ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ರಾಮಥಾಳ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ಅಮರಾವತಿ, ರಾಮಥಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಗಳ ತಂಡ ಹಾಗೂ ಕೃಷಿ ವಿಜ್ಞಾನಿಗಳಿಂದ ಬುಧವಾರ ತೊಗರಿ ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿತು.
ಅತೀ ಹೆಚ್ಚು ಸುರಿದ ಮಳೆಯಿಂದ ತೊಗರಿ ಬೆಳೆಗೆ ಬರುವ ಕೀಟ ಮತ್ತು ರೋಗಗಳ ಮುಂಜಾಗೃತ ನಿರ್ವಹಣಾ ಕ್ರಮಗಳ ಕುರಿತು ತಂಡವು ಪರಿಶೀಲಿಸಿ ಮಾಹಿತಿ ನೀಡಿದರು.
ಕಳೆದ ಒಂದು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬಹಳಷ್ಟು ತೊಗರಿ ಬೆಳೆಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ತೊಗರಿ ಬೆಳೆಯು ಸಿಡಿ/ಸೊರಗು ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗೃತ ಕ್ರಮವಾಗಿ ಹೊಲದಲ್ಲಿ ನಿಂತ ನೀರು ಚನ್ನಾಗಿ ಬಸಿದು ಹೋಗುವಂತೆ ಮಾಡಬೇಕು. ಒಂದು ವೇಳೆ ಬಾಧೆಗಳೊಗಾದ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದ ಹಾನಿಯನ್ನು ತಪ್ಪಿಸಲು ಅಗತ್ಯವಾದ ಔಷಧಿ ಸಿಂಪರಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಅರ್ಜುನ್ ಹಲಗತ್ತಿ, ಸಹಯಾಕ ಕೃಷಿ ನಿರ್ದೇಶಕ ಎ.ವಿ.ತಿರಕನ್ನವರ, ವಿನೋದ ಮಾವರಕರ, ಪ್ರೀತಿ ತೇಲಿ, ಆರ್.ಎಂ.ಕಾಂಟ್ರೆಕ್ಟರ್ ಮತ್ತು ಇತರೆ ಕೃಷಿ ಅಧಿಕಾರಿಗಳು ಇದ್ದರು.