ಮೇಲುಕೋಟೆ ಕ್ಷೇತ್ರದೈವ ಬದರೀ ನಾರಾಯಣಸ್ವಾಮಿ ಜಯಂತ್ಯುತ್ಸವ ಪ್ರಯುಕ್ತ ಬುಧವಾರ ವಿಶೇಷ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಬದರೀನಾರಾಯಣಸ್ವಾಮಿ ಜಯಂತ್ಯುತ್ಸವ

ಮಾದೇಶ್ ತಿ.ನರಸೀಪುರ

ಮೇಲುಕೋಟೆ: ದಕ್ಷಿಣ ಬದರೀಕಾಶ್ರಮ ಮೇಲುಕೋಟೆಯಲ್ಲಿ ಬದರೀನಾರಾಯಣಸ್ವಾಮಿ ಜಯಂತ್ಯುತ್ಸವ ಹಸ್ತನಕ್ಷತ್ರದ ಶುಭದಿನವಾದ ಬುಧವಾರ ವೈಭವದಿಂದ ಜರುಗಿತು.

ಚೆಲುವನಾರಾಯಣಸ್ವಾಮಿ ದೇವಾಲಯಕ್ಕಿಂತ ಪುರಾತನವಾದ ಮೇಲುಕೋಟೆಯ ಕ್ಷೇತ್ರದೈವ ಶ್ರೀ ಬದರೀನಾರಾಯಣಸ್ವಾಮಿಗೆ ಬೆಳಗ್ಗೆ ವೇದಮಂತ್ರ ಹಾಗೂ ಮಂಗಳವಾದ್ಯದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ಬೃಹತ್‌ಎಲಚಿ ವೃಕ್ಷದ ಕೆಳಭಾಗದಲ್ಲಿ ಅರವಿಂದವಲ್ಲಿ ಸಮೇತನಾಗಿ ವಿರಾಜಮಾನನಾದ ಬದರೀನಾರಾಯಣನಿಗೆ ಬೆಳಗ್ಗೆ ಅಭಿಷೇಕ ನೆರವೇರಿಸಲಾಯಿತು.

ಮಧ್ಯಾಹ್ನ ಪ್ರಬಂಧ ಪಾರಾಯಣದೊಂದಿಗೆ ಶಾತ್ತುಮೊರೈನೊಂದಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಮಾಡಲಾಯಿತು. ಅರ್ಚಕ ಹಾಗೂ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.