ಬಾಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಡರಹಳ್ಳಿ ಬಿ.ಕೆ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ಶಿವಣ್ಣ, ಮೂಡನಹಳ್ಳಿ ಚಂದ್ರಣ್ಣ, ಕುಂಬಾರಹಳ್ಳಿ ರಮೇಶ್, ಲಕ್ಷ್ಮಣ್ ಇತರರು ಇದ್ದರು.  
ಜಿಲ್ಲೆ

ಬ್ಯಾಡರಹಳ್ಳಿ ಬಿ.ಕೆ.ಶ್ರೀನಿವಾಸ್ ಅಧ್ಯಕ್ಷ

ಲೋಕೇಶ್ ಮನು. ಡಿ

ಬಾಗೂರು: ಬಾಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಬಿ.ಕೆ.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಶಿವಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಬಿ.ಕೆ.ಶ್ರೀನಿವಾಸ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಡಿ.ಲೀಲಾ ಅವಿರೋಧ ಆಯ್ಕೆ ಪ್ರಕಟಿಸಿದರು. ಉಪಾಧ್ಯಕ್ಷ ಎಂ.ಎನ್. ಕೃಷ್ಣೇಗೌಡ, ಸದಸ್ಯರಾದ ಕೇಶವೇಗೌಡ, ತಿಮ್ಮಮ್ಮ, ಪುಟ್ಟಯ್ಯ, ಡಿ.ಎನ್. ನಾಗರಾಜ್, ಸತೀಶ್, ಸವಿತಾ, ರಂಗಸ್ವಾಮಿ, ಬಿ.ಟಿ.ಮಹೇಶ್, ಮುಖಂಡರಾದ ರಮೇಶ್, ಲಕ್ಷ್ಮಣ್, ರಾಮಚಂದ್ರು, ಚಂದ್ರಣ್ಣ, ಬಾಲರಾಜು, ಕಾಂತರಾಜು, ಬಸವರಾಜು, ಎಸ್.ಕೆ.ಅಭಿಲಾಶ್,ಆನಂದ್, ರಮೇಶ್, ರೇಣುಕಾ ಪ್ರಸನ್ನ ಇತರರು ಇದ್ದರು.\