ಗುಳೇದಗುಡ್ಡದಲ್ಲಿ ಮಾವಿನಹಣ್ಣು ಸಗಟು ಮಾರಾಟಗಾರರ ಮಳಿಗೆ ಮೇಲೆ ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಶೀಘ್ರ ಹಣ್ಣು ಮಾಡಲು ಬಳಸುತ್ತಿದ್ದ ರಾಸಾಯನಿಕವನ್ನು ವಶಪಡಿಸಿಕೊಂಡರು.
- ಪುರಸಭೆ ಅಧಿಕಾರಿಗಳಿಂದ ರಾಸಾಯನಿಕ ವಶ
- ನೋಟಿಸ್ ವಿತರಣೆ
- ಮಾವಿನ ಹಣ್ಣು ಸಗಟು ವ್ಯಾಪಾರಸ್ಥರು ಮಾವಿನಕಾಯಿಯನ್ನು ಶೀಘ್ರವಾಗಿ ಹಣ್ಣುಮಾಡಲು ರಾಸಾಯನಿಕ ಬಳಸುತ್ತಿದ್ದಾರೆ.
ಗುಳೇದಗುಡ್ಡ : ಪಟ್ಟಣದ ಮಾವಿನ ಹಣ್ಣು ಸಗಟು ವ್ಯಾಪಾರಸ್ಥರು ಮಾವಿನಕಾಯಿಯನ್ನು ಶೀಘ್ರವಾಗಿ ಹಣ್ಣುಮಾಡಲು ರಾಸಾಯನಿಕ ಬಳಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿ ಹಣ್ಣಿನ ಮಾರಾಟ ಮಳಿಗೆಗಳ ಮೇಲೆ ಗುರುವಾರ ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ರಾಸಾಯನಿಕ ಬಳಸಿ ಹಣ್ಣು ಮಾಡುವುದನ್ನು ಪರಿಶೀಲಿಸಿ, ಸಗಟು ಮಾರಾಟಗಾರರಾದ ಬುಡ್ಡೇಸಾಬ ಅಮೀನಸಾಬ ಬಾಗವಾನ, ದಾವಲಸಾಬ ಬಾಗವಾನ, ಹುಸೇನಸಾಬ ಬಾಗವಾನ ಅವರಿಗೆ ನೋಟಿಸ್ ನೀಡಿ, ಹಣ್ಣುಗಳನ್ನು ಹಾಗೂ ರಾಸಾಯನಿಕವನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ವರದಿ ಬಂದ ಮೇಲೆ ಕಾನೂನ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿ ಅಸ್ಲಂ ಮುಜಾವರ ತಿಳಿಸಿದ್ದಾರೆ.