ಚಿಮ್ಮಡ ಗ್ರಾಮದಲ್ಲಿ ರತಿ ಕಾಮಣ್ಣರನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿರುವ ಗ್ರಾಮಸ್ಥರು.
ಬಾಗಲಕೋಟೆ: ಹೋಳಿ ಹಬ್ಬದ ಸಡಗರ ದೇಶದೆಲ್ಲೆಡೆ ಸಂತಸ. ಬಣ್ಣದಾಟದಲ್ಲಿ ಮಿಂದೇಳುವ ಮೂಲಕ ಪರಸ್ಪರ ಸಂತಸ, ಸಂಭ್ರಮ ಇಮ್ಮಡಿಗೊಳಿಸಲಾಗುತ್ತದೆ. ಆದರೇ ಇಲ್ಲೊಂದು ಗ್ರಾಮದಲ್ಲಿ ಹೋಳಿ ಹಬ್ಬದ ಬಣ್ಣದಾಟವಿಲ್ಲ. ಬದಲಾಗಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ...!!
ರಬಕವಿ-ಬನಹಟ್ಟಿ ತಾಲೂಕು ಚಿಮ್ಮಡ ಗ್ರಾಮದಲ್ಲಿ ಯಾವೂದೇ ಬಣ್ಣ ಎರಚದೆ ಕಳೆದ ೩೫ ವರ್ಷಗಳಿಂದ ಹೋಳಿ ಆಚರಿಸಲಾಗುತ್ತದೆ. ಹೋಳಿ ಹಬ್ಬ ಬಂತೆAದರೆ ಹಳೆಬಟ್ಟೆ ಧರಿಸಿ ಎಲ್ಲರು ಬಣ್ಣದಾಟಕ್ಕೆ ಆಣಿಯಾಗುವುದು ಸಾಮಾನ್ಯ. ಆದರೆ ಇಲ್ಲಿನ ಟೇಲರಗಳಿಗೆ ಬಿಡುವಿಲ್ಲದ ಕೆಲಸ ಮಾಡಿ ಹೊಸ ಬಟ್ಟೆ ಸಿದ್ಧಪಡಿಸಲು ನಿರತರಾಗುತ್ತಾರೆ.
ದೀಪಾವಳಿ, ಗಣೇಶ ಹಬ್ಬ, ಜಾತ್ರೆ ಸಂದರ್ಭದಲ್ಲಿ ಹೊಸ ಬಟ್ಟೆ ಧರಿಸುವುದು ವಾಡಿಕೆ. ಈ ಗ್ರಾಮದಲ್ಲಿ ಮಾತ್ರದಲ್ಲಿ ಹೋಳಿ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿ ಧರಿಸುತ್ತಾರೆ. ನಂತರ ಹುಣ್ಣಿಮೆ ದಿನ ಜನಪದ ಗೀತೆಗಳನ್ನು ಹಾಡುತ್ತಾ ಗ್ರಾಮ ಪ್ರದಕ್ಷಿಣಿ ಹಾಕುತ್ತಾರೆ. ನಂತರ ಬೆಳಗಿನ ಜಾವ ಕಾಮ ದಹನ ಮಾಡಲಾಗುತ್ತದೆ. ಆದರೇ ಯಾವುದೇ ಕಾರಣಕ್ಕೂ ಬಣ್ಣದಾಟ ಆಡುವದಿಲ್ಲ. ಗ್ರಾಮ ಪಂಚಾಯಿತಿಯು ಡಂಗುರ ಸಾರುತ್ತಾ ಪ್ರತಿ ವರ್ಷ ಹೋಳಿ ಸಂದರ್ಭದಲ್ಲಿ ಗಲ್ಲಿ ಗಲ್ಲಿ ಮನವಿ ಮಾಡುತ್ತಾರೆ. ಬಣ್ಣ ಆಡುವ ಮನಸಿದ್ದವರು ಪರಸ್ಥಳಕ್ಕೆ ಹೋಗಿ ಆಡುವಂತೆ ತಾಕಿತು ಮಾಡಲಾಗುತ್ತದೆ. ಕಳೆೆದ ೩೫ ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ.
ಈ ಹಿಂದೆ ಗ್ರಾಮದಲ್ಲಿ ಹೋಳಿ ಆಚರಣೆ ಮಾಡಿ ಬಣ್ಣದಾಟ ಆಡಲಾಗುತ್ತಿತ್ತು. ಆದರೇ ಕೆಲ ಕಿಡಿಕೇಡಿಗಳು ಗ್ರಾಮದ ಬಸ್ ನಿಲ್ದಾಣಕ್ಕೆ ಆಗಮಿಸಿ ಹೋಳಿ ವೇಳೆ ಬಣ್ಣ ಕೊಂಡುಕೊಳ್ಳಲು ಹಣ ಕೇಳುತ್ತಿದ್ದರು. ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಗ್ರಾಮಸ್ಥರ ನಡುವೇ ಘರ್ಜನೆ ನಡೆದು ದೊಡ್ಡ ಗಲಾಟೆ ನಡೆದಿತ್ತು. ಬಸ್ ಕೂಡಾ ಜಖಂಗೊAಡಿತ್ತು. ಇಂತಹ ಅನಿಷ್ಠ ಪದ್ಧತಿ ಕೊನೆ ಹಾಡಬೇಕು ಎನ್ನುವ ಉದ್ದೇಶದಿಂದ ಗ್ರಾಮದ ಮುಖಂಡರು ಸಭೆ ಸೇರಿ ಹೋಳಿ ಆಚರಣೆಯ ಬಣ್ಣದಾಟಕ್ಕೆ ಬ್ರೇಕ್ ಹಾಕಿದರು. ಕಾಮ ದಹನ ಬಳಿಕ ಜನಪದ (ಚೌಡಕಿಪದ, ಹಂತಿ ಪದ) ಹಾಡುವ ಮೂಲಕ ಸಂಪ್ರದಾಯಕ್ಕೆ ನಾಂದಿ ಹಾಡಿದರು. ತನ್ಮೂಲಕ ಗ್ರಾಮದಲ್ಲಿ ವಿಶೇಷ ಆಚರಣೆ ಅನುಷ್ಠಾನಕ್ಕೆ ಬಂದಿತು. ಗಲಭೆ, ಗಲಾಟೆಗೆ ಪೂರ್ಣ ವಿರಾಮ ನೀಡಿದಂತಾಯಿತು.
ಇನ್ನೂ ಗ್ರಾಮದ ಚಾವಡಿಕಟ್ಟೆಯಲ್ಲಿಹೋಳಿ ಹುಣ್ಣಿಮೆ ಪ್ರಯಕ್ತ ರತಿ ಕಾಮಣ್ಣರನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ರತಿ ಕಾಮಣ್ಣರಿಗೆ ವಿಶೇಷ ಪೂಜೆ ಸಲ್ಲಿಸಿ ಜನಪದ ಹಾಡು ಹಾಡಿ ಆಚರಿಸಲಾಗುತ್ತದೆ.