ಬಿಟಿಡಿಎದಿಂದ ಶುಕ್ರವಾರ ಆರಂಭಿಸಿದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿಚಾಲನೆ ನೀಡಿದರು.
ಬಾಗಲಕೋಟೆ : ನವನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಮುಖ್ಯವಾಗಿ ನವನಗರದ ನಾಗರಿಕರು ಸಹಕಾರ ನೀಡಬೇಕು. ಸ್ವಚ್ಛತೆ ವಿಷಯದಲ್ಲಿ ಯಾರೇ ನರ‍್ಲಕ್ಷ್ಯ ಮಾಡಿದರೂ ಕಠೀಣ ಕ್ರಮ ಕೈಗೊಳ್ಳುವುದು ಅನಿವರ‍್ಯವಾಗುತ್ತದೆ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೂಚಿಸಿದರು.
ನವನಗರದ ಸೆಕ್ಟರ್ ನಂ.೩೫ರಲ್ಲಿ ಬಿಟಿಡಿಎದಿಂದ ಶುಕ್ರವಾರ ಆರಂಭಿಸಿದ ಸ್ವಚ್ಛತಾ ಸಪ್ತಾಹ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟಾಗ ಮಾತ್ರ, ಸಾಂಕ್ರಾಮಿಕ ರೋಗಗಳಿಂದ ದೂರ ಇರಲು ಸಾಧ್ಯ. ಬಿಟಿಡಿಎದಿಂದ ನವನಗರ ಯೂನಿಟ್-೧ ಮತ್ತು ೨ರಲ್ಲಿ ಸ್ವಚ್ಛತಾ ಸಪ್ತಾಹ ಆರಂಭಿಸಲಾಗಿದೆ. ನವನಗರದ ಪ್ರತಿಯೊಂದು ಸೆಕ್ಟರ್ ಕೂಡ ಸ್ವಚ್ಛವಾಗಿರಬೇಕು. ಇದಕ್ಕಾಗಿ ಬಿಟಿಡಿಎ ಅಧಿಕಾರಿಗಳು, ಕಸ ಸಂಗ್ರಹದ ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸ್ವಚ್ಛತೆ ವಿಷಯದಲ್ಲಿ ಯಾರೇ ನರ‍್ಲಕ್ಷ್ಯ ವಹಿಸುವಂತಿಲ್ಲ. ಗುತ್ತಿಗೆದಾರರು, ಕಡ್ಡಾಯವಾಗಿ ತಮಗೆ ವಹಿಸಿದ ಸೆಕ್ಟರ್‌ಗಳಲ್ಲಿ ನಿರಂತರ ಸ್ವಚ್ಛತೆ ನೋಡಿಕೊಳ್ಳಬೇಕು. ಇದಕ್ಕಾಗಿ ಬಿಟಿಡಿಎದಿಂದ ಉಸ್ತುವಾರಿ ಅಧಿಕಾರಿಗಳಿದ್ದು, ಸ್ವಚ್ಛತೆಯ ಬಗ್ಗೆ ನಿಗಾ ಇಟ್ಟಿರಬೇಕು. ಅಸಡ್ಡೆ ತೋರುವ ಅಧಿಕಾರಿ-ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವಚ್ಛತೆ ವಿಷಯದಲ್ಲಿ ಸರ‍್ವಜನಿಕರ ಸಹಕಾರವೂ ಅಗತ್ಯವಾಗಿದೆ. ಕೆಲವರು, ಕಸ, ನಿರುಪಯುಕ್ತ ಬಟ್ಟೆ, ಮುಸುರಿಯನ್ನು ಚರಂಡಿಗೆ ಹಾಕುತ್ತಾರೆ. ಮನೆ ಮನೆಗೆ ಕಸ ಸಂಗ್ರಹದ ವಾಹನ ಬಂದರೂ, ಚರಂಡಿಗೆ ಕಸ ಹಾಕುವವರ ಮೇಲೆ ನಿಗಾ ಇಡಬೇಕು. ಮೊದಲು ಅವರಿಗೆ ಚರಂಡಿಗೆ ಕಸ ಹಾಕದಂತೆ ಜಾಗೃತಿ ಮೂಡಿಸಿ. ತಿಳವಳಿಕೆ ಹೇಳಿದ ಬಳಿಕವೂ ಚರಂಡಿಗೆ ಕಸ ಹಾಕಿದರೆ ಅವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಬಿಟಿಡಿಎದಿಂದ ನಡೆಯುವ ಸ್ವಚ್ಛತಾ ಸಪ್ತಾಹವನ್ನು ಶಿಸ್ತುಬದ್ಧವಾಗಿ ನಡೆಸಬೇಕು. ಯಾವ ಏರಿಯಾದಲ್ಲಿ ಯಾವ ದಿನ ಸ್ವಚ್ಛತೆ ಮಾಡಬೇಕು ಎಂಬುದರ ವೇಳಾಪಟ್ಟಿ ಹಾಕಿಕೊಳ್ಳಬೇಕು. ನಾನೂ ಕೂಡ ಪ್ರತಿದಿನ ಈ ಸಪ್ತಾಹದಲ್ಲಿ ಭಾಗವಹಿಸಲಿದ್ದೇನೆ ಎಂದು ಹೇಳಿದರು.
ಬಿಟಿಡಿಎ ಮುಖ್ಯ ಎಂಜಿನೀಯರ್ ಚಂದ್ರಹಾಸ ಬಂಡಿ, ವಿಭಾಗ-೧ ಇಇ ಎಸ್.ಎಸ್. ಕರಿಗಾರ, ವಿಭಾಗ-೨ರ ಕರ‍್ಯನರ‍್ವಾಹಕ ಎಂಜಿನೀಯರ್ ವೈ.ಬಿ. ಪಾತ್ರೋಟಿ, ಅಧಿಕಾರಿಗಳಾದ ಸುರೇಶ ತೆಗ್ಗಿ, ಸೋಮಲಿಂಗ ನೋಟಗಾರ, ಪ್ರಶಾಂತ ಲೋಕಾಪುರ, ಶ್ರೀಕಾಂತ ಹಿರೇಗೌಡರ, ರವಿ ಅಂತರಗೊಂಡ, ಹಾಲವರ, ಪ್ರಮುಖರಾದ ಶಿವಕುಮಾರ ನಂದಿಕೋಲಮಠ, ಶಂಕರ ತಪಶೆಟ್ಟಿ, ರಾಮು ರಾಕುಂಪಿ, ಲಕ್ಷ್ಮಣ ತಾಳಿಕೋಟಿ ಮುಂತಾದವರು ಉಪಸ್ಥಿತರಿದ್ದರು.