ಬಾಗಲಕೋಟೆ: 2020-21ನೇ ಸಾಲಿನ ಶೈಕ್ಷಣಿಕ ವಂತಿಗೆ ಶುಲ್ಕವನ್ನು ಸಂಪೂರ್ಣ ರಿಯಾಯ್ತಿ ಮಾಡುವಂತೆ ಒತ್ತಾಯಿಸಿ ನಗರದ ಸೇಂಟ್ ಆ್ಯನೀಸ್ ಲಾಯನ್ಸ್ ಸ್ಕೂಲಿನ ವಿದ್ಯಾರ್ಥಿಗಳ ಪಾಲಕರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಪಾಲಕರು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮೂಲಕ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಎಲ್.ಕೆ.ಜಿ., ಯುಕೆಜಿ, ಮತ್ತು 1ನೇ ತರಗತಿಯಿಂದ 8ನೇ ತರಗತಿಯವರೆಗೆ ಮಕ್ಕಳು ಓದುತ್ತಿದ್ದು, ಈಗ ಶಾಲೆ ಆರಂಭವಾಗದೇ ಇದ್ದರೂ ಶಾಲಾ ಮುಖ್ಯಸ್ಥರು ಶುಲ್ಕವನ್ನು ಭರಿಸಬೇಕು ಎಂದು ಪದೇ ಪದೇ ಹೇಳುತ್ತಿದ್ದಾರೆ. ಹೀಗಾಗಿ ಶುಲ್ಕದಲ್ಲಿ ಸಂಪೂರ್ಣ ರಿಯಾಯ್ತಿ ಮಾಡಬೇಕು ಎಂದು ಮಕ್ಕಳ ಪಾಲಕರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಂಪ್ಯೂಟರ ಫೀ, ಡೆವಲಪ್‌ಮೆಂಟ್ ಫೀ, ಕೋ ಸರಕ್ಯೂಲರ್ ಫೀ ಮತ್ತು ಪರೀಕ್ಷಾ ಫಿಯನ್ನು ಶಾಲಾ ಪ್ರಾರಂಭವಾಗದೇ ಭರಣಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಲಾಕ್‌ಡೌನ್ ನಿಂದ ವ್ಯಾಪಾರ ವಹಿವಾಟು ನಿಂತು ಹೋಗಿದೆ. ದುಡಿಯುವ ಕೈಗಳಿಗೆ ಸರಿಯಾಗಿ ಕೆಲಸ ಕೂಡ ದೊರೆಯುತ್ತಿಲ್ಲ. ಹೀಗಾಗಿ ಕೈಯಲ್ಲಿ ದುಡ್ಡಿಲ್ಲದೇ ಪರಿತಪಿಸುವಂತ ಸ್ಥಿತಿ ಇರುವಾಗ ಸೇಂಟ್ ಆ್ಯನೀಸ್ ಲಾಯನ್ಸ್ ಸ್ಕೂಲಿನ ಮುಖ್ಯಸ್ಥರು ಶಾಲಾ ಶಿಕ್ಷಕರ ಮೂಲಕ ವಾಟ್ಸ್‌ಪ್ ಮೆಸೇಜ್ ಮೂಲಕ ಮೇಸೇಜ್ ಹಾಕಿ ಫೀ ತುಂಬಬೇಕು ಎಂದು ಹೇಳುತ್ತಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ಮಧ್ಯಪ್ರವೇಶ ಮಾಡಿ ಶುಲ್ಕದಲ್ಲಿ ರಿಯಾಯ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಮಂಜುನಾಥ ರೋಖಡೆ, ರಾಜಕುಮಾರ ಬಿಸನಾಳ, ಸಂತೋಷ ಲೋಹಿಯಾ, ಯೋಗೇಶ ಅವತಾಣ, ರಾಜು ಪಾಟೀಲ, ಮೋಹನ್ ಚವ್ಹಾಣ, ಶಿವಾನಂದ ಕೋಟಿ, ಗಿರೀಶ ಹೊಸಮನಿ, ಎಸ್.ವಿ.ಸಂಗಮ್, ಎನ್.ಬಿ.ಕುಮಾರ, ಎ.ಎಚ್.ಬಂಕೂರ, ಎಸ್.ಎ.ಬೋರಿ, ಎಸ್.ಎನ್.ಜಾಧವ, ಎಸ್.ಎಸ್.ಇಂಡಿಕರ, ಆರ್.ಎನ್.ಪವಾರ, ಎಸ್.ಎಸ್.ಮಿಸಕಿನ್, ಪರಶುರಾ, ಗಬ್ಬೂರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
EndFragment