ಜಮಖಂಡಿ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ರೈತರಿಗೆ ಬೀಜ ವಿತರಿಸುವ ಮೂಲಕ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಬಿ. ಪಟ್ಟಿಹಾಳ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿದಲಿಂಗಪ್ಪಗೌಡ ಪಾಟೀಲ, ಜಿಲ್ಲಾ ಪ್ರತಿನಿಽ ನಿಂಗಪ್ಪ ಕಡಪಟ್ಟಿ, ಖಜಾಂಚಿ ಅಶೋಕ ಸದಲಗಿ, ಧರೆಪ್ಪ ಆಲಗೂರ, ಪ್ರಗತಿಪರ ರೈತರಾದ ಸುರೇಶಗೌಡ ಪಾಟೀಲ ಇತರರಿದ್ದರು. 
ಬಾಗಲಕೋಟೆ

ಬಿತ್ತನೆಗೂ ಮುನ್ನ ಮಣ್ಣಿನ ತೇವಾಂಶ ಗಮನಿಸಿ

Mallamma K.P
ಜಮಖಂಡಿ : ರೈತರು ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಂಡು, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಶಿಫಾರಸು ಮಾಡುವ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಸಲಹೆ ನೀಡಿದರು.
ನಗರ ರೈತ ಸಂಪರ್ಕ ಕೇಂದ್ರದಲ್ಲಿ ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ, ಮಾತನಾಡಿದ ಅವರು, ಮಣ್ಣಿನ ತೇವಾಂಶವನ್ನು ಗಮನಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಬಿ. ಪಟ್ಟಿಹಾಳ ಮಾಹಿತಿ ನೀಡಿ, ತಾಲೂಕಿನಲ್ಲಿ ಸೋಯಾ, ಅವರೆ, ಹೆಸರು ಹಾಗೂ ತೊಗರಿ ಬೀಜಗಳು ಲಭ್ಯವಿದ್ದು, ಶೀಘ್ರದಲ್ಲೇ ಗೋವಿನಜೋಳ, ಉದ್ದು ಮತ್ತು ನವಣೆ ಬೀಜಗಳೂ ಬರಲಿವೆ ಎಂದು ತಿಳಿಸಿದರು.
ರೈತರು ಪ್ರಮಾಣೀಕೃತ ಗುಣಮಟ್ಟದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲೇ ಖರೀದಿಸಬೇಕು. ಯೂರಿಯಾ ಮಾತ್ರ ಬಳಕೆ ಮಾಡುವುದನ್ನು ತಪ್ಪಿಸಿ, ೧೦:೨೬:೨೬, ೧೨:೩೨:೧೬, ೨೦:೨೦:೦:೧೩ ಸಂಯುಕ್ತ ರಸಗೊಬ್ಬರಗಳ ಜೊತೆಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆ ಮಾಡುವುದು ಮಣ್ಣಿನ ಫಲವತ್ತತೆ ಕಾಪಾಡಲು ಸಹಕಾರಿ ಎಂದು ಅಧಿಕಾರಿಗಳು ಸಲಹೆ ನೀಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿದಲಿಂಗಪ್ಪಗೌಡ ಪಾಟೀಲ, ಜಿಲ್ಲಾ ಪ್ರತಿನಿಧಿ ನಿಂಗಪ್ಪ ಕಡಪಟ್ಟಿ, ಖಜಾಂಚಿ ಅಶೋಕ ಸದಲಗಿ, ಧರೆಪ್ಪ ಆಲಗೂರ, ಪ್ರಗತಿಪರ ರೈತರಾದ ಸುರೇಶಗೌಡ ಪಾಟೀಲ, ಅಜಯ ಕಡಪಟ್ಟಿ, ಮಲ್ಲು ದಾನಗೌಡ ಇದ್ದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶಂಕರರಾವ ಪವಾರ, ರಾಜಕುಮಾರ ಕುಚನೂರ ಇತರರಿದ್ದರು.