ಬಾಗಲಕೋಟೆ: ಸರ್ಕಾರದ ವ್ಯಾಪ್ತಿಯಲ್ಲಿ ಮತ್ತು ನನಗೆ ಕೊಟ್ಟ ಸಮಯದಲ್ಲಿ ಎಲ್ಲ ರೀತಿಯಿಂದ ಸಂಗೀತಕ್ಕೆ ಸಹಕಾರ ನೀಡುತ್ತೇನೆ. ವಿಶೇಷವಾಗಿ ಕಲಾವಿದರನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಕರ್ನಾಟಕ ಸಂಗೀತ ನತ್ಯ ಅಕಾಡೆಮಿಯ ಅಧ್ಯಕ್ಷ, ವಿದ್ವಾನ ಆನೂರು ಅನಂತಕೃಷ್ಣ ಶರ್ಮಾ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಬಸವೇಶ್ವರ ಕಲಾ ಮಹಾವಿದ್ಯಾಲಯ, ಐಕ್ಯೂಎಸಿ ಘಟಕ, ಸಾಂಸ್ಕೃತಿಕ ಚಟುವಟಿಕೆ ಸಮಿತಿ, ಸಂಗೀತ ವಿಭಾಗ, ಡಾ.ಪುಟ್ಟರಾಜ ಗವಾಯಿ ಸ್ಕೂಲ್ ಆ್ ಮ್ಯೂಜಿಕ್ ಹಾಗೂ ಕರ್ನಾಟಕ ನೃತ್ಯ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ನೃತ್ಯ ಕಲೆಗಳು ಬದುಕಿನಲ್ಲಿ ಹೊಸತನ ನೀಡುತ್ತವೆ. ಯುವ ಜನತೆಗೆ ಸಂಗೀತ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಅದಕ್ಕೆ ತಕ್ಕ ಹಾಗೇ ಅತ್ಯುತ್ತಮವಾದ ತರಬೇತಿ ನೀಡುವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎಸ್. ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ ಎನ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಸಂಚಾಲಕ ಹನುಮಂತಪ್ಪ ಸೈದಪ್ಪ ಮೇತ್ರಿ, ಬಿವಿವಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಶರಣ ನಾವಲಗಿ, ನಿಂಬೆಣ್ಣ ದೇವಣಗಾಂವಿ, ಸಂಗೀತ ವಿಭಾಗದ ಪ್ರಾಧ್ಯಾಪಕರಾದ ಡಾ. ರೇವಣ್ಣ ಬೆಣ್ಣೂರ, ಡಾ. ಕೆ.ವಿ. ಮಠ ಉಪಸ್ಥಿತರಿದ್ದರು. ಶ್ರೇಯಾ ಜೋರಾಪುರ ಪ್ರಾರ್ಥಿಸಿದರು. ಡಾ.ಸಿದ್ಧರಾಮಯ್ಯ ಮಠಪತಿ ಪರಿಚಯಿಸಿದರು. ಜಯಶ್ರೀ ಲಾಗಲೋಟಿ ನಿರೂಪಿಸಿದರು.
ಇನ್ನು ಕರ್ನಾಟಕ ಸಂಗೀತ ನತ್ಯ ಅಕಾಡೆಮಿಯ ಅಧ್ಯಕ್ಷ, ವಿದ್ವಾನ ಆನೂರು ಅನಂತಕೃಷ್ಣ ಶರ್ಮಾ ತಮ್ಮ ವಿದ್ಯಾರ್ಥಿಗಳಿಂದ ಮೃದಂಗದ ಬೋಲುಗಳನ್ನು ಹೇಳಿಸುವದರ ಜೊತೆಗೆ ಮಹಾಗಣಪತಿಂ ಭಜೇ ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸಿದರು. ನಂತರ ಮಾರುತಿ ಭಜಂತ್ರಿ ಅವರು ತಮ್ಮ ತಂಡದವರೊಂದಿಗೆ ಶಹನಾಯಿ ವಾದನ ನುಡಿಸಿದರು. ಡಾ.ಸಿದ್ಧರಾಮಯ್ಯ ಮಠಪತಿ ಹಿಂದೂಸ್ತಾನಿ ಶಾಸೀಯ ಸಂಗೀತ ನಡೆಸಿಕೊಟ್ಟರು. ಸದಾನಂದ ಶಾಸಿ ಕಥಾಕೀರ್ತನ, ಯಶೋಧಾ ನಡುವಿನಮನಿ ಸುಗಮ ಸಂಗೀತ, ಸೋಮು ಗಡದಗೌಡರ ವಯಲಿನ್ ವಾದನ, ಶುಭದಾ ದೇಶಪಾಂಡೆ ಹಾಗೂ ತಂಡದವರ ಭರತನಾಟ್ಯ ನೋಡುಗರ ಕಣ್ಮನ ಸೆಳೆಯಿತು.
EndFragment