ಜಮಖಂಡಿ ತಾಲೂಕಿನ ತಾಲೂಕಿನ ಚಿಕ್ಕಲಕಿ ಕ್ರಾಸ್‌ಬಳಿ ಕಬ್ಬು ಬೆಳೆಗಾರರು ಧಾರವಾಡ- ವಿಜಯಪುರ ಹೆದ್ದಾರಿ ಬಂದ್‌ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು. 
ಬಾಗಲಕೋಟೆ

ರಾಜ್ಯ ಹೆದ್ದಾರಿ ತಡೆದು ಅನ್ನದಾತರ ಪ್ರತಿಭಟನೆ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಪ್ರತಿ ಟನ್ ಕಬ್ಬಿಗೆ 3500 ರೂ. ಬೆಲೆ ನಿಗದಿಗೆ ಆಗ್ರಹ
  • ಧಾರವಾಡ- ವಿಜಯಪುರ ಹೆದ್ದಾರಿ ಬಂದ್
  • ಸಂಚಾರಕ್ಕೆ ವ್ಯತ್ಯಯ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು
ಜಮಖಂಡಿ : ಕಬ್ಬಿನ ಬೆಳೆಗೆ ಪ್ರತಿಟನ್‌ಗೆ 3500 ರೂ. ಗಳ ಬೆಲೆ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ರೈತರು ತಾಲೂಕಿನ ಚಿಕ್ಕಲಕಿ ಕ್ರಾಸ್‌ಬಳಿ ಧಾರವಾಡ-ವಿಜಯಪುರ ಹೆದ್ದಾರಿ ಬಂದ್‌ಮಾಡಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಧಾರವಾಡ- ವಿಜಯಪುರ ಹೆದ್ದಾರಿ ಬಂದ್ ಮಾಡಿದ್ದರಿಂದ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೈತ ಮುಖಂಡ ಬಿ.ಎಸ್. ಸಿಂಧೂರ ಸೇರಿ ವಿವಿಧ ಮಠಾಧೀಶರು, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಷ್ಟಪಟ್ಟು ಬೆಳೆದರೂ ಸೂಕ್ತಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ವಿಲವಾಗಿದೆ. ಗರಿಷ್ಠ ಗುಣಮಟ್ಟಕ್ಕೆ ಕಬ್ಬು ಬೆಳೆಯಲಾಗಿದೆ. ಜಾಲಿ ಕಟ್ಟಿಗೆಗೆ ಕೆಜಿಗೆ 6 ರೂ. ಬೆಲೆ ಇದೆ. ಆದರೆ ಕಬ್ಬಿನ ಬೆಲೆ ಪ್ರತಿ ಕೆಜಿಗೆ 30 ರೂ. ಕಾರ್ಖಾನೆ ನೀಡುತ್ತಿದೆ. ಕಾರ್ಖಾನೆ ಮಾಲೀಕರು ಬೇರೆ ಬೇರೆ ಪಕ್ಷದಲ್ಲಿದ್ದರೂ ಎಲ್ಲರೂ ಒಂದಾಗಿ ಬೆಲೆ ನಿಗದಿ ಪಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಗ ಬದಲಾಯಿಸಿದ ಪ್ರಯಾಣಿಕರು
ಜಮಖಂಡಿಯಿಂದ ವಿಜಯಪುರದ ಕಡೆಗೆ ಹೋಗುವ ವಾಹನಗಳು ಕವಟಗಿ ಕ್ರಾಸ್, ಬಿದರಿ, ಗುಣದಾಳ, ಕಂಬಾಗಿ, ಹಲಗಣಿ, ಬಬಲೇಶ್ವರ ಮುಖಾಂತರ ಸಂಚರಿಸಬೇಕಾಯಿತು. ಅದರಂತೆ ಗೋಠೆ ಗದ್ಯಾಳ, ತಿಕೊಟಾ ಮೂಲಕ ಸಂಚರಿಸಲು ಅನ್ಯ ಮಾರ್ಗ ಕಂಡುಕೊಂಡರು.