ಕಲಾದಗಿಯ ಗ್ರಾ.ಪಂ. ನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಮಸ್ಯೆಗಳನ್ನು ಹೇಳುತ್ತಿರುವ ಗ್ರಾಮಸ್ಥರು. ಗ್ರಾಪಂ ಆಡಳಿತಾಽಕಾರಿ ಬಸವರಾಜ ಪಿರಗಣ್ಣವರ, ಉಸ್ಮಾನಸಾಬ ರೋಣ, ಆನಂದ ವಾಘ, ಅಖ್ತರ ರೋಣ, ಸುಭಾಷ ದುರ್ವೆ, ಆರೀಫ್ ಮಾಲ್ದಾರ ಸೇರಿ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಕಲಾದಗಿಯ ಗ್ರಾ.ಪಂ. ನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಮಸ್ಯೆಗಳನ್ನು ಹೇಳುತ್ತಿರುವ ಗ್ರಾಮಸ್ಥರು. ಗ್ರಾಪಂ ಆಡಳಿತಾಽಕಾರಿ ಬಸವರಾಜ ಪಿರಗಣ್ಣವರ, ಉಸ್ಮಾನಸಾಬ ರೋಣ, ಆನಂದ ವಾಘ, ಅಖ್ತರ ರೋಣ, ಸುಭಾಷ ದುರ್ವೆ, ಆರೀಫ್ ಮಾಲ್ದಾರ ಸೇರಿ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಬಾಗಲಕೋಟೆ

ಗ್ರಾಮಸಭೆಯಲ್ಲಿ ಸಾಲು ಸಾಲು ಸಮಸ್ಯೆಗಳ ಮಾರ್ದನಿ

ಕಲಾದಗಿ: ಗ್ರಾಮದಲ್ಲಿ ಬಸ್ ನಿಲ್ದಾಣ ಹಾಳಾಗಿದೆ, ಊರಲ್ಲಿ ಬೀದಿ ದೀಪಗಳೇ ಇಲ್ಲ, ಬೀದಿಗಳು ಕತ್ತಲಲ್ಲಿವೇ, ಶುದ್ಧ ನೀರಿನ ಘಟಕ ಬಂದ್ ಆಗಿದೆ, ಗ್ರಂಥಾಲಯದಲ್ಲಿ ಅಗತ್ಯ ಪುಸ್ತಕಗಳಿಲ್ಲ, ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ, ಕಾಲನಿಯಲ್ಲಿ ಚರಂಡಿ ನೀರು ನಿಲ್ಲುತ್ತಿದೆ..! ಹೀಗೆ ಒಂದಲ್ಲ, ಎರಡಲ್ಲ ಸಾಲು ಸಾಲು ಸಮಸ್ಯೆಗಳು ಗ್ರಾಮಸ್ಥರಿಂದ ಅನಾವರಣಗೊಂಡವು.

ಗಾಮದ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ತಿಳಿಸಿದರು.

ಬಸ್ ನಿಲ್ದಾಣದ ಅಭಿವೃದ್ಧಿ ಇಡೀ ಸಭೆಯಲ್ಲಿ ಹೆಚ್ಚಿಗೆ ಮಾರ್ಧನಿಸಿದ್ದು, ಗ್ರಾಮದ ಬಸ್ ನಿಲ್ದಾಣದ ಶೋಚನೀಯ ಸ್ಥಿತಿ, ಅಸ್ವಚ್ಛತೆಯ, ಪ್ರಯಾಣಿಕರು ಕುಳಿತುಕೊಳ್ಳಲು ನೆರಳಿಲ್ಲದ, ಹಾಳಾದ ಸ್ಥಿತಿಯಲ್ಲಿರುವ ಬಸ್ ನಿಲ್ದಾಣವನ್ನು ಸರಿಪಡಿಸಲು ಸಭೆಯಲ್ಲಿ ಆಗ್ರಹಿಸಿದರು.

ಗ್ರಾಪಂ ಆಡಳಿತಾಧಿಕಾರಿ ಬಸವರಾಜ ಪಿರಗಣ್ಣವರ ಹಾಗೂ ಪಿಡಿಒ ಆರ್.ಎ. ಎಕ್ಸಾಂಬ ಮಾತನಾಡಿ, ಬಸ್ ನಿಲ್ದಾಣದ ಆವರಣದ ಸಿಸಿ ಕಾರ್ಯದ ಟೆಂಡರ್ ಪ್ರಕ್ರಿಯೆ ಬಹುತೇಕ ಮುಗಿದಿದ್ದು ಆದಷ್ಟು ಬೇಗ ಕೆಲಸವನ್ನು ಆರಂಭಿಸಲಾಗುವುದು, ಬಸ್ ನಿಲ್ದಾಣದ ಸ್ವಚ್ಛತೆಯತ್ತ ಕೂಡಲೇ ಗಮನಿಸಲಾಗುವುದು ಎಂದು ಭರವಸೆ ನೀಡಿದರು.

ವಾರದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಿಸಲಾಗುವುದು, ಅಗತ್ಯವಿದ್ದ ಕಡೆ ಬೀದಿ ದೀಪಗಳನ್ನು ಹಾಕಲಾಗುವುದು ಎಂಬ ಭರವಸೆಯೊಂದಿಗೆ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಗ್ರಾಮಸ್ಥರಾದ ಉಸ್ಮಾನಸಾಬ ರೋಣ, ಆನಂದ ವಾಘ, ಅಖ್ತರ ರೋಣ, ಸುಭಾಷ ದುರ್ವೆ, ಆರೀಫ್ ಮಾಲ್ದಾರ ಸೇರಿ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.