ಲೋಕಾಪುರ ಪಟ್ಟಣದ ಗುರಾರಾಜ ಉದಪುಡಿ ಅವರ ನಿವಾಸದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ರವಿ ಬೋಳಿಶೆಟ್ಟಿ, ಷಣ್ಮೂಖಪ್ಪ ಕೋಲಾರ, ಹೊಳಬಸು ದಂಡಿನ ಮತ್ತಿತರಿದ್ದರು.
- ನಾಯಕರು-ಕಾರ್ಯಕರ್ತರ ಸಮನ್ವಯತೆ ಕಾರಣ
- ಅರಣ್ಯ ಸಚಿವ ಈಶ್ವರ ಖಂಡ್ರೆ ವಿಶ್ವಾಸ
ಲೋಕಾಪುರ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜನತೆ ಮನ್ನಣೆ ನೀಡುತ್ತಿರುವ ಹಿನ್ನೆಲೆಯಲ್ಲಿ, 2028ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಮುಖಂಡ ಗುರುರಾಜ ಉದಪುಡಿ ನಿವಾಸದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯ ಫಲಿತಾಂಶಗಳು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿವೆ ಎಂದರು. ಈ ಗೆಲುವಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಪಕ್ಷದ ನಾಯಕರ, ಕಾರ್ಯಕರ್ತರ ಸಮನ್ವಯ ಪ್ರಯತ್ನ ಕಾರಣವೆಂದು ಹೇಳಿದರು.
ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನಮನ ಗೆದ್ದಿದ್ದು, ಉಪ ಚುನಾವಣೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಜನರ ಆಶೀರ್ವಾದದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಮುಂದುವರಿಸಲಾಗುವುದು ಎಂದು ಖಂಡ್ರೆ ತಿಳಿಸಿದರು.
ಮುಖಂಡರಾದ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ರವಿ ಬೋಳಿಶೆಟ್ಟಿ, ಷಣ್ಮೂಖಪ್ಪ ಕೋಲ್ಹಾರ, ಹೊಳಬಸು ದಂಡಿನ, ಗೋಪಾಲಗೌಡ ಪಾಟೀಲ, ಚನ್ನಯ್ಯ ಗಣಾಚಾರಿ, ಮುತ್ತಪ್ಪ ಚೌಧರಿ, ಕೃಷ್ಣಾ ಜಟ್ಟೆನ್ನವರ, ರೆಹೆಮಾನ್ ತೊರಗಲ್, ಶಾಂತೇಸ ಬೋಳಿಶೆಟ್ಟಿ, ಪ್ರಭು ಬೋಳಿಶೆಟ್ಟಿ, ಬಸವರಾಜ ಕುಂದರಗಿ, ಕುಮಾರ ಕಾಳಮ್ಮನವರ, ಜಾವೇದ ಮುಧೋಳ, ಅಬ್ದುಲ ವಾಲಿಕಾರ, ಲೋಕಣ್ಣಾ ಗಣಾಚಾರಿ ಮತ್ತಿತರಿದ್ದರು.