ಬಾಗಲಕೋಟೆ ನಗರದ ರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು. ಮಾಜಿ ಸಚಿವ ಎಸ್.ಆರ್. ಪಾಟೀಲ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಎಸ್.ಕೆ. ಯಡಹಳ್ಳಿ, ಆರ್.ಎಲ್. ಕಟಗೇರಿ ಇತರರಿದ್ದರು. 
ಬಾಗಲಕೋಟೆ

ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
  • ಸಾರಿಗೆ ಇಲಾಖೆಯಲ್ಲಿ ತೊಂದರೆಯಿಲ್ಲ
ಬಾಗಲಕೋಟೆ: ಸಾರಿಗೆ ಇಲಾಖೆಯು ಸುಭದ್ರವಾಗಿದೆ. ಹೊಸ ಬಸ್‌ಗಳ ಖರೀದಿ, ಸಿಬ್ಬಂದಿಗಳ ವೇತನ ಸಮರ್ಪಕವಾಗಿ ಆಗುತ್ತಿದೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಸೇರಿ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್‌ಗೆ ಬೆಂಬಲ ಇದೆ. ಬಿಜೆಪಿ ದಾರಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಈ ಹಿಂದಿನ ಬಿಜೆಪಿ ಸರ್ಕಾರ ಬಜೆಟ್ ಗಾತ್ರಕ್ಕಿಂತ ಅಧಿಕ ಮೊತ್ತ ಕಾಮಗಾರಿಗೆ ಅನುಮೋದನೆ ನೀಡಿದ್ದರಿಂದ ಆರ್ಥಿಕ ಸಮಸ್ಯೆ ಉಂಟಾಗಿತ್ತು. 80 ಸಾವಿರ ಕೋಟಿ ರೂ. ಬಿಲ್ ಬಾಕಿ ಇಟ್ಟು ಹೋಗಿದ್ದರು. ನೀರಾವರಿ ಬಗ್ಗೆ ಕೆಲಸ ಮಾಡಲಿಲ್ಲ. ಬುರುಡೆ ಬಿಟ್ಟು ಹೋಗಿದ್ದರು. 600 ಭರವಸೆಗಳಲ್ಲಿ 60 ಭರವಸೆ ಈಡೇರಿಸಲಿಲ್ಲ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಿದ್ದೇವೆ. 2013 ರಿಂದ 2018 ಅವಽಯಲ್ಲಿ 158 ಭರವಸೆ ಈಡೇರಿಸಿದ್ದೇವೆ. ಈಗ ಪಂಚ ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಸಾರಿಗೆ ಇಲಾಖೆಯಿಂದ ಒಂದೇ ಒಂದು ಬಸ್ ಖರೀದಿಸಿಲ್ಲ. ಸರಿಯಾಗಿ ವೇತನ ನೀಡುತ್ತಿರಲಿಲ್ಲ. ಸಿಬ್ಬಂದಿಗಳ ನೇಮಕಾತಿ ಮಾಡಲಿಲ್ಲ. 4 ಸಾವಿರ ಕೋಟಿ ರೂ. ಸಾಲ ಮಾಡಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7800 ಬಸ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಿದ್ದು, ಈಗಾಗಗಲೇ 5080 ಬಸ್‌ಗಳು ಬಂದಿವೆ. ಹೊಸದಾಗಿ 9000, ಅನುಕಂಪ ಆಧಾರದ ಮೇಲೆ 1000 ಜನರಿಗೆ ವಿವಿಧ ಸಾರಿಗೆ ನಿಗಮಗಳಲ್ಲಿ ಹುದ್ದೆಗಳ ಭರ್ತಿ ಮಾಡಿದ್ದೇವೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಸಾಲ ರಾಮಯ್ಯ ಅಂತ ಪ್ರಚಾರ ಮಾಡುವುದು ತರವಲ್ಲ. ದೇಶದ ಮೇಲೆ ನಾಲ್ಕು ಲಕ್ಷ ಕೋಟಿ ರೂ. ಸಾಲ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ರಂಪ್ ಹೇಳಿದ ಹಾಗೆ ಕುಣಿಯುತ್ತಾರೆ. ವಿಶ್ವಗುರು ಅಲ್ಲ. ವಿಶ್ವ ವಿಖ್ಯಾತ ಸಾಲಗಾರ ಅಂತ ಟೀಕಿಸಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಬಿರುಗಾಳಿ ಇದೆ. 2013 ರಿಂದ 2018 ವರೆಗೆ ನುಡಿದಂತೆ ನಡೆದಿದ್ದೇವೆ. ಬಾಗಲಕೋಟೆ ಕ್ಷೇತ್ರದಲ್ಲಿ ನಗರ ಪ್ರದೇಶದಲ್ಲಿ ಬಿಜೆಪಿ ಮುಂದೆ ಇಲ್ಲ. ಕಾಂಗ್ರೆಸ್ ಸರಿ ಸಮನಾಗಿ ಇದೆ. 20 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಬಾಗಲಕೋಟೆ ಉಪ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ನೀಡಲಿದೆ. 2023 ಚುನಾವಣೆಗಿಂತ ಅಽಕ ಮತಗಳ ಅಂತರದಿಂದ ಗೆಲ್ಲಲಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲವು ತಪ್ಪಿಸಲು ಯಾರಿಂದ ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಖಂಡರಾದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಎಸ್.ಕೆ. ಯಡಹಳ್ಳಿ, ಆರ್.ಎಲ್. ಕಟಗೇರಿ ಇತರರಿದ್ದರು.