ಗುಳೇದಗುಡ್ಡದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಅಽಕ ಜೇಷ್ಠ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜೆ ಹಾಗೂ ಸುಮಂಗಲೆಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು. ರೋಹಿಣಿ ಚಿಮ್ಮನಕಟ್ಟಿ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹನಮಂತಪ್ಪ ಅಗಡಿ, ನವೀನ ಧಾರವಾಡ, ಶ್ರೀಕಾಂತ ಧಾರವಾಡ, ಮಹೇಶ ಬಿಜಾಪೂರ, ರಾಜು ಸಂಗಮ, ಫಕೀರಪ್ಪ ತಳವಾರ, ಚಿದಾನಂದಸಾ ಕಾಟವಾ, ಹನಮೇಶ ತಾವರಗೇರಿ ಮತ್ತಿತರರಿದ್ದರು.
- ಶಾಸಕ ಚಿಮ್ಮನಕಟ್ಟಿ ಭರವಸೆ
- ಸತ್ಯನಾರಾಯಣ ಪೂಜೆ, ಸುಮಂಗಲಿಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮ
ಗುಳೇದಗುಡ್ಡ: ಬನಶಂಕರಿ ತಾಯಿಯಾಗಲಿ ಅಥವಾ ಕನ್ನಿಕಾಪರಮೇಶ್ವರಿ ದೇವಿಯಾಗಲಿ, ರೂಪ ಬದಲಾದರೂ ದೇವಿ ಒಬ್ಬಳೇ. ಸಮಾಜವು ಸುಮಂಗಲಿಯರನ್ನು ಗೌರವಿಸುವ ಪರಂಪರೆ ಶ್ಲಾಘನೀಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಭಾನುವಾರ ಆರ್ಯವೈಶ್ಯ ಸೇವಾಸಮಿತಿ, ವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಯುವ ಜನ ಸಂಘಗಳ ವತಿಯಿಂದ ಅಧಿಕ ಜೇಷ್ಠ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜೆ, ಸುಮಂಗಲಿಯರಿಗೆ ಮಡಿಲಕ್ಕಿ ತುಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಯವೈಶ್ಯ ಸಮಾಜದ ಒಗ್ಗಟ್ಟು ಹಾಗೂ ಪರಿಶ್ರಮದಿಂದ ದೇವಸ್ಥಾನ ನಿರ್ಮಾಣಗೊಂಡಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಮಾಜದ ಅಭಿವೃದ್ಧಿಗೆ ತಮ್ಮ ಅನುದಾನದಿಂದ 5 ಲಕ್ಷ ರೂ.ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮಹಿಳೆಯರು ಶಾಸಕರ ಪತ್ನಿ ರೋಹಿಣಿ ಚಿಮ್ಮನಕಟ್ಟಿ ಸೇರಿದಂತೆ ಸುಮಂಗಲಿಯರಿಗೆ ಹಸಿರು ಬಳೆ ತೊಡಿಸಿ, ಮಡಿಲಕ್ಕಿ ತುಂಬಿದರು. ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹನಮಂತಪ್ಪ ಅಗಡಿ, ನವೀನ ಧಾರವಾಡ, ಶ್ರೀಕಾಂತ ಧಾರವಾಡ, ಮಹೇಶ ಬಿಜಾಪೂರ, ರಾಜು ಸಂಗಮ, ಫಕೀರಪ್ಪ ತಳವಾರ, ಚಿದಾನಂದಸಾ ಕಾಟವಾ, ಹನಮೇಶ ತಾವರಗೇರಿ, ಪ್ರಕಾಶ ಬೋನಗೇರಿ, ಮಂಜುನಾಥ ಧಾರವಾಡ, ಜಗದೀಶ ಹೇಮಾದ್ರಿ, ವೆಂಕಟೇಶ ನಾರಾಯಣಕೇರಿ, ಅನುಪಮಾ ಧಾರವಾಡ, ಮಂಜುಳಾ ಧಾರವಾಡ, ಸುಜಾತಾ ಬೋನಗೇರಿ, ರಶ್ಮೀ ಬಿಜಾಪುರ, ಅನೀತಾ ಬಿಜಾಪುರ, ಶ್ರೀಕ್ಷ್ಮೀ ತಾವರಗೇರಿ ಸೇರಿ ಸಮಾಜ ಬಾಂಧವರು ಉಪಸ್ಥಿತರಿದ್ದರು.