ತೇರದಾಳ ಪಟ್ಟಣದ ನಾಲ್ಕನೇ ಕೆನಾಲ್ ಬಳಿಯಲ್ಲಿರುವ ಚೆಕ್ ಪೋಸ್ಟ್ನಲ್ಲಿ ಬಾಗಲಕೋಟೆ ಜಿಲ್ಲೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಲಾಯಿತು. ಪೊಲೀಸ್ ಸಿಬ್ಬಂದಿ ಎಸ್.ಬಿ. ತಳವಾರ, ಆರ್.ಆರ್. ಯರಗಟ್ಟಿ ಇದ್ದರು.
- ವಾಹನಗಳ ಕಟ್ಟುನಿಟ್ಟಿನ ತಪಾಸಣೆ
- ಚೆಕ್ ಪೋಸ್ಟ್ ಆರಂಭ
ತೇರದಾಳ: ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ನಾಲ್ಕನೇ ಕೆನಾಲ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಚೆಕ್ ಪೋಸ್ಟ್ ಆರಂಭಿಸಿ ವಾಹನಗಳ ತಪಾಸಣೆ ಚುರುಕುಗೊಳಿಸಲಾಗಿದೆ.
ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸುವ ಪ್ರಮುಖ ಮಾರ್ಗವಾಗಿರುವುದರಿಂದ ಈ ಸ್ಥಳದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಿದೆ. ಮಹಾರಾಷ್ಟ್ರದಿಂದ ಬರುವ ವಾಹನಗಳ ಮೇಲೂ ವಿಶೇಷ ಗಮನ ಹರಿಸಲಾಗುತ್ತಿದೆ. ಅಕ್ರಮ ವಸ್ತು ಸಾಗಾಣಿಕೆ ತಡೆಯುವ ಉದ್ದೇಶದಿಂದ ಎಸ್‌ಎಸ್‌ಟಿ ಮತ್ತು -ಫ್ಲಾಯಿಂಗ್ ಸ್ಕ್ವಾಡ್ ತಂಡಗಳು ನಿರಂತರ ಪರಿಶೀಲನೆ ನಡೆಸುತ್ತಿವೆ.
ತಪಾಸಣೆ ಕಾರ್ಯದಲ್ಲಿ ಎಸ್‌ಎಸ್‌ಟಿ ಮುಖ್ಯಸ್ಥ ಎಸ್.ಎಂ. ತೆಳಗಿನಮನಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಎಸ್.ಬಿ. ತಳವಾರ ಮತ್ತು ಆರ್.ಆರ್. ಯರಗಟ್ಟಿ ಭಾಗವಹಿಸಿದ್ದಾರೆ. ಇದುವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಅಽಕಾರಿಗಳು ತಿಳಿಸಿದ್ದಾರೆ.
ಚೆಕ್ ಪೋಸ್ಟ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಶಾಮಿಯಾನ ಹಾಕಿ ಸಿಬ್ಬಂದಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಕಟ್ಟಡದ ಕೊರತೆ ಸ್ಪಷ್ಟವಾಗಿದ್ದು, ಸುಸಜ್ಜಿತ ಸೌಲಭ್ಯಗಳ ಅಗತ್ಯತೆ ಎದುರಾಗಿದೆ.