ಬಾಗಲಕೋಟೆ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನರಗುಂದ ಚಲೋ ಬಗ್ಗೆ ಮುಖಂಡ ಯಲ್ಲಪ್ಪ ಹೆಗಡೆ ಮಾಹಿತಿ ನೀಡಿದರು. ಹನಮಂತಪ್ಪ ಅಪ್ಪಣ್ಣವರ, ರಾಜಭಕ್ಷ ಜಮಾದಾರ ಮತ್ತಿತರರು ಇದ್ದರು. 
ಬಾಗಲಕೋಟೆ

ಏ. ೨೦ ರಂದು ನರಗುಂದ ಚಲೋ

ಸಂತೋಷ ದೇಶಪಾಂಡೆ
ಬಾಗಲಕೋಟೆ: ಈಚೆಗೆ ನಡೆದ ಬಾಗಲಕೋಟೆ ಉಪ ಚುನಾವಣೆ ಪ್ರಚಾರದ ವೇಳೆ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಮುಸ್ಲಿಂ ಮತ್ತು ಕುರುಬ ಸಮಾಜದ ವಿರುದ್ಧ ಅವಹೇಳನ ಮಾಡಿದ್ದನ್ನು ಖಂಡಿಸಿ, ಇದೇ ಏ. ೨೦ ರಂದು ನರಗುಂದ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತಪ್ಪ ಅಪ್ಪಣ್ಣವರ, ಶಾಸಕ ಸಿ.ಸಿ.ಪಾಟೀಲ ಅವರು ಸಮಾಜದ ಬಗ್ಗೆ ಅವಹೇಳನ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಏ. ೨೦ ರಂದು ನರಗುಂದಕ್ಕೆ ತೆರಳಿ, ಸಿ.ಸಿ.ಪಾಟೀಲ ಅವರ ಮನೆ ಮುಂದೆ ಬಸವ ಜಯಂತಿ ಆಚರಿಸಲಾಗುವುದು ಎಂದರು.
ಅAದು ಸಂಜೆ ೪ ಗಂಟೆಗೆ ಕಾರ್ಯಕ್ರಮ ನಡೆಸುತ್ತೇವೆ. ಸಂವಿಧಾನದ ಪ್ರತಿ, ಸಂತ ಶಿಶುನಾಳ ಶರೀ-Àರ ತತ್ವ ಪದಗಳು, ಬಸವಣ್ಣನವರ ವಚನಗಳು, ಕನಕದಾಸರ ಕೀರ್ತನೆಗಳ ಪುಸ್ತಕಗಳನ್ನು ಸಿ.ಸಿ.ಪಾಟೀಲ ಅವರಿಗೆ ನೀಡುತ್ತೇವೆ. ಆ ಮೂಲಕ ಅವರಲ್ಲಿ ಸಮಾನತೆಯ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಸಿ.ಸಿ.ಪಾಟೀಲ ಅವರ ವ್ಯಕ್ತಿತ್ವದ ಬಗ್ಗೆ ನಾವು ಹೇಳಬೇಕಿಲ್ಲ. ಈ ಹಿಂದೆ ಸಚಿವರಾಗಿದ್ದ ವೇಳೆ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ನೋಡಿದ್ದು ಎಲ್ಲರಿಗೂ ಗೊತ್ತಿದೆ. ಅಂತವರು ಬೇರೆ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದು ಅವರ ಗುಣಸ್ವಭಾವವನ್ನು ಎತ್ತಿ ತೋರಿಸುತ್ತದೆ ಎಂದರು.
ಮುಖAಡ ಯಲ್ಲಪ್ಪ ಹೆಗಡೆ ಮಾತನಾಡಿ, ನಮ್ಮ ದೇಶ ವೈವಿದ್ಯತೆಯಿಂದ ಕೂಡಿದೆ. ನಮ್ಮ ಸಂಸ್ಕೃತಿಯನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಆದರೆ, ಸಿ.ಸಿ.ಪಾಟೀಲ ಅವರು ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಬೇರೆ ಸಮಾಜಗಳ ಬಗ್ಗೆ ಅಗೌರವ ತೋರಿದ್ದಾರೆ. ಹೀಗಾಗಿ ನಮ್ಮ ದೇಶದಲ್ಲಿ ಶರಣರು, ಸಂತರು, ಸೂಫಿಗಳು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಅವರ ಸಂದೇಶಗಳ ಬಗ್ಗೆ ಪಾಟೀಲ ಅವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅವರ ನಿವಾಸದ ಎದುರು ಬಸವ ಜಯಂತಿ ಆಚರಿಸಲು ನಿರ್ಧರಿಸುತ್ತೇವೆ ಎಂದರು.
ಘಟನೆ ಹಿನ್ನೆಲೆಯಲ್ಲಿ ನಾವೇನು ಸಿ.ಸಿ.ಪಾಟೀಲ ಅವರಿಂದ ಕ್ಷಮೆ ನಿರೀಕ್ಷಿಸಿಲ್ಲ. ನರಗುಂದ ಚಲೋ ಮಾಡಿದರೂ ಅವರ ವಿರುದ್ಧ ದಿಕ್ಕಾರ, ಘೋಷಣೆ ಕೂಗುವುದು ಯಾವುದನ್ನೂ ಮಾಡಲ್ಲ. ಕೇವಲ ಅವರಿಗೆ ಅರಿವು ಮೂಡಿಸುವ ಮತ್ತು ಸಮಾಜಗಳ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡುತ್ತೇವೆ ಅಷ್ಟೆ ಎಂದು ತಿಳಿಸಿದರು.
ರಾಜಭಕ್ಷ ಜಮಾದಾರ, ಶೇಖರ ಕಾಂಬಳೆ, ಧರ್ಮಣ್ಣ ಸುನಗದ, ಬಸಪ್ಪ ದಂಡಿನ ಮತ್ತಿತರರು ಇದ್ದರು