ಕೆ.ನೀಲಮ್ಮ 
ಜಿಲ್ಲೆ

ಬಾಗಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕೆ.ನೀಲಮ್ಮ ಅವಿರೋಧ ಆಯ್ಕೆ

ಹರಪನಹಳ್ಳಿ: ತಾಲೂಕಿನ ಬಾಗಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕೆ.ನೀಲಮ್ಮ ಮಂಗಳವಾರ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷೆ ಬಡಮ್ಮನವರ ನಾಗರಾಜ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೀಲಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ ಅವಿರೋಧ ಆಯ್ಕೆ ಘೋಷಿಸಿದರು. ಒಟ್ಟು 16 ಸದಸ್ಯರ ಪೈಕಿ 13 ಜನ ಸದಸ್ಯರು ಹಾಜರಿದ್ದರು.

ಕೆ.ನೀಲಮ್ಮ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ಬಿ.ಹೊಸೂರಪ್ಪ, ಚಿಕ್ಕಳ್ಳಿ ನಾಗಣ್ಣ, ಉಪಾಧ್ಯಕ್ಷೆ ಗೀತಮ್ಮ, ಸದಸ್ಯರಾದ ಕೆ.ನಾಗರಾಜ, ಪೂಜಾರ ಹನುಮಂತಪ್ಪ, ರೇಣುಕಮ್ಮ, ಕರಿಯಮ್ಮ, ಕೊಟ್ರಮ್ಮ, ಹಸಿನಾಬಿ, ಮರಿಯಮ್ಮ, ಎನ್.ಮಂಜುನಾಥ್, ಶಿವರಾಮಪ್ಪ, ಬಸವರಾಜ, ಚಿನ್ನಪ್ಪ, ವೀರೇಶ್, ಬಸವಲಿಂಗನಗೌಡ, ಬಣಕಾರ ಮಂಜುನಾಥ್, ಬಡಿಗೇರ ಈರಣ್ಣ, ಚಿಕ್ಕಹಳ್ಳಿ ಮಂಜಣ್ಣ, ಕೋಡಿಹಳ್ಳಿ ರೇವಣ್ಣ, ಆಶಾ ಸಿ.ಪಿ.ಮಂಜುನಾಥ್, ಸಿ.ಪಿ.ಚಿದಾನಂದ ಕೊಟ್ರೇಶ್, ಗಾಂಧಿ, ಬಸವನಗೌಡ, ವೆಂಕಟೇಶ್, ಶಶಿ, ನಿಂಗಪ್ಪ, ಭರ‌್ಮಜ್ಜ, ಶರೀಫ್ ಇತರರಿದ್ದರು.