂಬಿಗನಾಗಿದ್ದೇನೆ ಎಂದರು ಎಂದು ವಿವರಿಸಿದರು.