ಬಾಗಲಕೋಟೆ ಜಿಲ್ಲಾಽಕಾರಿ ಸಭಾಂಗಣದಲ್ಲಿ ಎಸ್‌ಐಆರ್ ಕರಡು ಮತದಾರರ ಪಟ್ಟಿಯ ಬಗ್ಗೆ ಜಿಲ್ಲಾ ಚುನಾವಣಾಽಕಾರಿಯೂ ಆಗಿರುವ ಜಿಲ್ಲಾಽಕಾರಿ ಸಂಗಪ್ಪ ಅವರು ಮಾಹಿತಿ ನೀಡಿದರು. ಎಡಿಸಿ ಅಶೋಕ ತೇಲಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಇದ್ದರು.
ಬಾಗಲಕೋಟೆ: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಮುಕ್ತಾಯಗೊಂಡಿದ್ದು, ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎಎಸ್‌ಡಿಡಿಓ ಮತದಾರರನ್ನು ಹೊರತುಪಡಿಸಿ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ೧೩,೯೨,೫೨೩ ಮತದಾರರು ಇದ್ದಾರೆಂದು ಜಿಲ್ಲಾಽಕಾರಿ ಆಗಿರುವ ಜಿಲ್ಲಾ ಚುನಾವಣಾಽಕಾರಿ ಸಂಗಪ್ಪ ಅವರು ತಿಳಿಸಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲೆಯ ೧೩,೯೨,೫೨೩ ಕರಡು ಮತದಾರರು ಇದ್ದು, ಅದರಲ್ಲಿ ೬,೯೩,೧೩೦ ಪುರುಷ ಹಾಗೂ ೬,೯೯,೩೧೮ ಮಹಿಳೆಯರು ಹಾಗೂ ೭೫ ಇತರೆ ಮತದಾರರು ಇದ್ದಾರೆ ಎಂದರು.
ಜಿಲ್ಲೆಯ ಏಳು ಮತಕ್ಷೇತ್ರಗಳ ಪೈಕಿ ಮುಧೋಳ ಮತಕ್ಷೇತ್ರದಲ್ಲಿ ೧,೮೪,೪೭೧, ತೇರದಾಳ ಕ್ಷೇತ್ರದಲ್ಲಿ ೨,೦೬,೩೮೭, ಜಮಖಂಡಿ ಮತಕ್ಷೇತ್ರದಲ್ಲಿ ೧,೯೩,೨೬೭, ಬೀಳಗಿ ಕ್ಷೇತ್ರದಲ್ಲಿ ೨,೦೮,೧೫೫, ಬಾದಾಮಿ ಕ್ಷೇತ್ರದಲ್ಲಿ ೨,೦೨,೫೭೫, ಬಾಗಲಕೋಟೆ ಕ್ಷೇತ್ರದಲ್ಲಿ ೨,೦೨,೮೩೦ ಹಾಗೂ ಹುನಗುಂದ ಕ್ಷೇತ್ರದಲ್ಲಿ ೧,೯೪,೮೩೮ ಮತದಾರರು ಕರಡು ಪಟ್ಟಿಯಲ್ಲಿ ದಾಖಲಾಗಿದ್ದಾರೆ ಎಂದು ವಿವರಿಸಿದರು.
ಆಗಸ್ಟ ೧೭ ರಂದು ಮತದಾರರ ಪಟ್ಟಿಯ ಡಿಜಟಲೀಕರಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಂಡುಬAದಿರುವ ಅನೊಮಲಿಸ್ ಹಾಗೂ ನೋ ಮ್ಯಾಪಿಂಗ್ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ದಿನಾಂಕಗಳನ್ನು ನಿಗದಿಪಡಿಸಿ ಸಂಬAಽಸಿದ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಪಡೆದ ಮತದಾರರು ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ತಮ್ಮ ಮತದಾರರ ವಿವರಗಳನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು ೩೧,೦೩೯ ನನೊಮಲಿಸ್ ಹಾಗೂ ೧೬,೩೯೧ ನೋ ಮ್ಯಾಪಿಂಗ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ೪೭,೪೩೦ ಮತದಾರರಿಗೆ ನೋಟಿಸ್ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧೮೫೫ ಮತಗಟ್ಟೆಗಳು :
ಚುನಾವಣಾ ಆಯೋಗದ ನಿರ್ದೇಶನದಂತೆ ೧೨೦೦ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದ ಮತಗಟ್ಟೆಗಳನ್ನು ವಿಭಜಿಸಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ ೧೭೮೫ ರಿಂದ ೧೮೫೫ಕ್ಕೆ ಏರಿಕೆಯಾಗಿದೆ. ಎಎಸ್‌ಡಿಡಿಓ ಮತದಾರರನ್ನು ಹೊರತುಪಡಿಸಿ ೧೨೦೦ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ಗುರುತಿಸಿ, ಮತದಾರರ ಅನುಕೂಲ ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಆಕ್ಷೇಪಣೆ, ತಿದ್ದುಪಡಿಗೆ ಸೆ.೨೩ ವರೆಗೆ ಅವಕಾಶ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು, ತಿದ್ದುಪಡಿ ಹಾಗೂ ವರ್ಗಾವಣೆಗೆ ಸಂಬAಽಸಿದAತೆ ಆಗಸ್ಟ್ ೨೪ ರಿಂದ ಸೆಪ್ಟೆಂಬರ ೨೩ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರು ನಮೂನೆ-೬ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕರಡು ಪಟ್ಟಿಯನ್ನು ಜಿಲ್ಲಾ ಚುನಾವಣಾಕಾರಿಗಳ ವೆಬ್‌ಸೈಟ್hಣಣಠಿ://bಚಿgಚಿಟಞoಣ.ಟಿiಛಿ.iಟಿ/, ಮುಖ್ಯ ಚುನಾವಣಾಕಾರಿಗಳ ವೆಬ್‌ಸೈಟ್ hಣಣಠಿ://ಛಿeo.ಞಚಿಡಿಟಿಚಿಣಚಿಞಚಿ.gov.iಟಿ/ ಹಾಗೂ ಭಾರತ ಚುನಾವಣಾ ಆಯೋಗದ ವೆಬ್‌ಸೈಟ್ hಣಣಠಿ://ತಿತಿತಿ.eಛಿi.gov.iಟಿ/ ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಚುನಾವಣಾ ವಿಭಾಗದ ಶಿರಸ್ತೆದಾರ ಮಹೇಶ ಪಾಂಡವ ಇತರರು ಇದ್ದರು.