ತೇರದಾಳ ಪುರಸಭೆಗೆ ನೀರಿನ ಸರಬರಾಜು ಸಮಸ್ಯೆ ಕುರಿತು ಆಡಳಿತಾಧಿಕಾರಿ ಶ್ವೇತಾ ಬೀಡಿಕರ ಸಾರ್ವಜನಿಕರೊಂದಿಗೆ ಮಾತನಾಡಿದರು.
- ಎಸಿ ಶ್ವೇತಾ ಬೀಡಿಕರ ಭರವಸೆ
- 50 ಲಕ್ಷ ರೂ. ವಿಶೇಷ ಅನುದಾನ ಬಳಕೆ
- ನೀರು ಸರಬರಾಜು ಕಾರ್ಮಿಕರ ವೇತನ ಪಾವತಿ ಮಾಡಲಾಗಿದೆ
ತೇರದಾಳ : ಪಟ್ಟಣಕ್ಕೆ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡುವ ಪಂಪ್ ಸೆಟ್ ದುರಸ್ತಿ ಹಾಗೂ ಜಾಕ್‌ವೆಲ್‌ಗೆ ಸ್ವಂತ ಟ್ರಾನ್ಸ್ ಫಾರ್ಮರ್ ಇಲ್ಲದ ಕಾರಣ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಕೂಡಲೇ ಸರಿಪಡಿಸಲಾಗುವುದು ಎಂದು ಪುರಸಭೆ ಆಡಳಿತಾಧಿಕಾರಿ ಹಾಗೂ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಭರವಸೆ ನೀಡಿದರು.
ಇಲ್ಲಿನ ಪುರಸಭೆಗೆ ಶನಿವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತೇರದಾಳ ಪುರಸಭೆಗೆ ಸಂಬಂಧಿಸಿದಂತೆ ನೀರು ಸರಬರಾಜು ಕಾರ್ಮಿಕರ ವೇತನ ಪಾವತಿ ಮಾಡಲಾಗಿದೆ. ಹಳಿಂಗಳಿಯ ಜಾಕ್‌ವೆಲ್‌ನಲ್ಲಿ ನೀರೆತ್ತುವ ಪಂಪ್‌ಸೆಟ್‌ಗೆ ಅವಶ್ಯವಿರುವ ವಿದ್ಯುತ್ ಸರಬರಾಜಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟ್ರಾನ್ಸ್‌ಫಾರ್ಮರ್‌ನಿಂದ ಬಳಸಲಾಗುತ್ತಿದ್ದು, ಅವರಿಗೂ ಅದು ಅವಶ್ಯವಾದ್ದರಿಂದ ಆಗಾಗ ಸಮಸ್ಯೆ ಉಂಟಾಗಿದೆ. ಈಗ ಸ್ವಂತ ಟಿಸಿ ಅಳವಡಿಸಲು ಜಿಲ್ಲಾಧಿಕಾರಿಗಳ ಒಪ್ಪಿಗೆ
ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಪಿಆರ್‌ಡಿಯವರಿಗೆ ಸೂಚನೆ ನೀಡಲಾಗಿದೆ. ಜಾಕ್‌ವೆಲ್‌ನಲ್ಲಿ ಈಗಿರುವ ಪಂಪ್‌ಸೆಟ್ ಜೊತೆಗೆ ಇನ್ನೊಂದು ಪಂಪಸೆಟ್ ಖರೀದಿಸಲಾಗುವುದು. ಸರ್ಕಾರ ಪುರಸಭೆಗೆ ನೀಡಿದ ವಿಶೇಷ ಅನುದಾನದಲ್ಲಿ 50 ಲಕ್ಷ ರೂ. ಅನುದಾನ ಇದೆಲ್ಲದಕ್ಕಾಗಿ ಬಳಸಲಾಗುವುದು. 24/7 ನೀರು ಸರಬರಾಜಿಗೆಂದು ಪೈಪ್‌ಲೈನ್ ಅಳವಡಿಸಲು ಅಗೆದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಸಿಬ್ಬಂದಿ ಸಭೆಯ ಬಳಿಕ ಪುರಸಭೆ ಫಿಲ್ಟರ್ ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ತ್ಯಾಜ್ಯ ವಸ್ತು ಶುದ್ಧಿಕರಣ ಘಟಕದಲ್ಲಿ ಲೆಗಸಿ ವೇಸ್ಟ್ ಪರಿಶೀಲಿಸಿದರು. ನಂತರ ಹಳಿಂಗಳಿ ಬಳಿ ಕೃಷ್ಣಾ ನದಿ ತೀರದಲ್ಲಿರುವ ಜಾಕ್‌ವೇಲ್ ರಿಪೇರಿ ಕೆಲಸವನ್ನು ವೀಕ್ಷಣೆ ವಿಕ್ಷಿಸಿ, ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತೇರದಾಳ ತಹಸೀಲ್ದಾರ ವಿಜಯಕುಮಾರ ಕಡಕೋಳ, ಪುರಸಭೆ ಮುಖ್ಯಾಧಿಕಾರಿ ರ್ಇಾನ್ ಝಾರೆ, ಜೆಇ ಭಾಗ್ಯಶ್ರೀ ಪಾಟೀಲ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ ಸೇರಿ ಇತರರಿದ್ದರು.