ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ರೇಣುಕಾ ನ್ಯಾಮಗೌಡರ, ಆನಂದ ಶಿಲ್ಪಿ, ಸಿಕಂದರ ಅಥಣಿ ಸೇರಿದಂತೆ ಇತರರು ಇದ್ದರು.  
ಜಿಲ್ಲೆ

ಬಿಜೆಪಿ ಸರ್ಕಾರದಲ್ಲಿ ನೈತಿಕ ಮೌಲ್ಯ ಕುಸಿದಿದೆ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಹಗರಣಗಳ ಸರಮಾಲೆಯನ್ನು ಬೆನ್ನಿಗೆ ಕಟ್ಟಿಕೊಂಡು ಅಽಕಾರ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪ್ರಮಾಣಿಕತೆ ಎನ್ನುವುದು ಸಂಪೂರ್ಣ ಇಳಿಮುಖವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಡಮೇಲು ಮಾಡುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.


ಬೆಂಗಳೂರಿನಲ್ಲಿ ಚಿಲುಮಿ ಎನ್ನುವ ಖಾಸಗಿ ಸಂಸ್ಥೆಗಳ ಮೂಲಕ ಮತದಾರರ ಮಾಹಿತಿ ಸಂಗ್ರಹಿಸಿ ಬಿಜೆಪಿ ಅಲ್ಲದ ಮತದಾರರನ್ನು ಮತದಾನದ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಮತದಾರ ಪಟ್ಟಿ ಪರಿಷ್ಕರಣೆ ವೇಳೆ ವೋಟರ್ ಲಿಸ್ಟ್ ಡಿಲೇಟ್ ಮಾಡಲಾಗಿದೆ. ಅಂದಾಜು ೩೦ ಸಾವಿರಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇದು ಅನ್ಯಾಯ ಅಲ್ಲವೇ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


ಮತದಾರರನ್ನು ಕೈ ಬಿಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಹುನ್ನಾರ ನಡೆದಿದೆ. ರಾಜ್ಯ ಮಂತ್ರಿಗಳೊಬ್ಬರು ಚಿಗುರು ಸಂಸ್ಥೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ. ತನಿಖೆ ವೇಳೆ ಚಕ್ ಸಿಕ್ಕಿದೆ. ನೋಟು ಎನಿಸುವ ಮಷಿನ್, ಲೇಟರ್ ಹೆಡ್ ಸಿಕ್ಕಿದೆ. ಇಂತಹ ನೀಚ ಕೃತ್ಯ ಯಾವ ಸರ್ಕಾರಗಳು ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಲ್ಲಿ ನೈತಿಕ ಮೌಲ್ಯ ಸಂಪೂರ್ಣವಾಗಿ ಕುಸಿದಿದೆ. ಕೂಡಲೇ ಸರ್ಕಾರ ಸಂಬಂಧಪಟ್ಟ ಮಂತ್ರಿಗಳನ್ನು ಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕು. ಅವರನ್ನು ಬಂಽಸಬೇಕು. ವೋಟರ್ ಐಡಿ ಪ್ರಕರಣಗಳವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.


ಕಾಂಗ್ರೆಸ್ ಟಿಕೆಟ್‌ಗಾಗಿ ಭರಪೂರ ಅರ್ಜಿ:
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪಽðಸಲು ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಹುನಗುಂದಕ್ಕೆ ೩, ಬಾಗಲಕೋಟೆಗೆ ೫, ಮುಧೋಳಕ್ಕೆ ೨, ಬೀಳಗಿ ೭, ತೇರದಾಳ ೧೨, ಜಮಖಂಡಿ ೨, ಬಾದಾಮಿ ಮತಕ್ಷೇತ್ರಕ್ಕೆ ೪ ಅರ್ಜಿಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್ ಟಿಕೆಟ್‌ಗಾಗಿ ಭರಪೂರ ಅರ್ಜಿ ಸಲ್ಲಿಕೆಯಾಗಿವೆ ಎಂದ ನಂಜಯ್ಯನಮಠ ಅವರು, ತಾವು ಯಾವುದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಅರ್ಜಿ ಕೂಡಾ ಹಾಕಿಲ್ಲ. ಗುಳೇದಗುಡ್ಡ ವಿಧಾನಸಭಾ ಮತಕ್ಷೇತ್ರ ವಿಸರ್ಜನೆಯಾದ ಬಳಿಕ ಬಾದಾಮಿ, ಬಾಗಲಕೋಟೆ, ಹುನಗುಂದ ಮತಕ್ಷೇತ್ರಕ್ಕೆ ಹಳ್ಳಿಗಳು ಹಂಚಿಕೆಯಾಗಿವೆ. ಮೂರು ಕಡೆ ಅರ್ಜಿ ಹಾಕಿದರೇ ಸರಿಯಲ್ಲ ಅಂತ ನಗೆ ಚಟಾಕಿ ಹಾರಿಸಿದರು.
ಮುಖಂಡರಾದ ರೇಣುಕಾ ನ್ಯಾಮಗೌಡರ, ಆನಂದ ಶಿಲ್ಪಿ, ಸಿಕಂದರ ಅಥಣಿ ಸೇರಿದಂತೆ ಇತರರು ಇದ್ದರು.