ಗದ್ದನಕೇರಿ ಕ್ರಾಸ್‌ನಲ್ಲಿ ಶಾಸಕ ಜೆ.ಟಿ.ಪಾಟೀಲ ಅಽಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.  
ಬಾಗಲಕೋಟೆ

ಗದ್ದನಕೇರಿ ಕ್ರಾಸ್‌ನಲ್ಲಿ ಬಸ್ ನಿಲ್ದಾಣಕ್ಕೆ ಕ್ರಮ

ಬಾಗಲಕೋಟೆ: ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗದ್ದನಕೇರಿಕ್ರಾಸ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಜಿಲ್ಲಾಕಾರಿ ಸಂಗಪ್ಪ ಸೇರಿದಂತೆ ಸಂ¨Aಸಿದ ಅಕಾರಿಗಳೊಂದಿಗೆ ಸೋಮವಾರ ಗದ್ದನಕೇರಿಕ್ರಾಸ್ ವಿಜಯಪೂರ ರಸ್ತೆ ಪಕ್ಕ ಗ್ರಾಮ ಪಂಚಾಯಿತಿಗೆ ಸೇರಿದ ಸ್ಥಳದಲ್ಲಿ ಬಸ್ ನಿಲ್ದಾಣ ಸ್ಥಳ ಪರಿಶೀಲಿಸಿ, ಮಾತನಾಡಿದ ಅವರು, ರಾಜ್ಯ ಹಾಗೂ ಹೆದ್ದಾರಿಗಳು ಕೂಡುವ ಗದ್ದನಕೇರಿ ಕ್ರಾಸ್ ದಿನೇ ದಿನೇ ಬೆಳೆಯುತ್ತಿದ್ದು, ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಬಸ್ ನಿಲ್ದಾಣವಿಲ್ಲದೇ ಪರಿತಪಿಸುವಂತಾಗಿದೆ. ಅಲ್ಲದೇ ಗದ್ದನಕೇರಿಕ್ರಾಸ್‌ನಲ್ಲಿ ಗ್ರಾಮೀಣ ಪ್ರದೇಶದ ಜನ, ತರಕಾರಿ ಮಾರಾಟ ಮಾಡುವವರು ಸಹ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರು ಎಂದರು.
ಸುಮಾರು ೫೦ ರಿಂದ ೬೦ ಲಕ್ಷಗಳಲ್ಲಿ ಮಾರುಕಟ್ಟೆ ಮಾಡಲಾಗುತ್ತಿದೆ ಎಂದ ಅವರು ೩೦ ಲಕ್ಷಗಳನ್ನು ಬಸ್ ನಿಲ್ದಾಣಕ್ಕೆ ಇಡಲಾಗಿದ್ದು, ಇನ್ನಷ್ಟು ಹಣ ಕ್ರೋಡಿಕರಿಸಿ ಸುಂದರ ಬಸ್ ನಿಲ್ದಾಣ ಮಾಡಲಾಗುವುದು ಎಂದರು. ಈಗಾಗಲೇ ಬಸ್ ನಿಲ್ದಾಣದ ನೀಲನಕ್ಷೆ ತಯಾರಿಸಲಾಗಿದ್ದು, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿ ಹೆಚ್ಚಿನ ಹಣ ಕ್ರೋಡಿಕರಿಸಿ ಬಹುದಿನದ ಕನಸಾಗಿದ್ದ ಬಸ್ ನಿಲ್ದಾಣ ನಿರ್ಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಕಾರಿ ಸಂಗಪ್ಪ, ಬಾಗಲಕೋಟೆ ಉಪವಿಭಾಗಾಕಾರಿ ಸಂತೋಷ ಜಗಲಾಸರ, ಉಪ ಅರಣ್ಯ ಸಂರಕ್ಷಣಾಕಾರಿ ಸ್ವಪ್ನಿಲ್ ಅಹಿರೆ, ನಗರಸಭೆ ಆಯುಕ್ತ ವಾಸಣ್ಣ ಆರ್. ತಹಶೀಲ್ದಾರ ವಾಸುದೇವಸ್ವಾಮಿ, ಡಿಪೋ ಮ್ಯಾನೇಜರ್ ಚವ್ಹಾಣ, ಗದ್ದನನೇರಿ ಗ್ರಾಮ ಪಂಚಾಯಿತಿ ಅಕಾರಿ ಆರತಿ ಕೊಲ್ಹಾರ ಹಾಗೂ ನಿರ್ಮಿತಿ ಕೇಂದ್ರದ ಅಕಾರಿಗಳು ಸೇರಿದಂತೆ ಇತರರು ಇದ್ದರು.