ಮುಧೋಳ ಸಿಪಿಐ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಪಿಐ ಎಂ. ನಾಗರಡ್ಡಿ ಮಾತನಾಡಿದರು. ಜಮಖಂಡಿ ಡಿವೈಎಸ್ಪಿ ಮಹ್ಮದ್ ರೋಷನ್ ಹಾಗೂ ಲಾಡ್ಜ್, ಬಾರ್ ಮಾಲೀಕರು ಇದ್ದರು. 
ಬಾಗಲಕೋಟೆ

ನಿಯಮ ಉಲ್ಲಂಸಿದರೆ ಕ್ರಮ ಗ್ಯಾರಂಟಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಎಂ. ನಾಗರಡ್ಡಿ ಖಡಕ್ ಎಚ್ಚರಿಕೆ,
  • ಮದ್ಯ ಮಾರಾಟ ಲಾಡ್ಜ್ ಮಾಲೀಕರೊಂದಿಗೆ ಸಭೆ
  • ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಬಾರದು
ಮುಧೋಳ: ನಗರದಲ್ಲಿ ಮದ್ಯ ಮಾರಾಟ ಹಾಗೂ ಲಾಡ್ಜ್ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಮುಧೋಳ ಸಿಪಿಐ ಎಂ. ನಾಗರಡ್ಡಿ ಹೇಳಿದರು.
ನಗರದ ಸಿಪಿಐ ಕಚೇರಿಯಲ್ಲಿ ಮಂಗಳವಾರ ಸ್ಥಳೀಯ ಮದ್ಯ ಮಾರಾಟಗಾರರು ಮತ್ತು ಲಾರ್ಡ್ಜ್ ಮಾಲೀಕರಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಬಾರದು. ಈ ಬಗ್ಗೆ ಬಾರ್ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.
ಅಲ್ಲದೇ ಗ್ರಾಹಕರ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಮದ್ಯ ಪೂರೈಸಬೇಕು ಮತ್ತು ಬಾರ್‌ಗಳಿಗೆ ಮಕ್ಕಳು ಪ್ರವೇಶಿಸದಂತೆ ಸಿಬ್ಬಂದಿ ನಿಯೋಜಿಸಬೇಕು ಎಂದು ನಿರ್ದೇಶನ ನೀಡಿದರು.

ಕಠಿಣ ಕ್ರಮದ ಎಚ್ಚರಿಕೆ

ಇನ್ನು ಮುಂದೆ ಬಾರ್ ಮತ್ತು ಲಾರ್ಡ್ಜ್‌ಗಳ ಆವರಣದಲ್ಲಿ ಸಿಸಿ ಕ್ಯಾಮರಾ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ಗಲಾಟೆಗಳು ನಡೆದರೆ, ಅದಕ್ಕೆ ಮಾಲೀಕರೆ ನೇರ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದರು. ಲಾರ್ಡ್ಜ್‌ಗಳಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ಅಥವಾ ವೇಶ್ಯಾವಾಟಿಕೆ ನಡೆಯದಂತೆ ನಿಗಾ ವಹಿಸಬೇಕು. ಹೋಟೆಲ್‌ಗಳಲ್ಲಿ ಅಪ್ರಾಪ್ತರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಖಡಕ್ ಸೂಚನೆ ನೀಡಿದರು.
ಜಮಖಂಡಿ ಡಿವೈಎಸ್‌ಪಿ ಮಹ್ಮದ್ ರೋಶನ್ ಕಾನೂನು ಪಾಲನೆಯ ಮಹತ್ವದ ಕುರಿತು ಮಾತನಾಡಿದರು. ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಉಲ್ಲಂಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
"

ರಾಜ್ಯದಲ್ಲಿ ಯುವ ಜನತೆ ಮತ್ತು ಅಪ್ರಾಪ್ತ ವಯಸ್ಕರು ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಅನಿಷ್ಠಗಳನ್ನು ನಿಯಂತ್ರಿಸಲು ಅಬಕಾರಿ ಕಾಯ್ದೆ ಮತ್ತು ಎನ್‌ಡಿಪಿಎಸ್ ಕಾಯ್ದೆ ಸಮರ್ಪಕವಾಗಿ ಜಾರಿಗೆ ತರಲಾಗುವುದು. ದೇಶದ ಭವಿಷ್ಯದ ದೃಷ್ಟಿಯಿಂದ ಈ ಕ್ರಮಗಳು ಅನಿವಾರ್ಯ. ಒಂದು ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಹದಿನೇಳು ವಷರ್ಕ್ಕಿಂತ ಕಡಿಮೆ ವಯಸ್ಸಿನ ಅನೇಕ ಮಕ್ಕಳು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ.
- ಮಹ್ಮದ್ ರೋಶನ್ ಡಿವೈಎಸ್‌ಪಿ ಜಮಖಂಡಿ