ಜಿಲ್ಲೆ

ನಗರದ ಸ್ವಚ್ಛತೆಗೆ ಒತ್ತು ನೀಡಿ

ಬಾಗಲಕೋಟೆ: ನವನಗರ,ವಿದ್ಯಾಗಿರಿ, ಹಳೆ ಬಾಗಲಕೋಟೆ ನಗರದ ವ್ಯಾಪ್ತಿಯಲ್ಲಿ ನಗರಸಭೆ ಸದಸ್ಯರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ನಗರಸಭೆ ಸದಸ್ಯರಿಗೆ ಸಲಹೆ ನೀಡಿದರು.

ನಗರದ ವಿವಿಧ ವಾರ್ಡಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಶಾಸಕರು ಚಾಲನೆ ನೀಡಿ ಮಾತನಾಡಿದ ಅವರು, ವಾರ್ಡ್ ನಂ.17ರಲ್ಲಿ ಬರುವ ಹಳೆ ಪ್ರವಾಸಿ ಮಂದಿರದ ಆವರಣದಲ್ಲಿ ವಾಯು ವಿಹಾರಕ್ಕೆ ಬರುವ ಜನರ ಅನುಕೂಲಕ್ಕಾಗಿ ಅಳವಡಿಸಿರುವ ವ್ಯಾಯಾಮ ಸಾಮಾಗ್ರಿಗಳನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕು. ಹೆಚ್ಚು ಮೌಲ್ಯದ ಸಾಮಾಗ್ರಿ ಅಳವಡಿಸಲಾಗಿದೆ. ಇವುಗಳನ್ನು ಜನರು ಕಾಳಜಿಯಿಂದ ಉಪಯೋಗಿಸಬೇಕು ಎಂದರು.

ನಂತರ ನವನಗರದ ಸೆಕ್ಟರ್ ನಂಬರ್ 43ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಚರಂತಿಮಠ ಗುಣಮಟ್ಟದ ಕಾಮಗಾರಿಯಾಗದಿದ್ದರೆ ಗುತ್ತಿಗೆದಾರರ ಮೇಲೆ ಹಾಗೂ ಸಂಬಂಸಿದ ಅಧಿಕಾರಿಗಳ ಮೇಲೆಯೂ ಕ್ರಮ ಜಥಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಜಿ.ಎನ್ ಪಾಟೀಲ್, ಸಿ.ವಿ ಕೋಟಿ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಮುಖಂಡರಾದ ರಾಜು ರೇವಣಕರ, ಹಿರಾಲಾಲ್ ಗೌಡ, ಶ್ರೀಹರಿ ಟಿಕಾರೆ ,ಶಿವಲೀಲಾ ಪಟ್ಟಣಶೆಟ್ಟಿ ,ಅಶೋಕ್ ಮಾಂಡಗಿ ,ಘನಶ್ಯಾಮ ಧರಕ್, ದ್ವಾರಕಾ ರಾಟಿ ಸೇರಿದಂತೆ ಇತರರು ಇದ್ದರು.

EndFragment