ಜಿಲ್ಲೆ

ಲಕ್ಷ ಶಿವಲಿಂಗಕ್ಕೆ ಭಕ್ತಿಯ ನಮನ

ಬಾಗಲಕೋಟೆ: ಶಿವರಾತ್ರಿ ಅಂಗವಾಗಿ ನಗರದ ಆರ್ಯವೈಶ್ಯ ಸಮಾಜದ ವಾಸವಿ ಮಂಡಳದ ವತಿಯಿಂದ ನಗರದ ಚರಂತಿಮಠದಲ್ಲಿ ಶುಕ್ರವಾರ ಒಂದು ಲಕ್ಷ ಶಿವ ಲಿಂಗಗಳಿಗೆ ಏಕಾಕಾಲಕ್ಕೆ ಪೂಜೆ ಸಲ್ಲಿಸಲಾಯಿತು.

ಸಂಜೆ ಶಿವಲಿಂಗಗಳಿಗೆ ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಶಿವಾಷ್ಠಕ, ಜಲಾಭಿಷೇಕ, ಶಿವ ಶತನಾಮಾವಳಿ, ತೀಲಾಷ್ಟಕ, ಭಸ್ಮ ಅರ್ಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಸುಖ ದಾಂಪತ್ಯ, ಬದುಕಿನಲ್ಲಿ ನೆಮ್ಮದಿಗಾಗಿ ಹಾಗೂ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗಿರಿಜಾ ಕಲ್ಯಾಣ(ಶಿವ -ಪಾರ್ವತಿ ಮದುವೆ) ಮಾಡಲಾಯಿತು.

ಶಿವರಾತ್ರಿ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದಿಯೇ ಹುತ್ತದ ಮಣ್ಣಿನಿಂದ ಶಿವಲಿಂಗಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ಪ್ರತಿ ವರ್ಷ ಆರ್ಯವೈಶ್ಯ ಮಹಿಳಾ ಮಂಡಲದ ವತಿಯಿಂದ ಶಿವರಾತ್ರಿ ವೇಳೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಈ ಸಾರಿ ಲಕ್ಷ ಶಿವಲಿಂಗ ಸಿದ್ಧಪಡಿಸಿ ಪೂಜೆ ಸಲ್ಲಿಸಿದ್ದು ಗಮನ ಸೆಳೆಯಿತು.

ವಾಸವಿ ಮಹಿಳಾ ಮಂಡಳದ ಅಧ್ಯಕ್ಷೆ ಅನಿತಾ ಹಂದ್ರಾಳ, ಕಾರ್ಯದರ್ಶಿ ಅನೂಷಾ ಕೋರಾ, ಖಜಾಂಚಿ ಲತಾ ವಿಜಾಪುರ, ಉಪಾಧ್ಯಕ್ಷೆ ರಾಧಾಬಾಯಿ ಸುರೇಬಾನ, ವಾಸವಿ ಸಮಾಜದ ಅಧ್ಯಕ್ಷ ಎಸ್.ಎಲ್.ಕೋರಾ, ವಾಣಿಶ್ರೀ ಕಂದಕೂರ ಸೇರಿ ವಾಸವಿ ಮಂಡಲದ ಸದಸ್ಯರು ನೇತೃತ್ವ ವಹಿಸಿದ್ದರು. ರಮೇಶ ಓಂಕಾರ ಆಚಾರ್ಯ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

EndFragment