ಬಾಗಲಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಲೋಹಿತ ಕುಮಾರ ಮಾತನಾಡಿದರು. ಎಚ್. ಹಣಮಂತಪ್ಪ, ಮುತ್ತಣ್ಣ ಬೆಣ್ಣೂರ, ರಾಘವೇಂದ್ರ ನಾಗೂರ ಇದ್ದರು. 
ಬಾಗಲಕೋಟೆ

ಸಣ್ಣ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಭಾಜಪಾ

ಪ್ರಮುಖ ಮುಖ್ಯಾಂಶಗಳು

  • ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಲೋಹಿತ ಹೇಳಿಕೆ
  • ಈ ಉಪಚುನಾವಣೆಯಲ್ಲಿ ಸಣ್ಣ ಸಮುದಾಯಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಲಿವೆ
  • ಕಾಂಗ್ರೆಸ್ ಪಕ್ಷ ಸಣ್ಣ ಸಮುದಾಯಗಳಿಗೆ ಒಳ ಮೀಸಲಾತಿ ವಿಚಾರದಲ್ಲಿ ಘೋರ ಅನ್ಯಾಯ ಮಾಡಿದೆ.
ಬಾಗಲಕೋಟೆ: ಅಲೆಮಾರಿ, ಕೊರಮ, ಕೊರಚ ಸೇರಿ ಸಣ್ಣ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಬಿಜೆಪಿ ಕಲ್ಪಿಸಿಕೊಟ್ಟಿದೆ. ಈ ಉಪಚುನಾವಣೆಯಲ್ಲಿ ಸಣ್ಣ ಸಮುದಾಯಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಲಿವೆ ಎಂದು ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಲೋಹಿತ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಣ್ಣ ಸಮುದಾಯಗಳಿಗೆ ಒಳ ಮೀಸಲಾತಿ ವಿಚಾರದಲ್ಲಿ ಘೋರ ಅನ್ಯಾಯ ಮಾಡಿದೆ. ಇದನ್ನು ನಮ್ಮ ಸಮುದಾಯದವರು ಗಮನದಲ್ಲಿಟ್ಟುಕೊಂಡು ಈ ಭಾರಿ ಉಪಚುನಾವಣೆಯಲ್ಲಿ ತಕ್ಕ ಪಾಠವನ್ನು ಕಾಂಗ್ರೆಸ್‌ಗೆ ಕಲಿಸಲಿದ್ದಾರೆ ಎಂದರು.
ಧರ್ಮ ಜಾಗರಣೆ ಮಾಡಿಕೊಂಡು ಜೀವನ ನಡೆಸುವ ಅಲೆಮಾರಿ ಸಮುದಾಯಕ್ಕೆ ನ್ಯಾ. ನಾಗಮೋಹನ್ ದಾಸ ವರದಿ ಪ್ರಕಾರ ಶೇ. 1ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು ಅಂತ ಶಿಾರಸ್ಸು ಮಾಡಿದರೂ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು.
ಅಲೆಮಾರಿ ಸಮುದಾಯದ ಮುಖಂಡ ನಾಗೂರ ಮಾತನಾಡಿ, ನಗರದ ಸೆಟಲ್‌ಮೆಂಟ್ ಕಾಲೋನಿಯ ಜನಾಂಗದವರಿಗೆ ಎಸ್ಟಿ ವರ್ಗಕ್ಕೆ ಸೇರಿಸಿ ಗೆಜೆಟ್ ನೋಟಿಪಿಕೇಶನ್ ಹೊರಡಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.
ಸಾಯಿ ಕರ್ಮಚಾರಿ ಅಧ್ಯಕ್ಷ ಎಚ್. ಹಣಮಂತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿ ನಮ್ಮ ಸಮುದಾಯಕ್ಕೆ ಅನ್ಯಾಯವನ್ನು ಸರ್ಕಾರ ಮಾಡಿದೆ ಎಂದು ದೂರಿದರು.
ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿಯವರು ದಲಿತರಿಗೆ ಚುನಾವಣೆಯಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆ. ಇದರಿಂದ ದಲಿತರ ಮತ ಸೆಳೆಯಲು ಮುಂದಾಗಿದ್ದಾರೆ. ಇವರ ಆಮಿಷಕ್ಕೆ ದಲಿತರು ಒಲವು ತೋರಿಸುವುದಿಲ್ಲ ಎಂದು ಹೇಳಿದರು.
ಲೋಹಿತ ಕುಮಾರ, ಎಚ್. ಹಣಮಂತಪ್ಪ, ಮುತ್ತಣ್ಣ ಬೆಣ್ಣೂರ, ರಾಘವೇಂದ್ರ ನಾಗೂರ ಇದ್ದರು.