ಬಾಗಲಕೋಟೆ ನಗರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮಂಗಳವಾರ ಪ್ರಚಾರ ಮಾಡಿದರು. ಶಾಸಕ ಸಿದ್ದು ಸವದಿ, ಬಸವರಾಜ ಹೊನ್ನಾಳ್ಳಿ, ಕಿರಣ ಕೋರಿ, ಶಂಕರ ತೇಲಕರ ಇತರರು ಇದ್ದರು.
- ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮತಯಾಚನೆ
- ನಕಲಿ ಹಿಂದೂಗಳ ಬಗ್ಗೆ ಎಚ್ಚರಿಕೆ ಅಗತ್ಯ
- ಬಿಜೆಪಿ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ
ಬಾಗಲಕೋಟೆ: ಹಿಂದುತ್ವ ರಕ್ಷಣೆ, ಮಹಿಳೆಯರ ಭದ್ರತೆ ಮತ್ತು ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಕೇಸರಿ ಶಾಲು ಹಾಕುವ ಕಾಂಗ್ರೆಸ್ ನಕಲಿ ಹಿಂದೂಗಳ ನಾಟಕ ನಡೆಯುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನೀತಿ ಇಲ್ಲ. ಇದರಿಂದ ಜನರಲ್ಲಿ ನಿರಾಸಕ್ತಿ ಮೂಡಿದೆ. ಚುನಾವಣೆ ಬಂದಾಗ ಕೇಸರಿ ಶಾಲು ಹಾಕುವ ನಕಲಿ ಹಿಂದೂಗಳು ಮುಸ್ಲಿಂರ ಓಲೈಕೆ ಬಿಟ್ಟು ಚುನಾವಣೆ ಮಾಡಿ ತೋರಿಸಲಿ. ಸಿಎಂ ಸಿದ್ದರಾಮಯ್ಯ ಅವರಿಗೆ ಇರುವಷ್ಟು ದುರಹಂಕಾರ ಯಾರಿಗೂ ಇಲ್ಲ ಎಂದು ಟೀಕಿಸಿದರು.
ಮೆಡಿಕಲ್ ಕಾಲೇಜು ಜಪ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಹಿಂದಿನ ನನ್ನ ಅಧಿಕಾರ ಅವಧಿಯಲ್ಲಿ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣ, ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಮಾಡಿದ್ದೇನೆ. ಈಗ ಚುನಾವಣೆ ಗಿಮಿಕ್ ಮಾಡಲು ಶಾಪಿಂಗ್ ಕಾಂಪ್ಲೆಕ್ಸ್, ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಸುಳ್ಳು ಭರವಸೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನ ರೋಸಿಹೋಗಿದ್ದು, ಕಾಂಗ್ರೆಸ್ ಸೋಲಿಸಲು ದಿಟ್ಟ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಬಿಜೆಪಿ ಬಹುಮತಗಳ ಅಂತರದಲ್ಲಿ ಗೆಲ್ಲಲಿದೆ ಎಂದರು.
ಕಾಂಗ್ರೆಸ್ ಪಕ್ಷದ ನಕಲಿ ಹಿಂದೂತ್ವ
ಶಾಸಕ ಸಿದ್ದು ಸವದಿ ಮಾತನಾಡಿ, ಸನಾತನ ಧರ್ಮ ಮತ್ತು ದೇಶದ ರಕ್ಷಣೆಗೆ ಬಿಜೆಪಿ ಸಿದ್ಧವಾಗಿದ್ದು, ಬಾಗಲಕೋಟೆಯ ಸವಾರ್ಂಗೀಣ ಅಭಿವೃದ್ಧಿಗೆ ಚರಂತಿಮಠ ಅವರನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಆಡಳಿತದಲ್ಲಿ ಕೋಮು ಗಲಭೆ, ಕೋಲೆ, ಲವ್ ಜಿಹಾದ್, ಅತ್ಯಾಚಾರದಂತಹ ಘಟನೆಗಳು ನಡೆಯುತ್ತವೆ. ಇದು ಜನರಿಗೂ ಅರಿವಾಗಿದೆ. ಮತದಾರರಿಗೆ ಬೆದರಿಕೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದು, ಪೊಲೀಸರು ಅದರ ಕಡೆ ಗಮನ ನೀಡಬೇಕು. ಅಜಾನ ಸಮಯಕ್ಕೆ ಸಭೆಯನ್ನು ನಿಲ್ಲಿಸುವ ಕಾಂಗ್ರೆಸ್ ಪಕ್ಷದ ನಕಲಿ ಹಿಂದೂತ್ವ ಜನರಿಗೆ ಅರ್ಥವಾಗುತ್ತದೆ. ಬಾಗಲಕೋಟೆಯಲ್ಲಿ ಬಿಜೆಪಿ ಅಲೆಯಲ್ಲ ಸುನಾಮಿ ಶುರುವಾಗಿದೆ. 25 ಸಾವಿರ ಮತಗಳ ಅಂತರದಿಂದ ಚರಂತಿಮಠರ ಗೆಲುವು ಖಚಿತ ಎಂದರು.
ಶಾಸಕ ಸಿದ್ದು ಸವದಿ, ಬಸವರಾಜ ಹೊನ್ನಾಳ್ಳಿ, ಕಿರಣ ಕೋರಿ, ಶಂಕರ ತೇಲಕರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು.
ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ. ಜನರ ಗಟ್ಟಿ ಧ್ವನಿಯಾಗಿ ಮಾತನಾಡುವ ನಾಯಕತ್ವದ ಅವಶ್ಯಕತೆ ಇದೆ. ಈ ತುಘಲಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ ಚಲಾಯಿಸಬೇಕು. ಮುಳುಗಡೆ ಸಂತ್ರಸ್ತರಿಗೆ ನ್ಯಾಯ ನೀಡಿಲ್ಲ. ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದೆ.
-ವೀರಣ್ಣ ಚರಂತಿಮಠ ಬಿಜೆಪಿ ಅಭ್ಯರ್ಥಿ