ಜಿಲ್ಲೆ

ಬ್ಯಾಂಕ್ ವ್ಯವಹಾರದ ಮೇಲೆ ಕೋವಿಡ್ ಪರಿಣಾಮ

ಬಾಗಲಕೋಟೆ : ಕೋವಿಡ್ ಜನರ ಬದುಕು ತಲ್ಲಣಗೊಳಿಸಿದೆ. ಅದರಲ್ಲೂ ಬ್ಯಾಂಕ್‌ನ ಆರ್ಥಿಕ ವ್ಯವಹಾರಕ್ಕೆ ಸಮಸ್ಯೆ ಉಂಟು ಮಾಡಿದೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿ ಆವರಣದ ಬಸವ ಕಲಾ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವೇಶ್ವರ ಬ್ಯಾಂಕ್‌ನ 103ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಬಸವೇಶ್ವರ ಬ್ಯಾಂಕ್ ಆಧುನಿಕ ತಂತಜ್ಞಾನದ ಎಲ್ಲ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಎಲ್ಲ ಶಾಖೆಗಳಿಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊಂದುವ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಬಸವೇಶ್ವರ ಬ್ಯಾಂಕ್ ಹೊಂದಿದೆ. ಇದೀಗ ಬ್ಯಾಂಕ್‌ನಲ್ಲಿ ನೂತನವಾಗಿ ಯುಪಿಐ ಹಣ ವರ್ಗಾವಣೆಯ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾಲ ವಸೂಲಿ ಆರ್ಥಿಕ ವ್ಯವಹಾರಕ್ಕೆ ಸಮಸ್ಯೆಯಾಗಿದೆ. ಸಾಲ ವಸೂಲಿ ಹಿನ್ನಡೆಯಾಗಿ ನಿಷ್ಕ್ರಿಯ ಸಾಲ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಸಿ.ಟಿ. ಪಾಟೀಲ, ಎಚ್.ಎಸ್.ರಾಠೋಡ, ವಿ.ವಿ. ಶಿರಗಣ್ಣವರ, ಎಸ್.ಸಿ.ಆರಬ್ಬಿ, ವಿ.ವಿ.ಕಲಬುರ್ಗಿ, ಎಸ್.ಟಿ.ಬಳ್ಳಾರಿ, ಬಿ.ಎಂ. ಈಟಿ, ಎಸ್.ಎಸ್. ಕಂಕಣಮೇಲಿ, ಆರ್.ವೈ. ಪಟ್ಟಣದ, ಎಸ್.ಎಸ್. ಜಿಗಳೂರ, ಎಸ್.ಎಸ್.ಗೋಡಿ, ಎನ್.ಎ್.ಪಲ್ಲೇದ, ಎಸ್.ಎಸ್. ಜಂಗಿ, ಜೆ.ಸಿ.ಅಬ್ದುಲಪುರ, ಯು.ಎಸ್.ಜಿಗಜಿನ್ನಿ, ಎನ್.ಆರ್. ಕುಲಕರ್ಣಿ, ಐ.ಎಸ್. ನಾವಲಗಿ ಉಪಸ್ಥಿತರಿದ್ದರು. ಸಂಜಯ ನಡುವಿನಮನಿ, ಬಿ.ಜಿ.ಹೊನವಾಡ ನಿರೂಪಿಸಿದರು. ಸಂತೋಷ ಗದ್ದನಕೇರಿ ಸಂಗೀತ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ನ ಚುನಾವಣೆಯಲ್ಲಿ ಜಯಗಳಿಸಿದ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ವ್ಯವಸ್ಥಾಪಕ ವಿವೇಕಾನಂದ ಕೇಮಾಳಿ, ಅಧಿಕಾರಿಗಳಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ವಿಜಯಕುಮಾರ ದೊಡಮನಿ, ವಿ.ಎಂ.ಹಿರೇಮಠ, ವೆಂಕಟೇಶ ರಾಠೋಡ, ಎಂ.ಬಿ.ಮೋಟಗಿ, ಪಿ.ಎನ್. ಹಳ್ಳಿಕೇರಿ, ಎಸ್.ವಿ.ಹುಬ್ಬಳ್ಳಿ, ಮಹಾಬಳೇಶ್ವರ ಗುಡಗುಂಟಿ ವಿಷಯಗಳನ್ನು ಮಂಡಿಸಿ ಒಪ್ಪಿಗೆ ಪಡೆದರು.

ಕರೊನಾ ಸೇನಾನಿಗಳಿಗೆ ಸನ್ಮಾನ
ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವಿವಿಧ ಇಲಾಖೆಗಳ ತಲಾ ಐವರು ಕರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾ ಚೇತನ ಯೋಜನೆಯಡಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಆನಂದ ಮ. ಹೊಸಮನಿ, ದ್ವಿತೀಯ ಸ್ಥಾನ ಪಡೆದ ವೇದಾ ಹುನಗುಂಡಿ, ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಕನ್ಯಾ ಬಿಜ್ಜಳ, ವಿಜ್ಞಾನ ವಿಭಾಗದಲ್ಲಿ ಚೇತನ ಕಾ.ಸಿದ್ದಾಪುರ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಹನಾ ವಜ್ಜರಮಟ್ಟಿ ಹಾಗೂ ನೀಲ್ ಆರ್.ಸೋನಿ, ಬಿಎ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಅಕ್ಷತಾ ಗಿರಿಸಾಗರ, ಬಿಎಸ್‌ಸಿ ಪದವಿಯಲ್ಲಿ ಭೂಮಿಕಾ ಚಿಂಡಖಂಡಿ ಮತ್ತು ಬಿಕಾಂ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ದಾನೇಶ ಶಿರಹಟ್ಟಿ ಅವರನ್ನು ಗೌರವ ಧನ ನೀಡಿ ಸನ್ಮಾನಿಸಲಾಯಿತು. ಜತೆಗೆ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಎಚ್. ಕಳ್ಳಿಗುಡ್ಡ, ಐ.ಸಿ. ಅಂಗಡಿ, ಎಸ್.ಎಂ.ಯಳ್ಳಿಗುತ್ತಿ, ಎಸ್.ಎಸ್. ನಾರಾ, ಬಿ.ಎನ್. ರಕ್ಕಸಗಿ ಅವರನ್ನು ಗೌರವಿಸಲಾಯಿತು.