ಮುಧೋಳ ನಗರದ ಎಂಕೆಜಿಎಸ್ ರನ್ನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಾಲಾ ಶಿಕ್ಷಣ ಇಲಾಖೆ ಅಽಕಾರಿ ವೃಂದದವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಮಾತನಾಡಿದರು. ಡಿಡಿಪಿಐ ಅಜೀತ್ ಮನ್ನಿಕೇರಿ, ಡಾ. ವೀಣಾ, ಪ್ರಮೋದಿನಿ ಬಳೂಲಮಟ್ಟಿ, ಎಸ್.ಎಂ. ಮುಲ್ಲಾ ಇತರರಿದ್ದರು.
- ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಸೂಚನೆ
- ಮಕ್ಕಳ ಸುರಕ್ಷತೆ, ಪ್ರಗತಿ ಪರಿಶೀಲನಾ ಸಭೆ
ಮುಧೋಳ: ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ನಮ್ಮೆಲ್ಲರ ಪ್ರಥಮ ಹಾಗೂ ಮುಖ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಹೇಳಿದರು.
ನಗರದ ಎಂಕೆಜಿಎಸ್ ರನ್ನ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾಮಟ್ಟದ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ವೃಂದದವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಆರು ಶೈಕ್ಷಣಿಕ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮಕ್ಕಳ ದಾಖಲಾತಿ, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ, ಮಧ್ಯಾಹ್ನ ಬಿಸಿಊಟ ಯೋಜನೆ ಮತ್ತು ಮಕ್ಕಳ ಸುರಕ್ಷತೆ ಕುರಿತ ಸಮಗ್ರ ವರದಿಗಳನ್ನು ಸಭೆಗೆ ನೀಡಿದ್ದು ಶ್ಲಾಘನೀಯ. ಪ್ರತಿಯೊಂದು ತಾಲೂಕಿನಲ್ಲಿಯೂ ಕನಿಷ್ಠ ಒಂದು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಗುರುತಿಸಿ, ಅದು ಆ ತಾಲೂಕಿನ ಇತರೆ ಶಾಲೆಗಳಿಗೆ ಮಾದರಿಯಾಗಿ ರೂಪುಗೊಳ್ಳುವಂತೆ ಎಲ್ಲ ಬಿಇಒಗಳು ಕ್ರಮವಹಿಸಬೇಕು ಎಂದರು.
ಶಾಲಾ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆ ಮತ್ತು ವಾಹನ ಚಾಲಕರ ಹಿನ್ನೆಲೆ ಹಾಗೂ ಚಾಲನೆ ಕುರಿತು ಅಽಕಾರಿಗಳು ಖುದ್ದು ಪರಿಶೀಲನೆ ನಡೆಸಿ, ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು. ಕಡ್ಡಾಯವಾಗಿ ಎಲ್ಲ ಅಧಿಕಾರಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಶಾಲಾ ಆವರಣ ಹಾಗೂ ಶೌಚಗೃಹಗಳ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಸ್ಥಳೀಯ ರನ್ನ ಶಾಲಾ ಆವರಣಕ್ಕೆ ಭೇಟಿ ನೀಡಿ, ಮಕ್ಕಳ ಕಲಿಕಾ ವಾತಾವರಣ, ಮಧ್ಯಾಹ್ನ ಬಿಸಿ ಊಟದ ಗುಣಮಟ್ಟ ಮತ್ತು ಶಾಲೆ ಒಟ್ಟಾರೆ ಸುರಕ್ಷತೆಯನ್ನು ಪರಿಶೀಲಿಸಿದ್ದು ತೃಪ್ತಿಕರವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸೌಲಭ್ಯಗಳ ಅನುಷ್ಠಾನದಲ್ಲಿ ಅಽಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೆ ಇನ್ನಷ್ಟು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು
ಡಿಡಿಪಿಐ ಅಜೀತ್ ಮನ್ನಿಕೇರಿ ಮಾತನಾಡಿ, ಜಿಲ್ಲೆಯಲ್ಲಿ ಶೈಕ್ಷಣಿಕ ವಾತಾವರಣ ಮತ್ತಷ್ಟು ಬಲಪಡಿಸುವ ಹಾಗೂ ಸರಕಾರಿ ಯೋಜನೆಗಳನ್ನು ತಳಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕುರಿತು ಸಭೆಗೆ ಪ್ರಸ್ತಾವಿಕ ನುಡಿಗಳ ಮೂಲಕ ಮಾಹಿತಿ ನೀಡಿ ಸ್ವಾಗತಿಸಿದರು.
ಡಿಡಿಪಿಯು ಡಾ. ವೀಣಾ, ಡಿವೈಪಿಸಿ ಪ್ರಮೋದಿನಿ ಬಳೂಲಮಟ್ಟಿ, ಮುಧೋಳ ಬಿಇಒ ಎಸ್.ಎಂ. ಮುಲ್ಲಾ, ಬಾಗಲಕೋಟೆ ಬಿಇಒ ಎಂ.ಎಸ್. ಬಡದಾನಿ, ಹುನಗುಂದ ಬಿಇಒ ಜಾಸ್ಮಿನ್ ಕಿಲ್ಲೆದಾರ್, ಜಮಖಂಡಿ ಬಿಇಒ ಎ. ಕೆ. ಬಸಣ್ಣವರ, ಬಾದಾಮಿ ಬಿಇಒ ಕೇಶವ ಪೆಟ್ಲೂರ, ಬೀಳಗಿ ಬಿಇಒ ಎಸ್.ಎಸ್. ಆದಾಪೂರ . ಅಡಿವೆಪ್ಪ ಛಬ್ಬಿ, ಶ್ರೀಶೈಲ ಕುರಣಿ, ಮುಧೋಳ ಬಿಆರ್‌ಪಿ ಎಸ್.ಡಿ. ನೀಲಗುಂದ ಇತರರಿದ್ದರು.