ಬಾಗಲಕೋಟೆ ವಿದ್ಯಾ ಪ್ರಸಾರಕ ಮಂಡಳದ ಎಸ್‌ಆರ್‌ಎನ್ ಕಾಲ, ಎಂಬಿಎಸ್ ವಾಣಿಜ್ಯ ಮಹಾವಿದ್ಯಾಲಯದ ಹಮ್ಮಿಕೊಂಡಿದ್ದ ಉಡುಗೆ ಸ್ಪರ್ಧೆಯಲ್ಲಿ ಪ್ರಾಚಾರ್ಯ ಶ್ರೀನಿವಾಸ ನರಗುಂದ, ಉಪನ್ಯಾಸಕರಾದ ಕೀರ್ತಿ ದಾಸರ, ಗೀತಾ ಕಿಲಬನೂರ, ಎ.ಎ.ಗಂಗಲ್, ಎಸ್.ವೈ.ಬೊಮ್ಮಣ್ಣವರ ಇದ್ದರು. 
ಬಾಗಲಕೋಟೆ

ಲವಲವಿಕೆ ಜೀವಂತಿಕೆಯ ಲಕ್ಷಣ

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಬಟ್ಟೆ ತೊಟ್ಟು ಮಿಂಚಿದ ವಿದ್ಯಾರ್ಥಿಗಳು
  • ಸಾಂಪ್ರದಾಯಕ ಉಡುಗೆ ಸ್ಪರ್ಧೆ
ಬಾಗಲಕೋಟೆ: ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪುರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯವು ವಾರ್ಷಿಕೋತ್ಸವದ ನಿಮಿತ್ತ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸಾಂಪ್ರದಾಯಕ ಉಡುಗೆ ಸ್ಪರ್ಧೆಯಲ್ಲಿ ಬಣ್ಣ-ಬಣ್ಣದ ಪೋಷಾಕಿನಲ್ಲಿ ಅನೇಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ವಿವಿಧತೆಯಲ್ಲಿ ಏಕತೆ ಎಂಬ ಮಾತಿನಂತೆ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಽಸುವ ಸಾಂಪ್ರದಾಯಕ ಉಡುಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ನರಗುಂದ, ಲವಲವಿಕೆ ಜೀವಂತಿಕೆಯ ಲಕ್ಷಣ. ಉತ್ಸಾಹದಿಂದ ಪಾಲ್ಗೊಳ್ಳುವಿಕೆ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದ ಜೊತೆಗೆ ಲಲಿತಕಲೆಗಳೂ ಪ್ರಮುಖ ಪಾತ್ರವನ್ನು ವಹಿಸುವದರಿಂದ ವಿದ್ಯಾರ್ಥಿಗಳು ಇವುಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಕೀರ್ತಿ ದಾಸರ, ಗೀತಾ ಕಿಲಬನೂರ, ಎ.ಎ.ಗಂಗಲ್, ಎಸ್.ವೈ.ಬೊಮ್ಮಣ್ಣವರ ಇದ್ದರು. ಎಸ್.ಎಂ ಜೇವೂರ ನಿರೂಪಿಸಿದರು.