ಗುಳೇದಗುಡ್ಡದ ಬಸಮ್ಮವ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬಸವ ಕೇಂದ್ರ ವತಿಯಿಂದ ಮಂಗಳವಾರ ಬಸವಜಯಂತಿ ಪೂರ್ವಭಾವಿ ಸಭೆ ನಡೆಯಿತು. ವಿಶ್ರಾಂತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ, ಅಕ್ಕಮಹಾದೇವಿ ಮಂದಿರದ ಶರಣಮ್ಮತಾಯಿ, ರಾಚಣ್ಣ ಕೆರೂರ, ಕಾಶಿನಾಥ ಶೆಟ್ಟರ, ದಾನಪ್ಪ ಬಂಡಿ, ಪುತ್ರಪ್ಪ ಬೀಳಗಿ, ಶ್ರೀಕಾಂತ ಗಡೇದ ಇತರರಿದ್ದರು.
- ಸಿದ್ದಲಿಂಗಪ್ಪ ಬರಗುಂಡಿ ಮಾಹಿತಿ
- ಏ. 20ರಂದು ಬಸವ ಜಯಂತಿಯನ್ನು ವಿಜಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ
- ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಮಸ್ತ ನಾಗರಿಕರು ಸೇರಿ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಗುಳೇದಗುಡ್ಡ: ಸ್ಥಳೀಯ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬಸವ ಕೇಂದ್ರದ ವತಿಯಿಂದ ಏ. 20ರಂದು ಬಸವ ಜಯಂತಿಯನ್ನು ವಿಜಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ತಿಳಿಸಿದರು.
ಸ್ಥಳೀಯ ಬಸಮ್ಮವ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಮಸ್ತ ನಾಗರಿಕರು ಸೇರಿ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದರು. ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಶಿವಯೋಗ, ಶರಣ ಧ್ವಜಾರೋಹಣ ಹಾಗೂ ಸಾಹಿತಿ ರವಿ ಕಂಗಳ ಅವರ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಕ್ಕಮಹಾದೇವಿ ಮಂದಿರದ ಶರಣಮ್ಮತಾಯಿ ಅಧ್ಯಕ್ಷತೆ ವಹಿಸಿದ್ದರು. ರಾಚಣ್ಣ ಕೆರೂರ, ಕಾಶಿನಾಥ ಶೆಟ್ಟರ, ದಾನಪ್ಪ ಬಂಡಿ, ಪುತ್ರಪ್ಪ ಬೀಳಗಿ, ಶ್ರೀಕಾಂತ ಗಡೇದ, ಬಸಲಿಂಗಯ್ಯ ಕಂಬಾಳಿಮಠ, ವಿಶ್ವನಾಥ ಅಂಗಡಿ, ರವಿ ಅಂಗಡಿ, ಸುರೇಶ ರಾಜನಾಳ, ಮುರುಗೇಶ ಶೇಖಾ, ಮಹಾದೇವಯ್ಯ ನೀಲಕಂಠಮಠ, ಚಂದ್ರಶೇಖರ ತೆಗ್ಗಿ, ಶರಣಪ್ಪ ಚಿಕ್ಕನರಗುಂದ, ಶಿವಾನಂದ ಸಿಂದಗಿ, ಸಂಗಮೇಶ ಹುಳಪಲ್ಲೇದ, ಸಂಗಣ್ಣ ಪಟ್ಟಶೆಟ್ಟಿ, ಹುಚ್ಚೇಶ ಸಿಂದಗಿ, ಬಸವರಾಜ ಬರಗುಂಡಿ, ರಾಚಪ್ಪ ಇತರರಿದ್ದರು.