ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿಜಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಎಸ್.ಎನ್.ಹಿರೇಮಠ, ವಿ.ಎಂ.ತೆಗ್ಗಿ, ಲೋಕಣ್ಣ ಕತ್ತಿ, ಪ್ರಕಾಶ ಚುಳಕಿ, ಗೋವಿಂದಪ್ಪ ಕೌಲಗಿ, ರವಿ ಹಡಪದ, ಸದಾಶಿವ ನಾವಿ ಇತರರಿದ್ದರು.
- ನಿವೃತ್ತ ಪ್ರಾಚಾರ್ಯ ವಿ.ಬಿ. ಮಾಳಿ ಹೇಳಿಕೆ
- ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಲೋಕಾಪುರ: ಹನ್ನೆರಡನೇ ಶತಮಾನದಲ್ಲಿಯೇ ಸಮಾಜದಲ್ಲಿ ಸರ್ವ ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿ ಆದರ್ಶ ಸಮಾಜ ನಿರ್ಮಾಣ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟು ಸಮಾಜ ಸುಧಾರಣೆ, ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡು ಶಿವಶರಣ ಹಡಪದ ಅಪ್ಪಣ್ಣ ಒಬ್ಬ ಮಹಾನ್ ಮಾನವತಾವಾದಿ ಎಂದು ನಿವೃತ್ತ ಪ್ರಾಚಾರ್ಯ ವಿ.ಬಿ.ಮಾಳಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿಜಶರಣ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವ ಧರ್ಮಗಳ ಗುರಿಯೂ ಒಂದೇ ಆಗಿದ್ದು ಅದು ಕೇವಲ ಮಾನವನ ಕಲ್ಯಾಣವಾಗಿದೆ, ಇಂತಹ ಸಾರ್ವತ್ರಿಕ ಸತ್ಯವನ್ನು 12 ಶತಮಾನಗಳ ಹಿಂದೆಯೇ ಹಡಪದ ಅಪ್ಪಣ್ಣನವರ ಸಾರಿದ್ದರು ಎಂದರು.
ಎಸ್.ಎನ್. ಹಿರೇಮಠ ಮಾತನಾಡಿ, ಜನರಲ್ಲಿ ಇತ್ತೀಚೆಗೆ ಧಾರ್ಮಿಕ ಭಾವನೆಗಳು ಹಾಗೂ ಮಾನವೀಯ ಮೌಲ್ಯಗಳು ಇನ್ನಿಲ್ಲದಂತಾಗಿದೆ, ಸ್ವಾರ್ಥಕ್ಕಾಗಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ತಾವು ಬದುಕಿರುವ ಸಮಾಜಕ್ಕೆ ಏನು ಕೊಡಬಲ್ಲರು ಎಂಬುದನ್ನು ತಿಳಿಯುವುದು ಕಷ್ಟವಾಗಿದೆ, ಸಮಾಜದಲ್ಲಿ ಹತ್ತು ಹಲವು ಸಂಘರ್ಷಗಳು ನಡೆಯುತ್ತಿದ್ದು ಧರ್ಮ ಪರಿಪಾಲನೆಯಿಂದ ಮಾತ್ರ ಜನರಲ್ಲಿ ಸಾಮರಸ್ಯ ಮೂಡಲು ಸಾಧ್ಯವೆಂದರು.
ಡಾ. ಸಂತೋಷ ಶೆಟ್ಟರ ಹಡಪದ ಅಪ್ಪಣ್ಣನವರ ವಿಚಾರ ಧಾರೆ ಬಗ್ಗೆ ಮಾತನಾಡಿದರು. ಬಸವೇಶ್ವರ ಹಾಗೂ ವಾಲ್ಮೀಕಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದ ಗಣ್ಯರು ಸಂಭ್ರಮದಿಂದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ವಿ.ಎಂ.ತೆಗ್ಗಿ, ಲೋಕಣ್ಣಾ ಕತ್ತಿ, ಪ್ರಕಾಶ ಚುಳಕಿ, ಯಮನಪ್ಪ ಹೊರಟ್ಟಿ, ಪರಮಾನಂದ ಟೊಪಣ್ಣವರ, ಅಲ್ಲಾಸಾಬ ಯಾದವಾಡ, ವಿನೋದ ಘೋರ್ಪಡೆ, ಹಣಮಂತಗೌಡ ಪಾಟೀಲ, ರವಿ ಬೋಳಿಶೆಟ್ಟಿ, ಮೈಬೂಬ ರಾಮದುರ್ಗ, ಗೋವಿಂದಪ್ಪ ಕೌಲಗಿ, ಮಹೇಶ ಹುಗ್ಗಿ, ಬೀರಪ್ಪ ಮಾಯಣ್ಣವರ, ವಿರೇಶ ಪಂಚಕಟ್ಟಿಮಠ, ಆನಂದ ಹವಳಖೋಡ, ದೇವಣ್ಣ ದಾಸರಡ್ಡಿ, ಸುರೇಶ ಪೂಜಾರಿ, ಮುತ್ತಪ್ಪ ಚೌಧರಿ ಇತರರಿದ್ದರು.