ಹುನಗುಂದ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದ ಬೈಕ್‌ಗಳು.. ಎಸ್ಪಿ ಸಿದ್ಧಾರ್ಥ ಗೋಯಲ್, ಡಿವೈಎಸ್ಪಿ ಸಂತೋಷ ಬನಹಟ್ಟಿ , ಹುನಗುಂದ ಸಿಪಿಐ ಎಸ್.ಬಿ.ಆಜೂರ, ಪಿಎಸ್‌ಐ ಎಸ್.ಜಿ.ಆಲದಕಟ್ಟಿ ಇದ್ದರು. 
ಬಾಗಲಕೋಟೆ

16 ಲಕ್ಷ ರೂ. ಮೌಲ್ಯದ ಬೈಕ್‌ಗಳು ಜಪ್ತಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಎಸ್ಪಿ ಸಿದ್ಧಾರ್ಥ ಗೋಯಲ್ ಹೇಳಿಕೆ
  • ಮೂವರು ಕಳ್ಳರು ನ್ಯಾಯಾಂಗ ಬಂಧನಕ್ಕೆ
  • ವಿವಿಧ ಕಳ್ಳತನ ಪ್ರಕರಣ ಬೇಧಿಸಿ 16 ಲಕ್ಷ ರೂ. ಮೌಲ್ಯದ 27 ಬೈಕ್ ಜಪ್ತಿ
ಹುನಗುಂದ: ವಿವಿಧ ಕಳ್ಳತನ ಪ್ರಕರಣ ಬೇಧಿಸಿ 16 ಲಕ್ಷ ರೂ. ಮೌಲ್ಯದ 27 ಬೈಕ್ ಜಪ್ತಿ ಮಾಡಿ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಮತ್ತು ನಗರದ ವಿವಿಧ ಭಾಗಗಳಲ್ಲಿ ಪಾಕಿರ್ಂಗ್ ಮಾಡಿದ್ದ ಬೈಕ್ ಕಳವು ಕುರಿತು ಪ್ರಕರಣ ದಾಖಲಾಗಿದ್ದವು. ಹುನಗುಂದ ಡಿವೈಎಸ್ಪಿ ಸಂತೋಷ ಬನಹಟ್ಟಿ ಹುನಗುಂದ ಸಿಪಿಐ ಎಸ್.ಬಿ.ಆಜೂರ, ಪಿಎಸ್‌ಐ ಎಸ್.ಜಿ.ಆಲದಕಟ್ಟಿ, ಕ್ರೈಂ ಪಿಎಸ್‌ಐ ಎನ.ಎಸ್.ಸಿಮಾನಿ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ 7 ಬಜಾಜ ಪಲ್ಸರ್, 12 ಹೊಂಡಾ ಶೈನ್, 5 ಹೊಂಡಾ ಯೂನಿಕಾರ್ನ, ಎರಡು ಹಿರೋ ಹೊಂಡಾ ಪ್ಯಾಸೆನ್ ಪ್ರೋ ಮೋಟಾರ್, ಹಿರೋ ಸ್ಪೇಂಡರ್ ಹೀಗೆ 16 ಲಕ್ಷ ರೂ. ಮೌಲ್ಯದ 37 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ರಾಯಚೂರ ಜಿಲ್ಲೆಯ ದೇವದುರ್ಗ ಮೂಲದ ಮೂವರು ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಬೇಧಿಸಿದ ಎಎಸ್‌ಐ ಎಸ್.ಬಿ.ಅಮಲಿಹಾಳ, ಐ.ಎಸ್.ಮಂಟ್ಯಾಳ, ಕೆ.ವೈ.ವಾಲೀಕರ, ಕಾನ್ಸೆಟಬ್‌ಲ ಎಂ.ಎಸ್.ನಾಗರಾಳ, ಸಿದ್ದಪ್ಪ ಕೌವಲಗಿ, ಬಿ.ಎನ್.ಗೌಡರ, ಎ.ಬಿ.ಯರದಾಳ, ಯಲ್ಲಪ್ಪ ಅಂಬಿಗೇರ, ಗಣೇಶ ಪವಾರ, ಆನಂದ ಗೋಲಪ್ಪನವರ, ಚಂದ್ರು ಜಟ್ಟೆಪ್ಪಗೋಳ, ಬಸವರಾಜ ಜಗಲಿ, ನಾಗರಾಜ ಕುಂದರಗಿ ಕಾರ್ಯಕ್ಕೆ ಎಸ್ಪಿ ಸಿದ್ಧಾರ್ಥ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.