ಗುಳೇದಗುಡ್ಡ ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲೂಕು ಘಟಕದ ಮಾಜಿ ಗೌರವ ಕಾರ್ಯದರ್ಶಿ ಯಲ್ಲಪ್ಪ ಮನ್ನಿಕಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಪರಶುರಾಮ ಮಾದರ, ಗುಂಡಪ್ಪ ಕೋಟಿ, ಚಂದ್ರಶೇಖರ ಕಾಳನ್ನವರ ಇದ್ದರು. 
ಬಾಗಲಕೋಟೆ

ನಕಲಿ ಸಹಿ, ಹಣ ದುರುಪಯೋಗದ ಆರೋಪ

ಪ್ರಮುಖ ಮುಖ್ಯಾಂಶಗಳು

  • ಕಸಾಪ ಜಿಲ್ಲಾಧ್ಯಕ್ಷರ ವಿರುದ್ಧ ಮಾಜಿ ಗೌರವ ಕಾರ್ಯದರ್ಶಿ ಯಲ್ಲಪ್ಪ ಮನ್ನಿಕಟ್ಟಿ ಹೇಳಿಕೆ
  • ದಾಖಲೆ ಬಿಡುಗಡೆ
  • ನಕಲಿ ಸಹಿಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ
ಗುಳೇದಗುಡ್ಡ : ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಗುಳೇದಗುಡ್ಡ ತಾಲೂಕು ಘಟಕದ ಕಸಾಪ ಅಧ್ಯಕ್ಷ ಎಚ್.ಎಸ್. ಘಂಟಿ ಅವರ ನಕಲಿ ಸಹಿಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕಸಾಪ ತಾಲೂಕು ಘಟಕದ ಮಾಜಿ ಗೌರವ ಕಾರ್ಯದರ್ಶಿ ಯಲ್ಲಪ್ಪ ಮನ್ನಿಕಟ್ಟಿ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾಹಿತಿ ಹಕ್ಕು ಅನಿಯಮದಡಿ ಲಭ್ಯವಾಗಿರುವ ದಾಖಲೆಗಳಿಂದ ಬಹಿರಂಗವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅವರ ಅಜೀವ ಸದಸ್ಯತ್ವ ರದ್ದು ಮಾಡಬೇಕು. ಸಂಬಂಧಪಟ್ಟ ಕೇಂದ್ರ ಕಸಾಪ ಆಡಳಿತಾಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಸಾಪ ಜಿಲ್ಲಾಧ್ಯಕ್ಷರು 2021ರಿಂದ 2026ರ ಜೂನ್ ವರೆಗೆ ತಾಲೂಕಿನಲ್ಲಿ ಮೂರು ವರ್ಷ ದತ್ತಿ ಮಾಡಿದ್ದು, ಸಂಸ್ಥಾಪನಾ ದಿನಾಚರಣೆ ಮತ್ತು ನಿರ್ವಹಣಾ ವೆಚ್ಚ ಎರಡು ವರ್ಷ ಸಮ್ಮೇಳನದ ಹಣ ನೀಡಿಲ್ಲ. ಆದರೆ ಜಿಲ್ಲಾ ಕಸಾಪದ ರಶೀದಿಯಲ್ಲಿ ನಿರ್ವಹಣಾ ಇತರೆ ವೆಚ್ಚಗಳು ಸಂದಾಯವಾಗಿವೆ. ಜಿಲ್ಲಾಧ್ಯಕ್ಷರು ಪೋರ್ಜರಿ ಸಹಿಮಾಡಿ ಹಣ ತೆಗೆದು ತಾಲೂಕಿಗೆ ನೀಡಿರುವುದಿಲ್ಲ. ಇವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಪರಶುರಾಮ ಮಾದರ, ಗುಂಡಪ್ಪ ಕೋಟಿ ಇದ್ದರು.
"

ಜಿಲ್ಲಾ ಪದಾಧಿಕಾರಿಗಳ ಸಭೆಗಳನ್ನು ಮಾಡದೇ ಸರ್ವಾಧಿಕಾರಿ ಧೋರಣೆ ಅನುಸರಿಸಿ. ಗೌರವ ಕಾರ್ಯದರ್ಶಿಗಳ ಗಮನಕ್ಕೂ ತರದೆ ಕಸಾಪ ನಿಬಂಧನೆಗಳನ್ನು ಉಲ್ಲಂಸಿ ಕಾರ್ಯಚಟುವಟಿಕೆ ಮಾಡಿದ್ದಾರೆ. ಜಿಲ್ಲಾಧ್ಯಕ್ಷರ ಮೇಲೆ ಕಾನೂನು ಬದ್ಧ ಕ್ರಮ ಜರುಗಿಸಬೇಕು.
-ಚಂದ್ರಶೇಖರ ಕಾಳನ್ನವರ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ

"

ಮಾಹಿತಿ ಹಕ್ಕಿನಡಿ ಲಭ್ಯವಾದ ದಾಖಲೆಯಲ್ಲಿ ನನ್ನ ನಕಲಿ ಸಹಿಮಾಡಿ ಹಣ ಪಡೆದುಕೊಂಡು ತಾಲೂಕು ಘಟಕಕ್ಕೆ ನೀಡದೆ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಕೂಡಲೆ ಜಿಲ್ಲಾಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನೆರಡು ದಿನಗಳಲ್ಲಿ ದಾಖಲೆ ಸಮೇತ ಕೇಂದ್ರ ಕಸಾಪಕ್ಕೆ ದೂರು ನೀಡಲಾಗುವುದು.
- ಎಚ್.ಎಸ್. ಘಂಟಿ ಕಸಾಪ ತಾಲೂಕು ಮಾಜಿ ಅಧ್ಯಕ್ಷ ಅಧ್ಯಕ್ಷ