ಮುಧೋಳ ನಗರದ ರನ್ನ ಭವನದಲ್ಲಿ ಸಪ್ತಸ್ವರ ಸಂಗೀತ ಮತ್ತು ನತ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನತ್ಯ ಸಂಗಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಕಲಾವಿದರಾದ ರುಜುತಾ ಸೋಮನ್, ಪ್ರಚಿತಿ ಡಾಂಗೆ ಸೇರಿ ವಿವಿಧ ರಾಜ್ಯಗಳ ಕಲಾವಿದರು ಕಥಕ್, ಒಡಿಸ್ಸಿ ಹಾಗೂ ಭರತನಾಟ್ಯ ನತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
- ಸಚಿವ ಆರ್.ಬಿ. ತಿಮ್ಮಾಪೂರ ಅಭಿಮತ
- ನತ್ಯ ಸಂಗಮ
- ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ತೋರಿಸಬೇಕು
ಮುಧೋಳ: ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ತೋರಿಸಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದ ರನ್ನ ಭವನದಲ್ಲಿ ಸಪ್ತಸ್ವರ ಸಂಗೀತ ಮತ್ತು ನತ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನತ್ಯ ಸಂಗಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಶೇ.49.1ರಷ್ಟು ಮಹಿಳೆಯರು ಇದ್ದು, ಅವರಿಗೆ ಸಮಾನ ಹಕ್ಕಿನ ಶಕ್ತಿ ನೀಡಿದವರು ಡಾ. ಅಂಬೇಡ್ಕರ್ ಎಂದು ಅವರು ಹೇಳಿದರು. ಸರ್ಕಾರದ ಗಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿವೆ ಎಂದು ತಿಳಿಸಿದ ಅವರು, ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಜಾಗ ಒದಗಿಸುವ ಭರವಸೆ ನೀಡಿದರು.
ಉದ್ಯಮಿ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಮಹಿಳೆಯನ್ನು ಗೌರವಿಸುವ ಸಮಾಜದಲ್ಲೇ ಸಮದ್ಧಿ ನೆಲೆಸುತ್ತದೆ. ಸನಾತನ ಧರ್ಮದಲ್ಲಿ ಸೀಯರಿಗೆ ಅಗ್ರಸ್ಥಾನವಿದ್ದು, ಕಿತ್ತೂರು ಚನ್ನಮ್ಮನಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ತನಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ಅವರು ಉಲ್ಲೇಖಿಸಿದರು. ಒಬ್ಬ ಮಹಿಳೆ ಸಬಲಳಾದರೆ ಕುಟುಂಬ ಮತ್ತು ದೇಶವೂ ಸಬಲವಾಗುತ್ತದೆ ಎಂದರು.
ದೇಶದ ಖ್ಯಾತ ಕಲಾವಿದರಾದ ರುಜುತಾ ಸೋಮನ್, ಪ್ರಚಿತಿ ಡಾಂಗೆ ಸೇರಿ ವಿವಿಧ ರಾಜ್ಯಗಳ ಕಲಾವಿದರು ಕಥಕ್, ಒಡಿಸ್ಸಿ ಹಾಗೂ ಭರತನಾಟ್ಯ ನತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಹಾಗೂ ಡಾಕ್ಟರೇಟ್ ಪದವಿ ಪಡೆದ ಪತ್ರಕರ್ತ ಡಾ. ವೆಂಕಟೇಶ ಗುಡೆಪ್ಪನವರ ಅವರನ್ನು ಸಚಿವರು ಸನ್ಮಾನಿಸಿದರು.
ಡಾ. ರಾಜೇಶ ತಲಾಠಿ, ಡಾ. ಉದಯ ನಾಯಿಕ, ಶಶಿಕಲಾ ಆರ್. ತಿಮ್ಮಾಪೂರ, ಡಾ. ಗಿರಿಜಾ ಹೊಸೂರು, ಸವಿತಾ ಅರಳಿಕಟ್ಟಿ, ಬಸವರಾಜ ಕೊಣ್ಣೂರ, ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಾಂಜಲಿ ತಲಾಠಿ ಹಾಗೂ ವಿಭಾ ಕೊಲ್ದಾರ ಸ್ವಾಗತಿಸಿದರು, ಅನೀತಾ ಪಾಟೀಲ, ಡಾ. ತ್ರಿವೇಣಿ ಮಲಘಾಣ, ಅಮೂಲ್ಯ ಪಾಟಿಲ್ ನಿರೂಪಿಸಿದರು.
ಮಹಿಳೆಯರು ಮನೆಗೆ ಸೀಮಿತವಾಗದೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ಅಂಬೇಡ್ಕರ್ ನೀಡಿದ ಸಮಾನ ಹಕ್ಕಿನ ಶಕ್ತಿ ಮತ್ತು ಸರ್ಕಾರದ ಗಹಲಕ್ಷ್ಮೀ-ಶಕ್ತಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬುನಾದಿಯಾಗಿವೆ.
ಆರ್.ಬಿ. ತಿಮ್ಮಾಪೂರ, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು