ಲೋಕಾಪುರ ಸಮೀಪದ ಚಿಕ್ಕೂರ ಗ್ರಾಮದಲ್ಲಿ ಕೋಳದಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರನ್ನು ಸನ್ಮಾನಿಸಲಾಯಿತು. ವೈ.ಜಿ. ದಾಸರಡ್ಡಿ, ಕೆ.ಆರ್. ಮಾಚಪ್ಪನವರ, ಧರೆಪ್ಪ ಸಾಂಗ್ಲೀಕರ, ಹಣಮಂತ ತುಳಸಿಗೇರಿ, ಎಂ.ಎಂ. ವಿರಕ್ತಮಠ, ಲೋಕಣ್ಣ ಕತ್ತಿ ಇದ್ದರು.
- ಸಂಸದ ಗೋವಿಂದ ಕಾರಜೋಳ ಅಭಿಮತ
- ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ
- ಕಬಡ್ಡಿ ಪಂದ್ಯಾವಳಿ
ಲೋಕಾಪುರ: ಕಬಡ್ಡಿ ಪಂದ್ಯಾವಳಿ ಪ್ರಪಂಚದಲ್ಲೇ ಹೆಚ್ಚು ಮನ್ನಣೆ ಪಡೆಯುತ್ತಿರುವ ಗ್ರಾಮೀಣ ಕ್ರೀಡೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಸಮೀಪದ ಚಿಕ್ಕೂರ ಗ್ರಾಮದಲ್ಲಿ ಈಚೆಗೆ ಕೊಳದಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಹಿಳಾ ಮುಕ್ತ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗುರಿಯಿಲ್ಲದೆ ಯಾವುದೇ ಸಾಧನೆ ಶೂನ್ಯವಾಗಿದೆ. ಮುಂದೆ ನಾವು ಏನಾಗಬೇಕೆಂಬುದನ್ನು ಇಂದೇ ತೀರ್ಮಾನಿಸಬೇಕು. ಅದರಲ್ಲಿ ಮುನ್ನಡೆಯಬೇಕು, ಕಬಡ್ಡಿ ಪಂದ್ಯ ಎಲ್ಲಾ ಪಂದ್ಯಗಳಂತೆ ಜನಪ್ರಿಯತೆ ಪಡೆಯುತ್ತಿದೆ, ಮಹಿಳೆಯರಿಗೆ ಇದರಲ್ಲಿ ಮುಕ್ತ ಅವಕಾಶವಿದೆ ಎಂದರು.
ಕಬಡ್ಡಿ ಪಟುಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ, ಕ್ರೀಡೆಯ ಜತೆಗೆ ಶಿಕ್ಷಣದಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಉನ್ನತ ಉದ್ಯೋಗ ದೊರೆತಾಗ ಜವಾಬ್ದಾರಿ ನಿರ್ವಹಿಸಲು ಕಷ್ಟವಾಗುತ್ತದೆ ಎಂದರು.
ವೈ.ಜಿ. ದಾಸರಡ್ಡಿ, ಕೆ.ಆರ್. ಮಾಚಪ್ಪನವರ, ಧರೆಪ್ಪ ಸಾಂಗ್ಲೀಕರ, ಹಣಮಂತ ತುಳಸಿಗೇರಿ, ಎಂ.ಎಂ. ವಿರಕ್ತಮಠ, ಲೋಕಣ್ಣ ಕತ್ತಿ, ಸಂಗನಗೌಡ ಕಾತರಕಿ, ಕಾಶಿನಾಥ ಹುಡೇದ, ಪ್ರಕಾಶ ಚಿತ್ತರಗಿ, ಕೆ.ಜಿ. ವಜ್ಜರಮಟ್ಟಿ, ದುಂಡಪ್ಪ ದಾಸರಡ್ಡಿ, ಗೋಪಾಲ ದಾಸರಡ್ಡಿ, ಅರುಣ ಮುಧೋಳ, ಪಾಂಡು ದಾಸರಡ್ಡಿ, ಹಣಮಂತ ದಾಸನಗೌಡ್ರ ಇದ್ದರು.
ಕರ್ನಾಟಕ, ಪಂಜಾಬ್, ರಾಜಸ್ಥಾನ, ಹರಿಯಾಣ ವಿವಿಧ ರಾಜ್ಯದ ಕಬಡ್ಡಿ ಟಿಂ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮೊದಲನೇ ಬಹುಮಾನವನ್ನು ಮೈಸೂರು ಟಿಂ ತನ್ನದಾಗಿಸಿಕೊಂಡಿತು. ಎರಡನೇ ಬಹುಮಾತನ ಚಿಂಚಲಿ ತಂಡ ಪಡೆದುಕೊಂಡಿತು.