ಲೋಕಾಪುರ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಎಕ್ಸಲಂಟ್ ಪಬ್ಲಿಕ್ ಸ್ಕೂಲ್, ಸಿ.ಎಂ. ಪಂಚಕಟ್ಟಿಮಠ ಪ.ಪೂ. ಕಾಲೇಜ, ಎಸ್.ಸಿ.ಪಂಚಕಟ್ಟಿಮಠ ಪ್ರೌಢಶಾಲೆ ಹಾಗೂ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
ಬಾಗಲಕೋಟೆ

ಕನ್ನಡ ಭಾಷೆ ಹೃದಯದ ಭಾಷೆ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಸಿದ್ದು ದಿವಾನ ಅಭಿಮತ
  • ದಾನೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಆಚರಣೆ
  • 70ನೇ ಕನ್ನಡ ರಾಜ್ಯೋತ್ಸವ
ಲೋಕಾಪುರ: ದಾನೇಶ್ವರಿ ಶಿಕ್ಷಣ ಸಂಸ್ಥೆಯ ಎಕ್ಸಲಂಟ್ ಪಬ್ಲಿಕ್ ಸ್ಕೂಲ್, ಸಿ.ಎಂ. ಪಂಚಕಟ್ಟಿಮಠ ಪ.ಪೂ. ಕಾಲೇಜ, ಎಸ್.ಸಿ.ಪಂಚಕಟ್ಟಿಮಠ ಪ್ರೌಢಶಾಲೆ ಹಾಗೂ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಚಿಣ್ಣರು ನಾಡಿನ ಸಾಧಕರ ಛದ್ಮವೇಷದೊಂದಿಗೆ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.
ಸಾಹಿತಿ ಸಿದ್ದು ದಿವಾನ ಮಾತನಾಡಿ, ಜಾನಪದ ಸಾಹಿತ್ಯದೊಂದಿಗೆ ಕನ್ನಡ ನಾಡಿನ ಹಿರಿಮೆ, ಸಂಸ್ಕೃತಿ, ಪರಂಪರೆಯ ಅರಿವಿನೊಂದಿಗೆ ನಮ್ಮ ಭಾಷೆ ಹೃದಯದ ಭಾಷೆಯಾಗಿದೆ. ಇದರ ಜೊತೆಗೆ ಬದುಕಲು ಇತರ ಭಾಷೆಗಳನ್ನು ಪ್ರೀತಿಸೋಣ ಎಂದರು.
ಸಂಸ್ಥೆಯ ಯುವ ನಿರ್ದೇಶಕ ಮಲ್ಲಿಕಾರ್ಜುನ ಆರ್. ಪಂಚಕಟ್ಟಿಮಠ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಎಸ್.ಬಿ. ಕೃಷ್ಣಾಗೌಡರ, ಪ್ರಾಚಾರ್ಯ ಅವಿನಾಶ ಆಂಥೋನಿ, ಟಿ.ವಿ. ಹಳ್ಳಿ, ಕವಿತಾ ಕೆ.ಎನ್., ಮುಖ್ಯೋಪಾಧ್ಯಾಯ ಎನ್.ಎಲ್. ಪಾಟೀಲ, ಎಸ್.ಎಂ. ರಾಮದುರ್ಗ, ಐ.ಜಿ. ಧಾರವಾಡಮಠ, ಎಂ.ಜಿ. ದೇಶಪಾಂಡೆ, ರವಿಕಾಂತ ಎಂ. ವಿ.ಎಸ್. ಜೋಗಿ, ಈರಯ್ಯ ಮಠಪತಿ ಉಪಸ್ಥಿತರಿದ್ದರು. ಬನಶ್ರೀ, ಕೀರ್ತಿ ನಿರೂಪಿಸಿದರು, ತನ್ವಿ ಜಾಡಗೌಡ ಸ್ವಾಗತಿಸಿದರು, ಶ್ರದ್ಧಾ, ಸಾನ್ವಿ ವಂದಿಸಿದರು.