ಬಾಗಲಕೋಟೆ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಎಂ.ಬಿ.ಸೌದಾಗರ, ಎಂ.ಎಲ್.ಕೆAಪಲಿAಗಣ್ಣವರ, ಹನಮಂತ ಕಾಖಂಡಕಿ ಇತರರು ಇದ್ದರು. 
ಬಾಗಲಕೋಟೆ

ಅಸ್ಪೃಶ್ಯತೆ ಜೀವಂತವಾಗಿಡುವ ಹುನ್ನಾರ

ಸಂತೋಷ ದೇಶಪಾಂಡೆ
ಬಾಗಲಕೋಟೆ: ಡಾ.ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಅನುಯಾಯಿ, ಉನ್ನತ ಸ್ಥಾನದಲ್ಲಿ ಇರುವ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡುವ ಮೂಲಕ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ ಬದಲಿಗೆ ಅದನ್ನು ಜೀವಂತ ಇರಿಸುವ ಹುನ್ನಾರವನ್ನು ಬಲವಾಗಿ ಖಂಡಿಸುವುದಾಗಿ ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಕೇವಲ ಜಾತಿ ಮೇಲೆ ಮೇಲೆ ಬಂದವರಲ್ಲ. ಅವರಲ್ಲಿನ ವಿದ್ವತ್ತು, ಪಕ್ಷ ನಿಷ್ಠೆ, ಸಮರ್ಥ ನಾಯಕತ್ವದ ಗುಣದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೋಗಿದ್ದಾರೆ. ಇದೀಗ ಅವರ ನಿಂತ ಜಾಗವನ್ನು ಶುದ್ಧೀಕರಿಸುವ ಮೂಲಕ ಮಾಡಿರುವ ಅವಮಾನ ಅವರಿಗೆ ಮಾತ್ರವಲ್ಲ, ಈ ದೇಶಕ್ಕೆ ಮಾಡಿದ ಅವಮಾನ ಎಂದರು.
ದುರAತ ಎಂದರೆ ಶುದ್ಧೀಕರಣದ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಿಸುತ್ತಿದ್ದಾರೋ ಅಂತವರ ಮೇಲೆ ಕ್ರಮ ತೆಗೆದುಕೊಳ್ಳದೇ ಅದನ್ನು ಖಂಡಿಸಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಽ ಅವರ ವಿರುದ್ಧ ಎ-ï‌ಐಆರ್ ಹಾಕಲಾಗಿದೆ. ಈ ದೇಶದಲ್ಲಿ ಏನು ನಡೆಯುತ್ತಿದೆ? ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಕೂಡಲೇ ಶುದ್ಧೀಕರಣ ಮಾಡಿರುವ ಆರೋಪಿಗಳ ವಿರುದ್ಧ ದೂರು ದಾಖಲಿಸಿ, ಅವರಿಗೆ ಶಿಕ್ಷೆ ಕೊಡಬೇಕು ಎಂದ ಅವರು, ಖರ್ಗೆ ಅವರಿಗೆ ಆಗಿರುವ ಅವಮಾನದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಆರಂಭದ ದಿನದಿಂದಲೇ ವ್ಯಕ್ತವಾಗಬೇಕಿದ್ದ ದೊಡ್ಡಮಟ್ಟದ ಕೂಗು ಆಗಲಿಲ್ಲ ಎನ್ನುವುದು ಒಪ್ಪಿಕೊಳ್ಳಲೇಬೇಕು. ಅದಕ್ಕಾಗಿ ಪಶ್ಚಾತ್ತಾಪವೂ ತಮಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಸಿಸಿ ಮುಖಂಡ ಮಹದೇವ ಹಾದಿಮನಿ ಮಾತನಾಡಿ, ಗಂಗಾಜಲದಿAದ ಶುದ್ಧೀಕರಣ ಮಾಡಿದವರು ಮನುಸ್ಮÈತಿ ಅನುಯಾಯಿಗಳು. ಅವರ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ, ಜಾತಿನಿಂದನೆ ಕೇಸ್ ಹಾಕಬೇಕು. ಇದನ್ನು ಹೀಗೆಯೇ ಬಿಟ್ಟರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನಕ್ಕೆ ತಿಲಾಂಜಲಿ ನೀಡುವ ದಿನಗಳ ಬರುತ್ತವೆ ಎಂದು ಎಚ್ಚರಿಸಿ, ಈ ದೇಶ ದಲಿತರಿಗೆ ತಾಯ್ನಾಡು ಅಲ್ಲವೆ? ಯಾಕೆ ದಲಿತರನ್ನು ಹುಳುಗಳಿಗಿಂತಲೂ ಕಡೆಯಾಗಿ ಕಾಣುತ್ತೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ.ಬಿ.ಸೌದಾಗರ ಮಾತನಾಡಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಆ ಸಂಘಟನೆಗಳಿAದ ಹೊರಬರಲು ಇದು ಸೂಕ್ತ ಸಮಯ. ಅಸ್ಪÈಶ್ಯತೆಗೆ ಮತ್ತೆ ಚಾಲನೆ ನೀಡುವ ಅವರ ಮನಸ್ಥಿತಿಯನ್ನು ದಲಿತರು ಹೇಗೆ ಒಪ್ಪಲು ಸಾಧ್ಯ? ಕೂಡಲೇ ಅಲ್ಲಿಂದ ಹೊರಬನ್ನಿ ಎಂದರು.
ಜಿಪA ಮಾಜಿ ಅಧ್ಯಕ್ಷ ಎಂ.ಎಲ್.ಕೆAಪಲಿAಗಣ್ಣವರ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಹನಮಂತ ಕಾಖಂಡಕಿ, ಬಸವರಾಜ ಸಂಶಿ, ಹನಮಂತ ಡೋಣಿ, ಅನೀಲ ಗಚ್ಚಿನಮನಿ ಇತರರು ಇದ್ದರು.