ಬಾಗಲಕೋಟೆ ನಗರದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಗೋಂದಳಿ ಪದ ಕಲಾವಿದ ವೆಂಕಪ್ಪ ಅಂಭಾಜಿ ಸುಗತೇಕರ ಅವರನ್ನು ಭಾನುವಾರ ಕಾಮಧೇನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಬಸವರಾಜ ಕಟಗೇರಿ, ವಿಜಯ ಸುಲಾಖೆ, ಶಿವಕುಮಾರ ಮೆಲ್ನಾಡï, ಗುರು ಅನಗವಾಡಿ, ರಾಜು ಗೌಳಿ, ರವಿ ಬಡಿಗೇರ ಸೇರಿದಂತೆ ಇತರರು ಇದ್ದರು. 
ಜಿಲ್ಲೆ

ವೆಂಕಪ್ಪ ಸುಗತೇಕರಗೆ ಸನ್ಮಾನಗಳ ಸುರಿಮಳೆ

ಬಾಗಲಕೋಟೆ: ನಗರದ ಗೋಂದಳಿ ಪದ ಹಿರಿಯ ಕಲಾವಿದ ವೆಂಕಪ್ಪ ಸುಗತೇಕರವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡುತ್ತಿದ್ದಂತೆ ಕೋಟೆನಗರಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಕಲಾವಿದರು, ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಗಳು, ಮಾಜಿ, ಹಾಲಿ ಶಾಸಕರು, ಸಚಿವರು ಸನ್ಮಾನಿಸಿ ಗೌರವಿಸುತ್ತಿದ್ದಾರೆ. ಮಾಜಿ ಸಚಿವ ಎಚ್.ವೈ.ಮೇಟಿ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ ಸೇರಿದಂತೆ ಅನೇಕ ಮಹನೀಯರು ಸನ್ಮಾನಿಸಿ ಗೌರವಿಸಿದರು. ಮರೆಯಾಗುತ್ತಿರುವ ಗೋಂದಳಿ ಪದ ಕಲೆ ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆ ಜನರಿಗೆ ಕಲಿಸಿಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.