ಬನಹಟ್ಟಿಯ ಎಸ್‌ಟಿಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಎಸ್‌ಟಿ ಸುಧಾರಣೆಗಳ ಮೌಲ್ಯ ಮಾಪನ ಕುರಿತು ರಾಷ್ಟ್ರ ಮಟ್ಟದವಿಚಾರ ಸಂಕೀರಣಕ್ಕೆ ಚಾಲನೆ ಡಾ. ಕಿಶೋರ ಭಟ್ಟಡ ನೀಡಿದರು. ಎಸ್. ಆರ್. ಮಠಪತಿ, ಎಂ.ಆರ್. ಸೊಲಾಪುರ, ಡಾ. ವಿ.ಆರ್. ಕುಳ್ಳಿ ಇತರ ಗಣ್ಯರು ಇದ್ದರು. 
ಬಾಗಲಕೋಟೆ

ಜಿಎಸ್‌ಟಿ ಅಡಿಯಲ್ಲಿ ವ್ಯವಹಾರ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಒಂದು ರಾಷ್ಟ್ರ ಒಂದು ತೆರಿಗೆ
  • ರಾಷ್ಟ್ರ ಮಟ್ಟದ ವಿಚಾರ ಸಂಕೀರಣ
  • ರಾಷ್ಟ್ರ ಮಟ್ಟದ ಎರಡು ದಿನಗಳ ವಿಚಾರ ಸಂಕೀರಣ
ರಬಕವಿ/ಬನಹಟ್ಟಿ: ಗ್ರಾಮೀಣ ಭಾಗ ಸೇರಿ ಪ್ರತಿಯೊಬ್ಬ ವ್ಯಾಪಾರಸ್ಥರೂ ಜಿಎಸ್‌ಟಿ ಅಡಿಯಲ್ಲಿ ವ್ಯವಹರಿಸುವ ಮೂಲಕ ದೇಶದ ಆರ್ಥಿಕ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಬೆಂಗಳೂರಿನ ಜಿಎಸ್‌ಟಿ ಗುಪ್ತದಳ ವಿಭಾಗದ ಉಪನಿರ್ದೇಶಕ ಡಾ. ಕಿಶೋರ ಭಟ್ಟಡ ಹೇಳಿದರು.
ನಗರದ ಎಸ್‌ಟಿಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಭಾರತದ ರಾಜ್ಯಗಳ ಗ್ರಾಮೀಣ ವಸ್ತ್ರೋದ್ಯಮ ಕ್ಷೇತ್ರದ ಜಿಎಸ್‌ಟಿ ಸುಧಾರಣೆಗಳ ಮೌಲ್ಯಮಾಪನ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಎರಡು ದಿನಗಳ ವಿಚಾರ ಸಂಕೀರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಾರಂಪರಿಕವಾಗಿ ಬೆಳೆದ ವಸೊ್ತ್ರೀೀದ್ಯಮವನ್ನು ಉತ್ತೇಜಿಸಲು ಸರ್ಕಾರ ಏಕೀಕತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಉದ್ಯಮಿಗಳು ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ತಿಳಿಸಿದರು. ತೆರಿಗೆ ಉಳಿತಾಯಕ್ಕಾಗಿ ಅಕ್ರಮ ಮಾರ್ಗಗಳನ್ನು ಅನುಸರಿಸದೇ ನಿಯಮಾನುಸಾರ ವ್ಯವಹರಿಸುವುದು ಅಗತ್ಯವೆಂದರು.
ಕೆಲವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದರೂ ಅವುಗಳನ್ನು ಸರಳಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದರು.
ವಿಜಯಪುರದ ಹಿರಿಯ ಲೆಕ್ಕಪರಿಶೋಧಕ ಎಸ್.ಆರ್. ಮಠಪತಿ ಮಾತನಾಡಿ, ಒಂದು ರಾಷ್ಟ್ರ ಒಂದು ತೆರಿಗೆ ಪರಿಕಲ್ಪನೆಯಲ್ಲಿ ಕೆಲವು ವ್ಯತ್ಯಾಸಗಳಿವೆ. ಕಚ್ಚಾ ವಸ್ತು ಖರೀದಿಯಿಂದ ಅಂತಿಮ ಉತ್ಪನ್ನದವರೆಗೆ ಪುನಃಪುನಃ ತೆರಿಗೆ ವಿಧಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡೀನ್ ಎಂ.ಆರ್. ಸೊಲಾಪುರ ಮಾತನಾಡಿ, ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶದಿಂದ ಜಿಎಸ್‌ಟಿ ಜಾರಿಗೆ ಬಂದಿದ್ದು, 2017 ಜುಲೈ 1ರಿಂದ ಇದು ದೇಶದಲ್ಲಿ ಮಹತ್ವದ ತೆರಿಗೆ ಸುಧಾರಣೆಯಾಗಿ ಹೊರಹೊಮ್ಮಿದೆ ಎಂದರು. ವಿವಿಧ ತೆರಿಗೆಗಳನ್ನು ಏಕೀಕರಿಸುವ ಮೂಲಕ ರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣವೇ ಇದರ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಡಾ. ವಿ.ಆರ್. ಕುಳ್ಳಿ ವಹಿಸಿದ್ದರು. ಬಸವರಾಜ ಜಾಡಗೌಡ, ಸಂಸ್ಥೆಯ ಚೇರ್ಮನ್ ಬಸವರಾಜ ಜಾಡಗೌಡ, ರಶ್ಮಿ ಭಟ್ಟಡ, ಭದ್ರಿನರಾಯಣ ಭಟ್ಟಡ, ಬಿ. ಎಸ್. ಮಗದುಮ್, ಡಾ. ಎಂ. ಎಂ. ಮರಡಿ, ಪಿ. ಎಸ್. ಹನಗಂಡಿ, ಎಂ. ಜಿ. ಕೆರೂರ, ಬ್ರಿಜ್‌ಮೋಹನ ಚಿಂಡಕ, ಪ್ರಾಚಾರ್ಯ ಜಿ. ಆರ್. ಜುನ್ನಾಯ್ಕರ, ಡಾ. ಪಿ.ಆರ್. ಕೆಂಗನಾಳ, ಜಿ. ಎಸ್. ಸಜ್ಜನ, ಪ್ರೊ. ಎಸ್. ಬಿ. ಆಕಾಶ, ಮಂಜುನಾಥ ಬೆನ್ನೂರ, ರಶ್ಮಿ ಕೊಕಟನೂರ ಸೇರಿ ಅನೇಕ ಗಣ್ಯರು ಹಾಗೂ ಶಿಕ್ಷಕ ವಂದ ಹಾಜರಿದ್ದರು.