ಜಿಲ್ಲೆ

ಮೇಳದಲ್ಲಿ ಪ್ರತಿಭೆ ಅನಾವರಣ

ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು.

ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳು ರಂಗಗೀತೆ, ಕೋಲಾಟ, ಭಜನೆ ಸೇರಿದಂತೆ ನಾನಾ ಕಲಾಪ್ರಕಾರಗಳಲ್ಲಿ ತಮ್ಮ ಪ್ರತಿಭೆ ತೋರಿದರು. ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.

ಮೇಳದ ಫಲಿತಾಂಶ
ಪುರುಷರ ವಿಭಾಗ : ಭಾವಗೀತೆ ಸ್ಪರ್ಧೆಯಲ್ಲಿ ಗುರು ಚಲವಾದಿ (ಪ್ರಥಮ), ಮಹಾಂತೇಶ ಇಲಕಲ್ಲ (ದ್ವಿತೀಯ), ಕೋಲಾಟದಲ್ಲಿ ಹುನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪ್ರಥಮ), ರಂಗಗೀತೆಯಲ್ಲಿ ಗುರು ಚಲವಾದಿ (ಪ್ರಥಮ), ಜನಪದ ನೃತ್ಯದಲ್ಲಿ ಬಾಗಲಕೋಟೆಯ ಅಲ್ಪಸಂಖ್ಯಾತರ ವಸತಿ ಶಾಲೆ (ಪ್ರಥಮ), ಭಜನೆಯಲ್ಲಿ ಅನವಾಲ್ ಕಲ್ಮೇಶ್ವರ ಯುವಕ ಮಂಡಳಿ (ಪ್ರಥಮ), ಚರ್ಮವಾದ್ಯ ಮೇಳದಲ್ಲಿ ಲಕ್ಷ್ಮೀದೇವಿ ಹಲಗಿ ಮಜಲ್ಸ್ ತಂಡ (ಪ್ರಥಮ), ಏಕಪಾತ್ರಾಭಿನಯ ಮಾಳೇಶ ಲಕ್ಷ್ಮೇಶ್ವರ (ಪ್ರಥಮ), ಗುರು ಚಲವಾದಿ (ದ್ವಿತೀಯ), ಜಾನಪದ ಗೀತೆಯಲ್ಲಿ ಪ್ರಕಾಶ ಕಾಂಬಳೆ ಮತ್ತು ತಂಡ (ಪ್ರಥಮ) ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ : ಭಾವಗೀತೆ ಸ್ಪರ್ಧೆಯಲ್ಲಿ ತನುಜಾ ಮೇಲಗಿರಿ (ಪ್ರಥಮ), ಶರಣಮ್ಮ ಬೈಯ್ಯಪುರ (ದ್ವಿತೀಯ), ಕೋಲಾಟದಲ್ಲಿ ಬಿಸ್ಮಿಲ್ಲಾ ಮುಲ್ಲಾ ತಂಡ (ಪ್ರಥಮ), ಲಾವಣಿಯಲ್ಲಿ ಕಾವ್ಯ ಅಕ್ಕಿ (ಪ್ರಥಮ), ಗಂಗಾ ಮಾದರ (ದ್ವಿತೀಯ), ಗೀಗೀ ಪದದಲ್ಲಿ ಕಾವ್ಯ ಅಕ್ಕಿ ಮತ್ತು ತಂಡ (ಪ್ರಥಮ),ಜಾನಪದ ಗೀತೆಯಲ್ಲಿ ಸಿದ್ದವ್ವ ಪೂಜಾರ ಮತ್ತು ಸಂಗಡಿಗರು (ಪ್ರಥಮ), ಬೀಸುವ ಪದಗಳ ಸ್ಪರ್ದೆಯಲ್ಲಿ ಶಾಯೀನ್ ಖಾಜಿ ಮತ್ತು ತಂಡ (ಪ್ರಥಮ), ಸೋಬಾಣ ಪದ ಸ್ಪರ್ಧೆಯಲ್ಲಿ ಶಾಯಿನಾ ವಾಲಿಕಾರ ಮತ್ತು ತಂಡ (ಪ್ರಥಮ), ಏಕಪಾತ್ರಾಭಿನಯದಲ್ಲಿ ಪೂಜಾ ರಾಠೋಡ (ಪ್ರಥಮ), ತನುಜಾ ಮೇಲಗಿರಿ (ದ್ವಿತೀಯ) ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್.ಮೇಲಿನಮನಿ ತಿಳಿಸಿದ್ದಾರೆ.

EndFragment