ಬಾಗಲಕೋಟೆ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಡಿ.೧೧ ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ಪ್ರೀಡಂ ಪಾರ್ಕನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ರಾಜು ಮನ್ನಿಕೇರಿ ಹೇಳಿದರು.
ಒಳ ಮೀಸಲಾತಿ ಜಾರಿಗಾಗಿ ಕಳೆದ ೨೦ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೇ ರಾಜ್ಯದಲ್ಲಿ ಅಽಕಾರ ಬರುವ ರಾಜಕೀಯ ಪಕ್ಷಗಳು ನಮ್ಮ ಸಮಾಜದ ಮತಗಳನ್ನು ಪಡೆದು ಅನ್ಯಾಯ ಮಾಡುತ್ತೀವೆ. ಮೂಲ ಅಸ್ಪೃಶ್ಯರಾದ ಮಾದಿಗ ಸಮಾಜಕ್ಕೆ ನಿರಂತರವಾಗಿ ಮೋಸ ಮಾಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು, ಕೇಂದ್ರ ಸರ್ಕಾರವು ಸಂವಿಧಾನ ಪರಿಚ್ಛೇದ ೩೪೧(೩)ಕ್ಕೆ ಕೂಡಲೇ ತಿದ್ದುಪಡಿ ಮಾಡಬೇಕು, ತಮಿಳುನಾಡು ಮಾದರಿಯಲ್ಲಿ ರಾಜ್ಯ ಅಧಿಕಾರ ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗೆ ಸಮಾಜಕ್ಕೆ ಶೇ.೬ ಮೀಸಲಾತಿ ಕಲ್ಲಿಸಬೇಕು, ನ್ಯಾ.ನಾಗಮೋಹನ ದಾಸ, ನ್ಯಾ.ಕಾಂತರಾಜು ವರದಿ ಬಹಿರಂಗ ಪಡಿಸಬೇಕು, ಎಲ್ಲ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಸಮಾವೇಶದಲ್ಲಿ ಹಕ್ಕೋತ್ತಾಯ ಮಂಡಿಸಲಾಗುವುದು ಎಂದು ಹೇಳಿದರು.
ಮುಖಂಡ ಸತೀಶ ಮಾದರ ಮಾತನಾಡಿ, ಒಳ ಮೀಸಲಾತಿಗಾಗಿ ಹೋರಾಟ ನಡೆದರು ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬೆಂಗಳೂರಿನಲ್ಲಿ ಹೋರಾಟದ ಜತೆಗೆ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಬೈಕ್ ಜಾಥಾ ಕೂಡಾ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದಿಂದ ಆರಂಭವಾಗುವ ಬೈಕ್ ಜಾಥಾ ಹಾವೇರಿ,ಕೊಪ್ಪಳ, ಮುದ್ದೇಬಿಹಾಳ, ಬಾಗಲಕೋಟೆ ತಾಲೂಕು ರಾಂಪೂರ, ಬಾದಾಮಿ, ರಾಮದುರ್ಗ, ಹಾರುಗೇರಿ, ಬೈಲ್ ಹೊಂಗಲ್, ಕಾಗವಾಡ ಸೇರಿದಂತೆ ವಿವಿಧೆಡೆ ಸಂಚರಿಸಿ ಡಿ.೨೧ ಕ್ಕೆ ಬೆಳಗಾವಿ ತಲುಪಿ ಅಽವೇಶನ ಸಂದರ್ಭದಲ್ಲಿ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.
ಡಿಎಸ್‌ಎಸ್ ಮುಖಂಡ ಶಾಮ ಘಾಟಗೆ, ಮುಖಂಡರಾದ ವಿಠಲ ಬೇವೂರ, ರಮೇಶ ಸನದಿ, ಮುತ್ತಣ್ಣ ಮೇತ್ರಿ ಇತರರು ಇದ್ದರು.