ಉಮೇಶ ಭಿಕ್ಷಾವತಿಮಠ
ಬಾದಾಮಿ: ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ತಾಲೂಕಿನ ಜಾಲಿಹಾಳ ಗ್ರಾಮದ ಹತ್ತಿರವಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ವಿಲತೆಯಿಂದಾಗಿ ಏಳು ಗ್ರಾಮಗಳು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದ ಬೇಲೂರ-ಜಾಲಿಹಾಳ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಇಲ್ಲದಂತಾಗಿದೆ. ಕೊಳವೆ ಬಾವಿ ಕೊರೆಯಿಸಿದರೆ ಪ್ಲೋರೈಡ್ ನೀರು ಬರುತ್ತಿದ್ದು, ಅವು ಕುಡಿಯಲು ಯೋಗ್ಯವಿಲ್ಲದಂತಾಗಿದೆ.
ಏಳು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 2008-09 ರಲ್ಲಿ ಬಹುಗ್ರಾಮ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಬೃಹತ್ ಮೇಲ್ಮಟ್ಟದ ಜಲಸಂಗ್ರಹಾಗಾರ (ನೀರಿನ ಓವರ್ ಹೆಡ್ ಟ್ಯಾಂಕ್), ಪಂಪ್‌ಹೌಸ್ ಮತ್ತು ಸ್ಲೇಟಿಂಗ್ ಟ್ಯಾಂಕ್ ನೀರು ಶುದ್ಧೀಕರಣಕ್ಕೆ ಒಂದು ಘಟಕ ನಿರ್ಮಾಣ ಮಾಡಿ ಪಕ್ಕದಲ್ಲಿಯೇ ಒಂದು ವಿಶಾಲವಾದ ಕೆರೆ ನಿರ್ಮಾಣ ಮಾಡಿ ಮಲಪ್ರಭಾ ನದಿಯಿಂದ ನೀರು ತುಂಬಿಸಿ ಗ್ರಾಮಗಳಿಗೆ ನೀರು ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಹತ್ತು ವರ್ಷಗಳು ಕಳೆದರೂ ಹನಿ ನೀರು ಬಂದಿಲ್ಲ. ಕುಡಿಯಲು ಪ್ಲೋರೈಡ್ ನೀರೇ ಗತಿಯಾಗಿದೆ ಎಂದು ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದರು.
ಮಲಪ್ರಭಾ ನದಿ 5-6 ಕಿ.ಮೀ. ಅಂತರದಲ್ಲಿಯೇ ಇದ್ದರೂ ನದಿ ನೀರಿನಿಂದ ಕೆರೆ ತುಂಬಿಸದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೆರೆ ತುಂಬಿಸಿ ಅದರಲ್ಲಿ ಸಂಗ್ರಹವಾದ ನೀರನ್ನು ಶುದ್ಧೀಕರಿಸಿ ಗ್ರಾಮಗಳಿಗೆ ಸರಬರಾಜು ಮಾಡಿ ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.
ಜಾಲಿಹಾಳ-ಬೇಲೂರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕೆರೆ ನಿರ್ಮಾಣವಾಗಿದೆ. ಜಾಕ್‌ವೆಲ್ ಜೋಡಿಸಲಾಗಿದೆ. ಕೆರೆಗೆ ನೀರು ತುಂಬಿಸಿ ಜನರಿಗೆ ಕುಡಿಯುವ ನೀರು ಕೊಡಿ ಎಂದು ಕೇಳಿದರೆ ಅಧಿಕಾರಿಗಳು ಉಡಾೆ ಉತ್ತರ ನೀಡುತ್ತಾರೆ.
ಶಾಂತಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಾಲಿಹಾಳ
ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದೆ ಪ್ಲೋರೈಡ್‌ಯುಕ್ತ ನೀರು ಕುಡಿಯುವಂತಾಗಿದೆ. ನೀರು ಹಂಚಿಕೆ ಯೋಜನೆಗಳ ಅನುಷ್ಠಾನ ಕೊರತೆಯಿಂದ ಬಳಲುತ್ತಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಭಾರಿ ಮಳೆಯಾಗಿದೆ. ಆದರೂ 7 ಗ್ರಾಮಗಳಿಗೆ ಬಹಳಷ್ಟು ನೀರಿನ ತೊಂದರೆಯಾಗಿದೆ. ಕೂಡಲೇ ಅಧಿಕಾರಿಗಳು ಗಮನಹರಿಸಿ ಕೆರೆ ತುಂಬಿಸಬೇಕು.
ಸಿದ್ದನಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಾಲಿಹಾಳ
ಜಲಜೀವನ ಯೋಜನೆಯಡಿ 7 ಗ್ರಾಮಗಳಿಗೆ 2050ನೇ ಇಸ್ವಿವರೆಗೆ 247 ನೀರು ಸರಬುರಾಜು ಮಾಡಲು ಗ್ರಾಮದ ಪ್ರತಿ ಮನೆಗೂ ನಳ ಮತ್ತು ಮೀಟರ್ ಅಳವಡಿಸಲಾಗುವುದು. ಈಗಾಗಲೇ ಸರ್ವೇ ಕಾರ್ಯ ನಡೆದಿದೆ. ಈಗಿರುವ 60 ಎಚ್‌ಪಿ ಮೋಟಾರ್ ದುರಸ್ತಿ ಇರುವುದರಿಂದ 75 ಎಚ್‌ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲದೆ, ಜಾಲಿಹಾಳ ಗ್ರಾಮದ ಹತ್ತಿರವಿರುವ ಕೆರೆಗೆ ಆಲಮಟ್ಟಿಯಿಂದ ನೀರು ತುಂಬಿಸಲು ಕಾಮಗಾರಿ ಹಾಕಿಕೊಂಡಿದೆ. ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಮಣ್ಣು ಪರೀಕ್ಷೆ ಮಾಡಿಸಿ ಮುಂದಿನ ಯೋಜನೆ ಹಾಕಿಕೊಂಡಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು.
ಎನ್.ಎಸ್. ಪತಂಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಭಿಯಂತರು