ಚಿತ್ರದುರ್ಗದಲ್ಲಿ ಜು.೧೭ ರಂದು ನಡೆಯುವ ಭೋವಿ ಜನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಶನಿವಾರ ಬಾಗಲಕೋಟೆಯ ಭೋವಿ ಗುರುಪೀಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮಾಜದ ಮುಖಂಡರು. 
ಬಾಗಲಕೋಟೆ

ಜು. ೧೯ರಂದು ಭೋವಿ ಜನೋತ್ಸವ

ಬಾಗಲಕೋಟೆ: ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ೧೭ನೇ ಪಟ್ಟಾಭಿಷೇಕ ಮಹೋತ್ಸವ, ೨೮ನೇ ಲಾಂಛನ ದೀಕ್ಷಾ ಮಹೋತ್ಸವ, ೪೦ನೇ ಜನ್ಮ ವರ್ಧಂತ್ಯೋತ್ಸವದ ನಿಮಿತ್ತ ಜುಲೈ ೧೯ ರಂದು `ರಾಷ್ಟಿçÃಯ ಭೋವಿ ಜನೋತ್ಸವ' ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಸಮಾಜದ ಮುಖಂಡ ಸತೀಶ ಬಂಡಿ ತಿಳಿಸಿದರು.
ನವನಗರದ ಭೋವಿ ಗುರುಪೀಠದಲ್ಲಿ ಶನಿವಾರ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭೋವಿ ಜನಾಂಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಭ್ರಮದ ಆಚರಣೆಯಾದ ಈ ಉತ್ಸವಕ್ಕೆ ಬಾಗಲಕೋಟೆ ಭೋವಿ, ವಡ್ಡರ ಸಮಾಜದ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಜನೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಡಿಸಿಎಂ ಜಿ. ಪರಮೇಶ್ವರ, ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಯಿ ಹಾಗೂ ರಾಜ್ಯ ಸರ್ಕಾರದ ಅನೇಕ ಸಚಿವರು ಭಾಗವಹಿಸಲಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಶಿವರಾಜ ತಂಗಡಗಿ ನೇತೃತ್ವ ವಹಿಸುವರು. ಭೋವಿ ನಿಗಮದ ಅಧ್ಯಕ್ಷ ಎಂ ರಾಮಪ್ಪ ಸೇರಿದಂತೆ ಸಮಾಜದ ಹಾಲಿ ಮಾಜಿ ಶಾಸಕರು, ಸಂಸದರು, ಭೋವಿ ಸಮಾಜದ ಐಎಎಸ್, ಕೆಎಎಸ್ ಅಽಕಾರಿಗಳು ಉಪಸ್ಥಿತರಿರುವರು ಎಂದು ಸಭೆಯಲ್ಲಿ ಹೇಳಿದರು.
ಸಮಾಜದ ಮುಖಂಡ ಸಿದ್ದು ಬಂಡಿ ಮಾತನಾಡಿ, ಭೋವಿ ಜನೋತ್ಸವವು ಕೇವಲ ಒಂದು ಆಚರಣೆಯಷ್ಟೆ ಆಗಿರದೆ, ಸಮಾಜದ ಏಳಿಗೆ ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹತ್ತಾರು ಸತ್ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇಕಡಾ ೯೦ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿಎಚ್‌ಡಿ ಪದವೀಧರರಿಗೆ ಹಾಗೂ ಎಂಬಿಬಿಎಸ್ ಮುಗಿಸಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ರಕ್ತದಾನ ಶಿಬಿರ ಹಾಗೂ ಸಿದ್ಧರಾಮೇಶ್ವರರ ಕುರಿತು ವಿಶೇಷ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ. ಸಮಾಜದ ಯುವಜನತೆಗಾಗಿ ವಧು-ವರರ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮಾಜದ ಶ್ರೀಕಾಂತ ದೇವರು, ಮುಖಂಡರಾದ ಕೃಷ್ಣಪ್ಪ ಮಹಾರಾಜು, ತಿಪ್ಪಣ್ಣ ಒಡೆಯರಾಜು, ಹನುಮಂತ ಜೂಕೂರು, ರಾಮಾಂಜನೇಯ, ಅಶೋಕ ಉಮಾಲೋಟಿ, ಆರ್ ಎಫ್ ಮುಧೋಳ, ಹುಲ್ಲಪ್ಪ ಹಳ್ಳೂರು, ಅರ್ಜುನ ಬಂಡಿ, ಬೀಳಗಿ ಚಿನ್ನಪ್ಪ, ಭೀಮಸಿ ಬಂಡಿವಡ್ಡರ, ಮಲ್ಲೇಶ ಬಂಡಿ, ಅಶೋಕ ದೊಡ್ಡಮನಿ, ಲಕ್ಷ÷್ಮಣ ಉತ್ತೂರು ಮತ್ತಿತರರು ಇದ್ದರು.