ಜಿಲ್ಲೆ

ಮನೆ ಬಾಗಿಲಿಗೆ ಅಗತ್ಯ ವಸ್ತುಗಳು

ಬಾಗಲಕೋಟೆ: ಬಾಗಲಕೊಟೆಯ 7ನೇ ವಾರ್ಡ್‌ನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿರುವ ಹಿನ್ನೆಲೆ ನಗರದ 5 ರಿಂದ 14 ವಾರ್ಡ್‌ಗಳನ್ನು ಕಂಟೋನ್ಮೆಂಟ್ ರೆನ್ ಎಂದು ಗುರುತಿಸಲಾಗಿದೆ. ಹೀಗಾಗಿ ಸಾರ್ವಜನಿಕರ ಚಲನವಲನ ನಿಷೇಧಿಸಿ ಕರ್ಫೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

ಸಾರ್ವಜನಿಕರು ಅನಗತ್ಯವಾಗಿ ಓಡಾಡದೇ ದೈನಂದಿನ ಜೀವನಕ್ಕೆ ಬೇಕಾಗುವ ತರಕಾರಿ, ಹಣ್ಣು, ಹಾಲು ಮತ್ತು ಕಿರಾಣಿ ಮತ್ತು ಔಷಧಗಳನ್ನು ಮನೆಯ ಬಾಗಿಲಿಗೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ವಿವಿಧ ಇಲಾಖೆ ಮುಖ್ಯಸ್ಥರು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ. ಮನೆಯಲ್ಲಿಯೇ ಇದ್ದು ಅವರಿಗೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೇವಾನಿರತ ಸಿಬ್ಬಂದಿ
ತರಕಾರಿ, ಹಣ್ಣು ಹಂಪಲ ಸೇವೆಗೆ: ಕೃಷಿ ಇಲಾಖೆಯ ಪಾಂಡಪ್ಪ ಲಮಾಣಿ (9448339627), ತೋಟಗಾರಿಕೆ ಇಲಾಖೆಯ ಸುಭಾಸ ಸುಲ್ಪಿ (9845896489), ಎಪಿಎಂಸಿ ರವಿ ರಾಠೋಡ (9164799969), ತರಕಾರಿಗಾಗಿ ರವಿ ಕುಮಟಗಿ (9343110009), ಆಕಾಶ ನಾಯಕ (9986259607).

ಹಾಲು ವಿತರಕರು: ಕಲಾದಗಿ ಕಂದಾಯ ನಿರೀಕ್ಷಕರು (9148571940), ಕೆ.ಎಂ.ಎ್. ಡಾ.ಪಾಟೀಲ (9591999469). ಪಡಿತರ ವಿತರಕರು: ಆಹಾರ ಶಿರಸ್ತೆದಾರ್ ಎಸ್.ಪಿ.ಬಗಲಿ (9448392146), ಆಹಾರ ನಿರೀಕ್ಷಕ ಎಂ.ಎಂ. ಕರಡಿ (9986099776), ಜೆ.ಎನ್.ಮಹಾರಾಜನವರ (6360693226).

ಕಿರಾಣಿ ವಿತರಕರು: ಕಾಸಟ್ ಸ್ಟೋರ್ (9945502371), ವೀರಭದ್ರೇಶ್ವರ ಕಿರಾಣಿ ಸ್ಟೋರ್ಸ್‌ (8867186778), ತೋಸ್ನಿವಾಲಾ (9448129593, 7411420450), ಸಂಗಮೇಶ ಕಿರಾಣಿ ಸ್ಟೋರ್ಸ್‌, ಬಾಗಲಕೋಟೆ (9740291067).

ಔಷಧ ವಿತರಕರು : ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ. ಹುಬ್ಬಳ್ಳಿ (6361367737, 9449843186), ಅಶ್ವಿನಿ ಡ್ರಗ್ಸ್ ಏಜೆನ್ಸಿ, ಬಾಗಲಕೋಟೆ (9449815112) ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಕಂಟೋನ್ಮೆಂಟ್ ರೆನ್
ಈ ಪ್ರದೇಶವನ್ನು ಕಂಟೋನ್ಮೆಂಟ್ ರೆನ್ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಸಾರ್ವಜನಿಕರ ಚಲನವಲನ ಸಂಪೂರ್ಣ ನಿಷೇಧಿಸಲಾಗಿದೆ. ದ್ವಿಚಕ್ರ ವಾಹದನಲ್ಲಿ ಅನಗತ್ಯವಾಗಿ ಪ್ರಯಾಣಿಸಿದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ವಯೋ ವೃದ್ಧರು, ಚಿಕ್ಕಮಕ್ಕಳು ಮನೆ ಬಿಟ್ಟು ಹೊರಗೆ ಬರುವಂತಿಲ್ಲ ಎಂದು ತಹಸೀಲ್ದಾರ್ ಜಿ.ಎಸ್. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡಿತರ, ಕಿರಾಣಿ, ಹಾಲು, ಹಣ್ಣು, ತರಕಾರಿಗಳಿಗೆ ವಿತರಣಾ ಸಿಬ್ಬಂದಿಗೆ ಕರೆ ಮಾಡಿದಲ್ಲಿ ತಮ್ಮ ಮನೆಯ ಬಾಗಿಲಿಗೆ ತಲುಪಿಸಲಿದ್ದಾರೆ. ಮೆಡಿಕಲ್ ಸೌಲಭ್ಯ, ಔಷಧಗಳನ್ನು ಸಹ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗುಂಪು ಕೂಡುವುದಾಗಲಿ, ಇಬ್ಬರು ಜತೆಗಾಗಿ ತಿರುಗಾಡಿದ್ದು ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಕರ್ತವ್ಯ ನಿರತ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಯಾವುದೇ ದಾನ ಮಾಡಿದ ಪದಾರ್ಥಗಳನ್ನು ಸೇವಿಸಬಾರದು. ಯಾವುದೇ ರೀತಿಯ ಆತಂಕ ಬೇಡ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

EndFragment