ಬಾಗಲಕೋಟೆ: ದೇಶದಲ್ಲಿಯೆ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗೀನಾಟ ಮೊದಲ ದಿನ ಮಂಗಳವಾರ ಅದ್ದೂರಿಯಾಗಿ ಆರಂಭವಾಗಿದ್ದು, ಕೋಟೆನಗರಿ ಸಂಭ್ರಮದಲ್ಲಿ ತೆಲುವಂತೆ ಮಾಡಿತು. ಆದರೇ ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ಎನ್ನುವ ಭಾಸ ವ್ಯಕ್ತವಾಯಿತು.
ಮೊದಲ ದಿನದ ಕಿಲ್ಲಾಗಲ್ಲಿಯ ರಂಗೀನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿತು. ಮಹಿಳೆಯರು, ಮಕ್ಕಳು, ಯುವಕರು ಬಣ್ಣದೋಕುಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಜನದಟ್ಟನೆ ಪ್ರದೇಶಗಳಲ್ಲಿ ಓಕುಳಿ ಆಡಿ ಯುವಕರು ಸಂಭ್ರಮಿಸಿದರು.
ರಂಗೀನ ಆಟದ ಪರಿಣಾಮ ಇಡೀ ಬಾಗಲಕೋಟೆ ವ್ಯಾಪಾರ ವಹಿವಾಟು ಸ್ವಯಂ ಘೋಷಿತ ಬಂದ್‌ನಂತೆ ಕಾಣಿಸಿತು. ಬಸ್ ನಿಲ್ದಾಣ, ರೈಲು ನಿಲ್ದಾನ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆಳಗ್ಗಯಿಂದ ಮಕ್ಕಳು ಹಲಿಗೆ ಬಾರಿಸುವುದು ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಆದರು ಸಹ ಹೇಳಿಕೊಳ್ಳುವ ಮಟ್ಟಿಗೆ ಬಣ್ಣದ ಬಂಡಿಗಳು ಜಮಾವಣೆಯಾಗಲಿಲ್ಲ. ಇನ್ನು ಬಂಡಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಪ್ರಮುಖ ರಸ್ತೆಗಳಲ್ಲಿ ಓಕುಳಿಯಾಡುತ್ತ ಜನರನ್ನು ರಂಜಿಸಿದರು.
ಬಸವೇಶ್ವರ ವೃತ್ತ ಹಾಗೂ ಕಾಲೇಜು ವೃತ್ತದಲ್ಲಿ ಬಂಡಿಗಳ ಜೊತೆಗೆ ನೂರಾರು ಯುವಕರು ಸೇರಿಕೊಂಡು ಪ್ರದೇಶವನ್ನು ಕಲರ್‌ಫುಲ್ ಮಾಡಿದರು. ಪರಸ್ಪರ ಬಣ್ಣದ ನೀರು ಎರೆಚುತ್ತ ಸಂಭ್ರಮಿಸಿದರು. ಸಡಗರದಲ್ಲಿ ಹಲಿಗೆ ಸಪ್ಪಳವೂ ಸೇರಿಕೊಂಡು ಹಬ್ಬದ ರಂಗೇರಿತು. ವಿವಿಧ ಬಡಾವಣೆಗಳಲ್ಲಿ ಯುವತಿಯರು ಪರಸ್ಪರ ಗುಲಾಲ್ ಎರಚಿ ಹಬ್ಬಕ್ಕೆ ಕಳೆ ತಂದರು. ವಿಭಿನ್ನ ವೇಷ, ಪೋಷಾಕು ಧರಿಸಿದ್ದ ಯುವಕರು ನಾನಾ ರೀತಿಯ ನಟನೆ ಮಾಡುತ್ತಾ ಗಮನ ಸೆಳೆದರು. ಬಣ್ಣದ ಬಂಡಿಗಳ ಜೊತೆ ಕೇಕೇ ಹಾಕುತ್ತಾ ಯುವಕರು ಸಾಗಿದರು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಮೊದಲ ದಿನ ಕೋಟೆನಗರಿ ರಂಗೀನಾಟ ನೋಡುಗರನ್ನು ಸೆಳೆಯಿತು.
ಇಂದು ಬಣ್ಣದ ಬಂಡಿಗಳ ಸಮಾಗಮ
ಮಾ.11 ರಂದು 2ನೇ ದಿನ ಬಣ್ಣದ ರಂಗು ಮತ್ತಷ್ಟು ಎಂಗು ಪಡೆಯಲಿದೆ. ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಬಣ್ಣದೋಕುಳಿ ನಡೆಯಲಿದೆ. ಓಣಿಗಳಲ್ಲಿ ಓಕುಳಿ ಆಡಿದ ನಂತರ ಬಣ್ಣದ ಬಂಡಿಗಳು ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದ ವರೆಗೆ ಎದುರು ಬದುರು ಸಮಾಗಮಗೊಳ್ಳಲಿವೆ. ಪರಸ್ಪರ ಬಣ್ಣ ಎರೆಚುವ ಮೂಲಕ ಹಬ್ಬದ ರಂಗು ಮತ್ತೇರುವಂತೆ ಮಾಡುತ್ತಾರೆ. ಆಕರ್ಷಕವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ರಸ್ತೆಯ ಎಡಬದಿಯಲ್ಲಿ ಗುಂಪು ಗುಂಪಾಗಿ ಸೇರುವ ನಿರೀಕ್ಷೆ ಇದೆ.
ಬಣ್ಣದ ಕಾರಂಜಿ
ಬಾಗಲಕೋಟೆ ಹೋಳಿ ಆಚರಣಾ ಸಮಿತಿ ‘ನಮ್ಮೂರು ನಮ್ಮ ರಂಗು’ ಎಂಬ ಘೊಷಣೆ ಅಡಿಯಲ್ಲಿ ವಿನೂತನವಾಗಿ ಹೋಳಿ ಆಚರಣೆ ಮಾಡಲಾಗುತ್ತಿದೆ. ಎರಡನೇ ದಿನ ಬುಧವಾರ ಬಸವೇಶ್ವರ ವೃತ್ತದಲ್ಲಿ ಬಣ್ಣದ ಕಾರಂಜಿ ಮತ್ತು ಡಿಜೆ ಸೌಂಡ ಹಲಗೆ ನಿನಾದ ಜೊತೆ ಮೇಳೈಸಲಿವೆ. ಕೃತಕ ಮಳೆಯಲ್ಲಿ ಯುವಕರು ಬಣ್ಣದೋಕುಳಿಯಲ್ಲಿ ಮಿಂದೆಳಲಿದ್ದಾರೆ.
EndFragment