ಜಿಲ್ಲೆ

ತರಕಾರಿ ತುಂಬಿದ್ದ ಈಚರ್ ಪಲ್ಟಿ

reportermys

ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಮುಂಭಾಗ ಗುರುವಾರ ಈಚರ್ ಪಲ್ಟಿಯಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತರಕಾರಿ ತುಂಬಿದ್ದ ಈಚರ್ ಲಾರಿ ಮೈಸೂರಿನಿಂದ ಚಾಮರಾಜನಗರ ಕಡೆಗೆ ವೇಗವಾಗಿ ಬರುತ್ತಿದ್ದಾಗ ಬದನಗುಪ್ಪೆ ಬಳಿ ಮಗುಚಿ ಬಿದ್ದಿದೆ. ಆಗ ತಾನೆ ಮಳೆ ಬಿದ್ದಿದ್ದರಿಂದ ಚಾಲಕ ಬ್ರೇಕ್ ಹಾಕಿದಾಗ ಲಾರಿ ಪಲ್ಟಿಯಾಗಿದೆ. ಸ್ಥಳದಲ್ಲಿ ಹೊಂಗೆ ಮರ ಇದ್ದುದ್ದರಿಂದ ಲಾರಿ ಮುಂದಕ್ಕೆ ಬೀಳದಂತೆ ತಡೆದಿದೆ. ಇಲ್ಲದಿದ್ದರೆ ಪ್ರಾಣಹಾನಿ ಸಂಭವಿಸುತ್ತಿದ್ದವು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.